ರಾತ್ರಿ ನೆನಸಿಟ್ಟ ಸಾಸಿವೆ ನೀರು ಆರೋಗ್ಯದ ಮೇಲೆ ಬೀರೋ ಪರಿಣಾಮ ಒಂದೆರಡಲ್ಲ!

First Published Jun 2, 2023, 5:12 PM IST

ಸಾಸಿವೆ ಬೀಜವು ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಸೆಲೆನಿಯಂನಂತಹ ಅಂಶಗಳನ್ನು ಹೊಂದಿರುತ್ತದೆ, ಜೊತೆಗೆ ಇದು ರಂಜಕ, ಮ್ಯಾಂಗನೀಸ್, ತಾಮ್ರ ಮತ್ತು ವಿಟಮಿನ್ ಬಿ 1 ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಸಾಸಿವೆ ನೆನೆಸಿದ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.
 

ಅಡುಗೆ ಮನೆಯಲ್ಲಿ ಅನೇಕ ಮಸಾಲೆಗಳಿವೆ, ಇದು ಆಹಾರದ ರುಚಿ ಹೆಚ್ಚಿಸುವುದಲ್ಲದೆ, ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಅಂತೆಯೇ, ತರಕಾರಿಗಳು ಮತ್ತು ಬೇಳೆಕಾಳುಗಳನ್ನು ಸಹ ನಾವು ಸಾಮಾನ್ಯವಾಗಿ ಬಳಸುತ್ತೇವೆ. ಇನ್ನು ದೇಹವನ್ನು ತಂಪಾಗಿಸಲು ಮತ್ತು ಆರೋಗ್ಯ ಗಟ್ಟಿಯಾಗಿರಲು ಜನರು ಹೆಚ್ಚಾಗಿ ಸಾಸಿವೆ ಬಳಸುತ್ತಾರೆ. ಈ ಸಾಸಿವೆ ನೆನೆಸಿದ ನೀರು(soaked mustard seeds water) ಕುಡೀಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ. 

ಸಾಸಿವೆ ನೆನೆಸಿದ ನೀರಿನಿಂದ ಅನೇಕ ಪ್ರಯೋಜನಗಳಿವೆ. ಅದಕ್ಕೂ ಮೊದಲು ನಾವು ಅದರ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳೋಣ. ಈ ಬೀಜವು ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಸೆಲೆನಿಯಂನಂತಹ ಅಂಶಗಳನ್ನು ಹೊಂದಿರುತ್ತದೆ, ಜೊತೆಗೆ ಇದು ರಂಜಕ, ಮ್ಯಾಂಗನೀಸ್, ತಾಮ್ರ ಮತ್ತು ವಿಟಮಿನ್ ಬಿ 1 ನ (Vitamin B 1) ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. 

ಸಾಸಿವೆ ನೀರಿನ ಪ್ರಯೋಜನಗಳು 
ರಾತ್ರಿಯಿಡೀ ನೆನೆಸಿದ ಸಾಸಿವೆ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ (cholesterol level) ಸುಧಾರಿಸುತ್ತದೆ. ಇದರಿಂದ ನೀವು ಸಹ ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ, ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದ್ರೆ ಹೃದ್ರೋಗ ಸಮಸ್ಯೆಗಳು ಸಹ ನಿವಾರಣೆಯಾಗುತ್ತೆ. 

ಅದೇ ಸಮಯದಲ್ಲಿ, ಸಾಸಿವೆ ನೀರು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ಹೈಡ್ರೇಟ್ (skin hydrate) ಆಗಿಡಲು ಕೆಲಸ ಮಾಡುತ್ತದೆ, ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ನಿಮ್ಮನ್ನು ಯಂಗ್ ಆಗಿರಿಸಲು ಇದು ಬೆಸ್ಟ್. 

ಇನ್ನು ದೇಹದಲ್ಲಿ ಯಾವುದೇ ಆಂತರಿಕ ಉರಿಯೂತವಿದ್ದರೆ, ಸಾಸಿವೆ ನೀರು ಅದನ್ನು ತೊಡೆದುಹಾಕಲು ಕೆಲಸ ಮಾಡುತ್ತದೆ. ಇದಲ್ಲದೆ, ಇದರಲ್ಲಿ ಕಂಡುಬರುವ ಮೆಗ್ನೀಸಿಯಮ್ ಅಸ್ತಮಾ, ಸಂಧಿವಾತ ಮತ್ತು ಕಡಿಮೆ ರಕ್ತದೊತ್ತಡವನ್ನು (low blood pressure) ನಿಯಂತ್ರಿಸುತ್ತದೆ. ಹಾಗಾಗಿ ಸಾಸಿವೆ ನೀರನ್ನು ಕುಡಿಯುವುದು ತುಂಬಾನೆ ಪ್ರಯೋಜನಕಾರಿ. 

ಇದು ಮಾತ್ರವಲ್ಲ, ಸಾಸಿವೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬಾಯಿಯ ವಾಸನೆಯನ್ನು ತೆಗೆದುಹಾಕುತ್ತದೆ. ಇದು ಕೂದಲಿನ ಬೆಳವಣಿಗೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಉಂಟಾಗೋದಿಲ್ಲ.

ಸಾಸಿವೆ ನೆನೆಸಿದ ನೀರನ್ನು ನಿಯಮಿತವಾಗಿ ಸೇವಿಸೋದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ. ಇನ್ನು ಇದು ತಲೆನೋವನ್ನು (headache) ನಿವಾರಿಸಲು ಸಹ ಉತ್ತಮ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತೆ. ಇದರ ನೀರು ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ.

click me!