
ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತ ಬೇರೆ ಹೇಳಬೇಕಾಗಿಲ್ಲ. ನಿಯಮಿತವಾಗಿ ಹಣ್ಣುಗಳನ್ನು ತಿಂದರೆ, ದೇಹ ಫ್ರೆಶ್ ಆಗಿರುತ್ತೆ. ಜೊತೆಗೆ ಅನೇಕ ಪ್ರಯೋಜನಗಳನ್ನು ಕೂಡ ನೀಡುತ್ತದೆ. ಅದಕ್ಕೇ ಪ್ರತಿದಿನ ಕನಿಷ್ಠ ಒಂದು ಹಣ್ಣನ್ನಾದರೂ ತಿನ್ನಬೇಕು ಅಂತ ವೈದ್ಯರು ಹೇಳ್ತಾರೆ. ಆಪಲ್ ನಿಂದ ದ್ರಾಕ್ಷಿವರೆಗೆ, ವಿವಿಧ ರೀತಿಯ ಹಣ್ಣುಗಳು ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್ ಅನ್ನು ಒದಗಿಸುತ್ತವೆ. ಇವು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ. ಹಾಗಾದರೆ, ಪ್ರತಿದಿನ ಒಂದು ಬಟ್ಟಲು ಫ್ರೂಟ್ ಸಲಾಡ್ ತಿಂದರೆ ಏನಾಗುತ್ತೆ? ನಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆಗಳೇನು ಅಂತ ನೋಡೋಣ...
ತೂಕ ಇಳಿಸಿಕೊಳ್ಳುವುದು: ನ್ಯೂಟ್ರಿಯಂಟ್ಸ್ ಫೌಂಡೇಶನ್ 26,000 ಕ್ಕೂ ಹೆಚ್ಚು ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಪ್ರತಿದಿನ ಹಣ್ಣುಗಳನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಕಂಡುಬಂದಿದೆ. ಈ ಅಧ್ಯಯನವನ್ನು 2019 ರಲ್ಲಿ NCBI ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಹಣ್ಣುಗಳು ಬೊಜ್ಜು ತಡೆಯಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಹಣ್ಣುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ. ಹೀಗಾಗಿ, ಪ್ರತಿದಿನ ಒಂದು ಬಟ್ಟಲು ಹಣ್ಣುಗಳನ್ನು ತಿನ್ನುವುದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಣ್ಣುಗಳಲ್ಲಿರುವ ಫೈಬರ್ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಪ್ಯಾಶನ್ ಫ್ರೂಟ್, ರಾಸ್್ಬೆರ್ರಿಸ್, ಬ್ಲ್ಯಾಕ್‌ಬೆರ್ರಿಸ್ ಮತ್ತು ದಾಳಿಂಬೆಗಳಂತಹ ಹೆಚ್ಚಿನ ಫೈಬರ್ ಮತ್ತು ಕಡಿಮೆ ಸಕ್ಕರೆ ಇರುವ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಮುಪ್ಪು ದೂರವಿಡುತ್ತದೆ: ಪ್ರತಿದಿನ ವಿವಿಧ ಬಣ್ಣಬಣ್ಣದ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ. ಅವು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದು ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ಹಾಗೆಯೇ ಮುಖದ ಮೇಲೆ ಸುಕ್ಕುಗಳು ಬೀಳದಂತೆ ತಡೆಯುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಪ್ರತಿದಿನ ಒಂದು ಬಟ್ಟಲು ಹಣ್ಣುಗಳನ್ನು ಸೇವಿಸುವುದರಿಂದ ವಿವಿಧ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ. ಹಣ್ಣುಗಳಲ್ಲಿ ವಿಟಮಿನ್‌ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಹೇರಳವಾಗಿವೆ, ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಪ್ರತಿದಿನ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ. ಇದು ಹೃದ್ರೋಗ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಯುತ್ತದೆ ಎಂದು ಅಧ್ಯಯನ ಹೇಳುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಹಣ್ಣುಗಳು ತಮ್ಮ ಫೈಬರ್ ಅಂಶದ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಇದು ಜೀರ್ಣಕ್ರಿಯೆಯ ಕಾರ್ಯಕ್ಕೆ ಬೆಂಬಲ ನೀಡುತ್ತದೆ. ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಹಣ್ಣುಗಳಲ್ಲಿ ಫೈಬರ್ ಹೇರಳವಾಗಿದೆ. ಇದು ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಲಬದ್ಧತೆಯಂತಹ ಜೀರ್ಣಕ್ರಿಯೆ ಸಮಸ್ಯೆಗಳನ್ನು ತಡೆಯುತ್ತದೆ.
ಇದಲ್ಲದೆ, ಅವು ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ಜೀರ್ಣಕ್ರಿಯೆಗೆ ಅಗತ್ಯವಾದ ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಗೂ ಇವು ಕೊಡುಗೆ ನೀಡುತ್ತವೆ.
ಹೊಳೆಯುವ ಚರ್ಮ: ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅದರ ಉತ್ಕರ್ಷಣ ನಿರೋಧಕ ಅಂಶದ ಮೂಲಕ ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಹಣ್ಣುಗಳಲ್ಲಿ ಶಕ್ತಿಯುತ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ಉರಿಯೂತವನ್ನು ಕಡಿಮೆ ಮಾಡುವ ಮೂಲಕ, ಫ್ರೀ ರಾಡಿಕಲ್‌ಗಳಿಂದ ರಕ್ಷಣೆ ನೀಡುವ ಮೂಲಕ ಚರ್ಮದ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತವೆ. ದೇಹದಲ್ಲಿರುವ ಕಾಲಜನ್ ಅನ್ನು ಒಡೆಯುವ ಮೂಲಕ ಫ್ರೀ ರಾಡಿಕಲ್‌ಗಳು ಚರ್ಮ ಯಂಗ್ ಆಗಿ ಕಾಣುವಂತೆ ಮಾಡುತ್ತವೆ.
ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ: ಹಣ್ಣುಗಳಲ್ಲಿರುವ ನೀರಿನ ಅಂಶವು ದೈನಂದಿನ ಹೈಡ್ರೇಶನ್ ಅಗತ್ಯಗಳಲ್ಲಿ ಶೇ.30 ರಷ್ಟನ್ನು ಪೂರೈಸುತ್ತದೆ. ದೇಹವನ್ನು ಹೈಡ್ರೇಟ್ ಆಗಿರಿಸುವುದರಿಂದ ಇತರ ದೈಹಿಕ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಸರಿಯಾದ ಹೈಡ್ರೇಶನ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಸಮಸ್ಯೆಯೂ ಇರುವುದಿಲ್ಲ.