ಹಾಲಿನ ಬಗ್ಗೆ ನಿಮಗೆ ಹೆಚ್ಚೇನು ಹೇಳಬೇಕಿಲ್ಲ, ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅದರಲ್ಲೂ ಇದನ್ನು ಸರಿಯಾದ ಕಾಂಬಿನೇಶನ್ ಜೊತೆ ಸೇವಿಸಿದರೆ ಆರೋಗ್ಯಕ್ಕೆ ಒಂದಲ್ಲ ಹಲವಾರು ಪ್ರಯೋಜನಗಳು ಸಿಗುತ್ತವೆ. ಈಗಾಗಲೇ ಹಾಲಿನೊಂದಿಗೆ ಅರಿಶಿನ ಸೇರಿದಂತೆ ಮುಂತಾದ ಪದಾರ್ಥಗಳನ್ನು ಸೇರಿಸಿ ಕುಡಿದಿರುತ್ತೀರಿ. ಆದರೆ ಬೆಲ್ಲದೊಂದಿಗೆ ಬೆರೆಸಿದ ಹಾಲನ್ನು ಕುಡಿಯುವುದರಿಂದ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?. ಏಕೆಂದರೆ ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದ್ದು, ಇದು ಅನೇಕ ಪೋಷಕಾಂಶಗಳ ಉಗ್ರಾಣವಾಗಿದೆ. ವಿಶೇಷವಾಗಿ ಹಾಲು ಮತ್ತು ಬೆಲ್ಲದ ಸಂಯೋಜನೆಯು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ದೇಹಕ್ಕೆ ಶಕ್ತಿಯುತವಾದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಬೆಲ್ಲದೊಂದಿಗೆ ಬೆರೆಸಿದ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಸದಾ ಲವಲವಿಕೆಯಿಂದಿರಬಹುದು. ಹಾಗಾದರೆ ಬನ್ನಿ ಬೆಲ್ಲ ಬೆರೆಸಿದ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗಲಿವೆ ನೋಡೋಣ...
29
ಜೀರ್ಣಕ್ರಿಯೆ ಸುಧಾರಣೆ
ಬೆಲ್ಲವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಹಾಲು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದಾಗಿ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
39
ಮೂಳೆಗಳನ್ನು ಬಲಪಡಿಸುತ್ತದೆ
ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಬೆಲ್ಲದಲ್ಲಿ ರಂಜಕವಿದ್ದು, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ತಡೆಗಟ್ಟುವಲ್ಲಿ ಸಹಾಯಕವಾಗಿದೆ.
49
ರಕ್ತಹೀನತೆಯಿಂದ ಪರಿಹಾರ
ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಇದು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಲಿನೊಂದಿಗೆ ಸೇವಿಸಿದಾಗ, ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆ ಸುಧಾರಿಸುತ್ತದೆ.
59
ಆಯಾಸ ಮತ್ತು ದೌರ್ಬಲ್ಯದಿಂದ ಪರಿಹಾರ
ಈ ಮಿಶ್ರಣವು ದಿನದ ಆಯಾಸ ಮತ್ತು ದೌರ್ಬಲ್ಯವನ್ನು ತೆಗೆದುಹಾಕುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುವಲ್ಲಿ ಸಹಾಯಕವಾಗಿದೆ.
69
ನಿದ್ರೆಯನ್ನು ಸುಧಾರಿಸುತ್ತದೆ
ರಾತ್ರಿ ಮಲಗುವ ಮುನ್ನ ಬೆಲ್ಲದ ಹಾಲು ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ. ಏಕೆಂದರೆ ಇದರಲ್ಲಿ ಟ್ರಿಪ್ಟೊಫಾನ್ ನಂತಹ ಅಮೈನೋ ಆಮ್ಲಗಳಿವೆ.
79
ರೋಗನಿರೋಧಕ ವ್ಯವಸ್ಥೆ
ಈ ಸಂಯೋಜನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಇದು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯುತ್ತದೆ.
89
ಚರ್ಮ ಮತ್ತು ರಕ್ತದ ಶುದ್ಧೀಕರಣ
ಈ ಮಿಶ್ರಣವು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಮೊಡವೆಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
99
ಈ ವಿಷಯಗಳು ನೆನಪಿನಲ್ಲಿರಲಿ...
* ಮಧುಮೇಹ ರೋಗಿಗಳು ಇದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. * ಬೆಲ್ಲದ ಪ್ರಮಾಣವನ್ನು ಮಿತಿಗೊಳಿಸಿ (1-2 ಚಮಚ ಸಾಕು) * ಬೆಲ್ಲವನ್ನು ಬಿಸಿ ಹಾಲಿನಲ್ಲಿ ಮಾತ್ರ ಬೆರೆಸಿ, ತಣ್ಣನೆಯ ಹಾಲಿನಲ್ಲಿ ಅದು ಸರಿಯಾಗಿ ಕರಗುವುದಿಲ್ಲ. * ಹಾಲು ಮತ್ತು ಬೆಲ್ಲದ ಈ ಸಂಯೋಜನೆಯು ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೆ ಅಮೃತದಂತೆಯೂ ಇರುತ್ತದೆ. ನೀವು ಇದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ನಿಮ್ಮ ದೇಹದಲ್ಲಿ ಕಾಣಿಸುವ ವ್ಯತ್ಯಾಸವನ್ನು ನೀವೇ ನೋಡಬಹುದು.