ಇದು ಟೀ ಪ್ರಕಾರವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಬ್ಲಾಕ್ ಟೀ ಮತ್ತು ಗ್ರೀನ್ ಟೀ ಹೆಚ್ಚಿನ ಮಟ್ಟದ ಟ್ಯಾನಿನ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ ಅವು ಕಬ್ಬಿಣದ ಹೀರಿಕೊಳ್ಳುವಿಕೆಗೆ ಹೆಚ್ಚಿನ ಅಡೆತಡೆಗಳನ್ನು ಉಂಟುಮಾಡಬಹುದು. ಮತ್ತೊಂದೆಡೆ, ಹಾಲಿನ ಟೀ ಶುಂಠಿ, ದಾಲ್ಚಿನ್ನಿ ಅಥವಾ ಏಲಕ್ಕಿಯನ್ನು ಹೊಂದಿದ್ದರೂ ಸಹ ಅದೇ ಸಮಸ್ಯೆಯನ್ನು ಹೊಂದಿರಬಹುದು. ಆದರೆ ಹಾನಿಯ ಸಾಧ್ಯತೆ ಕಡಿಮೆ. ಏಕೆಂದರೆ, ಏಲಕ್ಕಿ, ದಾಲ್ಚಿನ್ನಿ ಅಥವಾ ಶುಂಠಿ ಆಹಾರದ ಒಟ್ಟಾರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.