ಬೇಸಿಗೆಯಲ್ಲಿ ಬಾತ್‌ ಟವೆಲ್ ಯಾಕೆ ವಾಸನೆ ಬರುತ್ತದೆ, ಇದನ್ನು ಹೋಗಲಾಡಿಸೋದು ಹೇಗೆ?

First Published | Apr 15, 2023, 3:49 PM IST

ಟವೆಲ್ ವಾಸನೆ ಬರುವುದು ದೊಡ್ಡ ವಿಷಯವಲ್ಲ. ಅದರಲ್ಲೂ ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಾತ್‌ ಟವೆಲ್‌ಗಳು ಬೇಗನೆ ಕೊಳಕು ಆಗುತ್ತವೆ ಮತ್ತು ಸ್ಮೆಲ್‌ ಬರಲು ಶುರುವಾಗುತ್ತದೆ. ಇಂಥಾ ಕೆಟ್ಟ ವಾಸನೆಯನ್ನು ಹೋಗಲಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ..

ದೇಹದ ಕೊಳೆಯೆಲ್ಲಾ ಹೋಗಿ ಫ್ರೆಶ್‌ ಆಗೋಕೆ ಸ್ನಾನ ಮಾಡ್ತಾರೆ. ಹೀಗಾಗಿ ಸ್ನಾನ ಮಾಡಿದ ಮೇಲೆ ಮೈ ಒರೆಸಲು ಬಳಸೋ ಬಟ್ಟೆ ಅಥವಾ ಟವೆಲ್‌ ಸಹ ಫುಲ್‌ ಕ್ಲೀನ್ ಆಗಿರಬೇಕು. ಆದ್ರೆ ಬೇಸಿಗೆ ಬಂತೂಂದ್ರೆ ಸಾಕು ಬಾತ್‌ ಟವೆಲ್‌ ಸ್ಮೆಲ್ ಬರಲು ಶುರುವಾಗುತ್ತದೆ. ಇದಕ್ಕೇನು ಕಾರಣ. ಇದನ್ನು ಹೋಗಲಾಡಿಸಲು ಏನು ಮಾಡಬೇಕು?

ಟವೆಲ್ ವಾಸನೆ ತೆಗೆದುಹಾಕುವುದು ಹೇಗೆ? 
ಬೇಸಿಗೆಯಲ್ಲಿ ಬಳಸಿದ ಸ್ವಲ್ಪ ಸಮಯದ ನಂತರ ಟವೆಲ್‌ನಿಂದ ವಾಸನೆ ಬರಲು ಆರಂಭವಾಗುತ್ತದೆ. ಹೀಗಾದಾಗ ಟವೆಲ್‌ನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗದಿರಲು ಇಲ್ಲಿದೆ ಕೆಲವು ಟಿಪ್ಸ್. ಈ ಕೆಳಗೆ ಸೂಚಿಸಿರುವ ಪ್ರಕಾರ ನೀವು ಟವೆಲ್‌ಳನ್ನು ಸ್ವಚ್ಛಗೊಳಿಸಬಹುದು. ವಾಸ್ತವವಾಗಿ, ಬೇಸಿಗೆಯಲ್ಲಿ ಪರಿಸರವು ಬದಲಾಗುತ್ತದೆ, ಈ ಕಾರಣದಿಂದಾಗಿ ಬಟ್ಟೆಗಳನ್ನು ನಿರ್ವಹಿಸುವ ವಿಧಾನಗಳನ್ನು ಸಹ ಬದಲಾಯಿಸಬೇಕಾಗುತ್ತದೆ.

Tap to resize

ಬೇಸಿಗೆಯಲ್ಲಿ ಟವೆಲ್ ಯಾಕೆ ವಾಸನೆ ಬರುತ್ತದೆ?
ಬೇಸಿಗೆ ಕಾಲದಲ್ಲಿ ಟವೆಲ್ ನಿಂದ ವಾಸನೆ ಬರಲು ಹಲವು ಕಾರಣಗಳಿರಬಹುದು. ದೇಹದ ಬೆವರಿನ ವಾಸನೆಯು ಟವೆಲ್‌ಗಳಲ್ಲಿ ಹಲವಾರು ಬಾರಿ ಹೀರಲ್ಪಡುತ್ತದೆ. ಹೀಗಾಗಿ ಬಾತ್‌ರೂಮ್‌ನಲ್ಲಿ ಒದ್ದೆಯಾದ ಟವೆಲ್‌ಗಳನ್ನು ಇಡುವುದರಿಂದ ಟವೆಲ್‌ಗಳು ಸಹ ವಾಸನೆ ಬರಲು ಪ್ರಾರಂಭಿಸುತ್ತವೆ.
 

ಒದ್ದೆ ಟವೆಲ್ ಬಳಸಬೇಡಿ
ಯಾವುದೇ ಕಾಲದಲ್ಲೂ ಸ್ನಾನ ಮಾಡಿದ ಮೇಲೆ ಮೈ ಒರೆಸಲು ಒದ್ದೆ ಟವೆಲ್ ಬಳಸಬಾರದು. ಅದರಲ್ಲೂ ಬೇಸಿಗೆಯಲ್ಲಿ ಒದ್ದೆ ಟವೆಲ್ ಬಳಸುವುದರಿಂದ ಇದು ಸ್ಮೆಲ್ ಬರಲು ಕಾರಣವಾಗಬಹುದು. ಹೀಗಾಗಿ ಬೇಸಿಗೆಯಲ್ಲಿ ಬಾತ್‌ ಟವೆಲ್‌ನ್ನು ಸಂಪೂರ್ಣವಾಗಿ ಒಣಗಿದ ಮೇಲಷ್ಟೇ ಬಳಸಿ.

ಪದೇ ಪದೇ ಬಳಸಿದ ಟವೆಲ್ ಬಳಸಬೇಡಿ
ನೀಟಾಗಿ ವಾಶ್ ಮಾಡಿದರೂ ಬೇಸಿಗೆಯಲ್ಲಿ ಬಳಸಿದ ಟವೆಲ್‌ನ್ನೇ ಮತ್ತೆ ಮತ್ತೆ ಬಳಸಬೇಡಿ. ಹೀಗೆ ಮಾಡುವುದರಿಂದಲೂ ಟವೆಲ್‌ನಿಂದ ವಾಸನೆ ಬರಲು ಆರಂಭವಾಗಬಹುದು. ಹೀಗಾಗಿ ಆದಷ್ಟು ಟವೆಲ್‌ಗಳನ್ನು ಬದಲಾಯಿಸುತ್ತಲೇ ಇರುವುದು ಒಳ್ಳೆಯದು. 

ಟವೆಲ್ ವಾಸನೆಯನ್ನು ತೆಗೆದುಹಾಕುವುದು ಹೇಗೆ?
ಟವೆಲ್ ವಾಸನೆಯನ್ನು ತೆಗೆದು ಹಾಕಲು, 2 ದಿನಗಳಿಗಿಂತ ಹೆಚ್ಚು ಕಾಲ 1 ಟವೆಲ್ ಅನ್ನು ಬಳಸಬೇಡಿ. ಅತಿಯಾದ ಬಳಕೆಯಿಂದ ಟವೆಲ್ ವಾಸನೆ ಬರಲು ಪ್ರಾರಂಭಿಸುತ್ತದೆ. ಬಾತ್‌ರೂಮನಲ್ಲಿ ಒದ್ದೆಯಾದ ಟವೆಲ್‌ಗಳನ್ನು ಎಂದಿಗೂ ಇಡಬೇಡಿ. ಸಾಮಾನ್ಯವಾಗಿ ಬಾತ್‌ರೂಮ್‌ ಮುಚ್ಚಿರುತ್ತ. ಹೀಗಾಗಿ ಇಲ್ಲಿ ಒದ್ದೆಯಾದ ಟವೆಲ್‌ನ್ನು ಇಟ್ಟುಕೊಳ್ಳುವುದರಿಂದ ಅದು ಒಣಗುವುದಿಲ್ಲ. ದುರ್ವಾಸನೆ ಬರಲು ಇದೇ ಕಾರಣ. ಟವೆಲ್‌ಗಳನ್ನು ವಾಸನೆಯಿಂದ ದೂರವಿರಿಸಲು, ನೀವು ಟವೆಲ್‌ಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು ಎಂಬುದನ್ನು ಸಹ ನೆನಪಿನಲ್ಲಿಡಿ. 

ಟವೆಲ್‌ನ್ನು ತೊಳೆಯಲು, ಮೊದಲು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಡಿಟರ್ಜೆಂಟ್‌ ಪೌಡರ್‌ ಸೇರಿಸಿ. ಇದರ ನಂತರ, ಟವೆಲ್‌ಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡಿ. ಈಗ ಟವೆಲ್‌ನ್ನು ಚೆನ್ನಾಗಿ ಉಜ್ಜಿ ಮತ್ತು ಅದನ್ನು ಶುದ್ಧ ನೀರಿನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಇದಲ್ಲದೆ, ಟವೆಲ್ ತುಂಬಾ ಕೊಳಕಾಗಿದ್ದರೆ, ನೀವು ಅರ್ಧ ಟೀಚಮಚ ಅಡಿಗೆ ಸೋಡಾವನ್ನು ಸಹ ಬಳಸಬಹುದು.

Latest Videos

click me!