ಹೊಟ್ಟೆಯಲ್ಲಿ ಗುಡು ಗುಡು ಅನಿಸ್ತಾ ಇದೆಯಾ? ಏನಿದು ಸಮಸ್ಯೆ?

First Published Jun 2, 2023, 5:32 PM IST

ಹೊಟ್ಟೆಯಿಂದ ಬರುವ ಶಬ್ದವು ಕೆಲವೊಮ್ಮೆ ಹಸಿವಿನ ಸಂಕೇತವಾಗಿರಬಹುದು, ಆದರೆ ಧ್ವನಿಯೊಂದಿಗೆ ವಾಂತಿ ಮತ್ತು ನೋವು ಇದ್ದಾಗ, ಅದು ಏನೋ ಗಂಭೀರ ಸಮಸ್ಯೆಯನ್ನು ಸೂಚಿಸುತ್ತೆ. ಅದರ ಬಗ್ಗೆ ತಜ್ಞರು ಏನು ಹೇಳ್ತಾರೆ ಅನ್ನೋದನ್ನು ಇಲ್ಲಿ ತಿಳಿಯೋಣ.

ಜೀರ್ಣಕ್ರಿಯೆ ಸಮಯದಲ್ಲಿ ಗ್ಯಾಸ್(Gas), ದ್ರವಗಳು ಮತ್ತು ಘನವಸ್ತುಗಳ ಚಲನೆಯಿಂದ ಹೊಟ್ಟೆಯಲ್ಲಿ ಶಬ್ದವು ತುಂಬಾ ಸಾಮಾನ್ಯವೆಂದು ಪರಿಗಣಿಸಲಾಗಿದೆ. ಹಾಗೆಯೇ, ಹೊಟ್ಟೆ ಕೆಟ್ಟಾಗಲೂ ಈ ಸಮಸ್ಯೆ ಉಂಟಾಗುತ್ತೆ. ಹೊಟ್ಟೆ ಖಾಲಿಯಾದಾಗ ಅಥವಾ ಆಹಾರವನ್ನು ಜೀರ್ಣಿಸಿಕೊಳ್ಳುವಾಗ ಇದು ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತೆ. ಆದರೆ ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಈ ಬಗ್ಗೆ ವೈದ್ಯರಿಗೆ ತಿಳಿಸಿ. 

ಅತಿಯಾದ ಅಥವಾ ಸ್ಥಿರ ಶಬ್ದ ಈ ಕೆಳಗಿನ ಸಮಸ್ಯೆಗಳನ್ನು ಸೂಚಿಸುತ್ತವೆ. ತಜ್ಞರು ಇದರ ಹಿಂದಿನ ಕಾರಣಗಳನ್ನು ಹೀಗೆ ಹೇಳುತ್ತಾರೆ.  

ಹಸಿವು(Hungry)
ಹೊಟ್ಟೆ ಖಾಲಿಯಿದ್ದಾಗ, ಶಬ್ದವನ್ನು ಹೆಚ್ಚು ಸುಲಭವಾಗಿ ಕೇಳಬಹುದು. ಸಾಮಾನ್ಯವಾಗಿ, ಈ ಶಬ್ದವು ಊಟದ ನಂತರ ಕಡಿಮೆಯಾಗುತ್ತೆ. 

ಜೀರ್ಣಕ್ರಿಯೆಯಲ್ಲಿ(Digestion) ಸಮಸ್ಯೆಗಳು
ಅತಿಯಾಗಿ ತಿನ್ನುವುದು, ಹೆಚ್ಚು ಗ್ಯಾಸ್ ಉಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸೋದು ಅಥವಾ ಗ್ಯಾಸ್ಟ್ರೋಎಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್ಡಿ) ಅಥವಾ ಕಿರಿಕಿರಿಯ ಕರುಳಿನ ಸಿಂಡ್ರೋಮ್ (ಐಬಿಎಸ್) ಸಹ ಆತಂಕ ಅಥವಾ ಅಸ್ವಸ್ಥತೆಯ ಸಮಸ್ಯೆಯನ್ನು ಹೆಚ್ಚಿಸುತ್ತೆ.

ಆಹಾರ ಅಲರ್ಜಿಗಳು(Food allergy)
ನಿಮಗೆ ಆಹಾರ ಅಲರ್ಜಿಗಳು ಇದ್ರೆ  ಅಥವಾ ಲ್ಯಾಕ್ಟೋಸ್ ಅಥವಾ ಗ್ಲುಟೆನ್ ಸಮೃದ್ಧವಾಗಿರುವ ಆಹಾರಗಳು ಕೆಲವೊಮ್ಮೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ಹೊಟ್ಟೆಯಿಂದ ಹೆಚ್ಚು ಶಬ್ದ ಉಂಟಾಗುತ್ತೆ.

ಗ್ಯಾಸ್ಟ್ರೋಎಂಟರೈಟಿಸ್
ಇದು ಹೊಟ್ಟೆ ಮತ್ತು ಕರುಳಿನಲ್ಲಿ ಸೋಂಕು ಅಥವಾ ಉರಿಯೂತವಾಗಿದೆ, ಇದನ್ನು ಸಾಮಾನ್ಯವಾಗಿ ಹೊಟ್ಟೆ ಜ್ವರ ಎಂದು ಕರೆಯಲಾಗುತ್ತೆ. ಇದು ಸಾಕಷ್ಟು ಶಬ್ದ ಬರಲು ಕಾರಣವಾಗಬಹುದು, ಇದು ಅತಿಸಾರ, ವಾಂತಿ (Vomit) ಮತ್ತು ಕಿಬ್ಬೊಟ್ಟೆ ನೋವಿನಂತಹ ರೋಗಲಕ್ಷಣಳನ್ನು ಹೊಂದಿರುವ ಸಾಧ್ಯತೆ ಇದೆ. ಇದನ್ನು ಇಗ್ನೋರ್ ಮಾಡ್ಲೇಬೇಡಿ.

ಕರುಳಿನಲ್ಲಿ ಅಡಚಣೆ
ಕರುಳಿನ ಅಡಚಣೆಯು ಹೊಟ್ಟೆಯಲ್ಲಿ  ಶಬ್ದವನ್ನು ಹೆಚ್ಚಿಸುತ್ತೆ. ಇದರೊಂದಿಗೆ, ತೀವ್ರ ಹೊಟ್ಟೆ ನೋವು(Stomach pain), ಉಬ್ಬರ, ಮಲಬದ್ಧತೆ ಅಥವಾ ವಾಂತಿಯಂತಹ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು.

ಇತರ ಜೀರ್ಣಕಾರಿ ಸಮಸ್ಯೆಗಳು
ಉರಿಯೂತದ ಕರುಳಿನ ಕಾಯಿಲೆ (ಐಬಿಡಿ), ಸೀಲಿಯಾಕ್ ಕಾಯಿಲೆ ಅಥವಾ ಡೈವರ್ಟಿಕ್ಯುಲಿಟಿಸ್ ಕರುಳಿನಲ್ಲಿ ಅಸಹಜ ಶಬ್ದಗಳಿಗೆ ಕಾರಣವಾಗಬಹುದು, ಜೊತೆಗೆ ನಿರಂತರ ಹೊಟ್ಟೆ ನೋವು, ಕರುಳಿನ ಚಲನೆಯಲ್ಲಿನ ಬದಲಾವಣೆಗಳು ಅಥವಾ ತೂಕ ನಷ್ಟದಂತಹ ಇತರ ರೋಗಲಕ್ಷಣಗಳು ಸಹ ಜೀರ್ಣಕಾರಿ ಸಮಸ್ಯೆ ಇದ್ರೆ ಕಾಣಿಸಿಕೊಳ್ಳುತ್ತೆ.

ಹೊಟ್ಟೆಯ ಶಬ್ದದಿಂದ  ತೊಂದರೆಗೀಡಾಗಿದ್ದರೆ, ವೈದ್ಯರನ್ನು ಸಂಪರ್ಕಿಸಲು ವಿಳಂಬ ಮಾಡಬೇಡಿ. ರೋಗಲಕ್ಷಣಗಳು ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ, ಅವರು ನಿಮ್ಮ ರೋಗದ ತೀವ್ರತೆಯನ್ನು ಅಂದಾಜು ಮಾಡಬಹುದು. ಅಗತ್ಯವಿದ್ದರೆ ಔಷಧಿಗಳಿಂದ (Medicine) ಖಂಡಿತವಾಗಿಯೂ ಚಿಕಿತ್ಸೆ ಪಡೆಯಬಹುದು ಎಚ್ಚರವಿರಲಿ. 

click me!