Health Tips : ಬೇಸಿಗೆಯಲ್ಲಿ ಬೆಲ್ಲ ತಿನ್ನೋದ್ರಿಂದ ಸಮಸ್ಯೆ ಉಂಟಾಗುತ್ತಾ?

First Published | Apr 15, 2023, 1:03 PM IST

ಯಾವುದೇ ಆರೋಗ್ಯ ಸಮಸ್ಯೆಯೊಂದಿಗೆ ಹೋರಾಡಬೇಕು ಅನ್ನೋದಾದ್ರೆ ಇಮ್ಯೂನಿಟಿ ಪವರ್ ಉತ್ತಮವಾಗಿರೋದು ತುಂಬಾನೆ ಮುಖ್ಯ. ಹಾಗಾಗಿ ಬೆಲ್ಲ ಮತ್ತು ಕಡಲೆ ತಿನ್ನೋದ್ರಿಂದ ಇಮ್ಯೂನಿಟಿ ಹೆಚ್ಚಾಗುವುದರ ಜೊತೆಗೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಸಹ ನೀಡುತ್ತದೆ.

ಬೆಲ್ಲ ಮತ್ತು ಕಡ್ಲೆ (Chana and Jaggery) ಭಾರತದ ಸಾಂಪ್ರದಾಯಿಕ ಆಹಾರ. ಹಿಂದಿನ ಕಾಲದಲ್ಲಿ ಜನರು ಮೊದಲಿಗೆ ಇದನ್ನೇ ಸೇವಿಸುತ್ತಿದ್ದರು. ಕಾಲ ಬದಲಾದಂತೆ, ವಿವಿಧ ರೀತಿಯ ಆಹಾರ ತಯಾರಿಸಲು ಆರಂಭಿಸಿದ ಬಳಿಕ, ಈ ಆರೋಗ್ಯಯುತ, ಸಾಂಪ್ರದಾಯಿಕ ಆಹಾರ ಮೂಲೆ ಗುಂಪಾಯಿತು. ಈಗ ಮೆಡಿಕಲ್ ಸೈನ್ಸ್ ಮತ್ತೆ ಹಳೆ ಕಾಲದ ಆಹಾರಗಳನ್ನು ತುನ್ನುವಂತೆ ಸೂಚಿಸುತ್ತಿದೆ. ಹೆಚ್ಚಿನ ಜನರು ಬೆಲ್ಲವನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಬೇಕು ಎನ್ನುತ್ತಾರೆ. ಆದರೆ ಇದು ನಿಜವಲ್ಲ. ಬನ್ನು ಬೇಸಿಗೆಯಲ್ಲಿ ಬೆಲ್ಲ ಮತ್ತು ಕಡಲೆ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ. 

ಬೆಲ್ಲ ಮತ್ತು ಕಡಲೆ ಕಾರ್ಬೋಹೈಡ್ರೇಟ್ಸ್ (carbohydrate) ಮತ್ತು ಪ್ರೋಟೀನ್ಗಳ ಮಾಂತ್ರಿಕ ಸಂಯೋಜನೆಯಾಗಿದೆ. ಇದನ್ನು ಒಟ್ಟಿಗೆ ತಿನ್ನುವುದು ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ದೇಹದ ನೋವು, ರಕ್ತದ ಕೊರತೆ, ಸ್ನಾಯುವಿನ ಒತ್ತಡದ ಸಮಸ್ಯೆ ಇದ್ದರೆ, ನೀವು ಬೆಲ್ಲ ಮತ್ತು ಕಡಲೆಯನ್ನು ಒಟ್ಟಿಗೆ ತಿನ್ನಬೇಕು. 

Tap to resize

ಬೆಲ್ಲ ಮತ್ತು ಕಡಲೆ ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಅಲ್ಲದೆ, ಇದರ ನಿಯಮಿತ ಸೇವನೆಯು ಕಬ್ಬಿಣ ಮತ್ತು ಹಿಮೋಗ್ಲೋಬಿನ್ (hemoglobin) ಕೊರತೆಯನ್ನು ಪೂರೈಸುತ್ತದೆ. ಜೊತೆಗೆ ಬೆಲ್ಲವು ಸ್ನಾಯುಗಳ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದರೆ, ಕಡಲೆಯಲ್ಲಿ ವಿಟಮಿನ್ ಗಳು, ಕ್ಯಾಲ್ಸಿಯಂ, ಫೈಬರ್ ಮತ್ತು ಪ್ರೋಟೀನ್ ಅಧಿಕವಾಗಿದೆ.
 

ಬೆಲ್ಲ ಮತ್ತು ಕಡಲೆಯಲ್ಲಿ ಸತು ಮತ್ತು ಸೆಲೆನಿಯಂನಂತಹ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಅವು ದೇಹದ ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತವೆ. ಇದರೊಂದಿಗೆ, ಅವು ಸೆಲ್ಯುಲಾರ್ ಹಾನಿಯನ್ನು ಸಹ ತಡೆಯುತ್ತವೆ. ಹುರಿದ ಕಡಲೆ ಉಸಿರಾಟದ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ ಎನ್ನಲಾಗುತ್ತೆ. ಇದಕ್ಕಾಗಿ, ಮಲಗುವ ಮೊದಲು ಬಿಸಿ ಹಾಲಿನೊಂದಿಗೆ ಹುರಿದ ಕಡಲೆಯನ್ನು ತಿನ್ನಬೇಕು.  

ಬೆಲ್ಲ-ಕಡಲೆಯ ಸಂಯೋಜನೆಯು ಮಹಿಳೆಯರಿಗೂ ಒಳ್ಳೆಯದು. ಋತುಚಕ್ರದ ಸಮಯದಲ್ಲಿ ಅವರಿಗೆ ರಕ್ತ ನಷ್ಟವಾಗುತ್ತದೆ. ಬೆಲ್ಲವು ಕಬ್ಬಿಣದ ಉತ್ತಮ ಮೂಲವಾಗಿದೆ, ಆದರೆ ಕಡಲೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮಹಿಳೆಯರ ದೇಹಕ್ಕೆ ಅವುಗಳು ಹೆಚ್ಚು ಬೇಕಾಗುತ್ತವೆ.

ಬೆಲ್ಲ ಮತ್ತು ಕಡಲೆಯಲ್ಲಿ ವಿಟಮಿನ್ ಬಿ 6 (Vitamin B 6)ಇದೆ. ಇದು ಜ್ಞಾಪಕ ಶಕ್ತಿಯನ್ನು ಬಲಪಡಿಸುತ್ತದೆ. ಇದಲ್ಲದೆ, ಬೆಲ್ಲವು ವಯಸ್ಸಾಗುವಿಕೆಯನ್ನು ತಡೆಯುವ ಗುಣ ಹೊಂದಿದೆ ಎನ್ನಲಾಗುತ್ತೆ. ಕಡಲೆಯೊಂದಿಗೆ ಸೇವಿಸಿದಾಗ, ಬೆಲ್ಲದ ಗ್ಲೈಕೋಲಿಕ್ ಆಮ್ಲವು ಮೆಗ್ನೀಸಿಯಮ್ನೊಂದಿಗೆ ಸಂಯೋಜಿಸಿ ವಯಸ್ಸಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ.
 

Latest Videos

click me!