ಕೆಲವು ಜನರಿಗೆ ಮತ್ತೆ ಮತ್ತೆ ಯಾಕೆ ನೆಗಡಿ ಆಗುತ್ತೆ ಗೊತ್ತಾ?

First Published Dec 31, 2022, 5:43 PM IST

ಚಳಿಗಾಲದ ಹೆಚ್ಚಿನ ದಿನಗಳಲ್ಲಿ, ನೆಗಡಿ, ಶೀತ, ಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆಗಳು ಉಂಟಾಗೋದು ಸಾಮಾನ್ಯ. ಆದರೆ ಕೆಲವು ಜನರ ಕೈಯಲ್ಲಿ ಕರವಸ್ತ್ರ ಇರಲೇಬೇಕು. ಅಷ್ಟೊಂದು ಶೀತ ಬಿಡದೇ ಕಾಡುತ್ತೆ. ಚಳಿಗಾಲದಲ್ಲಿ ಹೀಗೆ ಪದೇ ಪದೇ ಶೀತ, ನೆಗಡಿ ಕೆಲವರನ್ನು ಕಾಡಲು ಏನು ಕಾರಣ ಎಂದು ಇಲ್ಲಿ ತಿಳಿದುಕೊಳ್ಳೋಣ. 

ಚಳಿಗಾಲ (Winter) ಎಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುವ ಸಮಯವಾಗಿದೆ. ಈ ಸಮಯದಲ್ಲಿ ಪದೆ ಪದೆ ನೆಗಡಿ, ಶೀತ ಹೊಂದುವ ಅನೇಕ ಜನರನ್ನು ನೀವು ನೋಡಿರಬಹುದು. ಚಳಿಗಾಲದಲ್ಲಿ, ಹೆಚ್ಚಿನ ದಿನಗಳಲ್ಲಿ ಈ ಜನರು ತಮ್ಮ ಕೈಯಲ್ಲಿ ಕರವಸ್ತ್ರಗಳನ್ನು ಹಿಡಿದುಕೊಂಡೇ ತಿರುಗಾಡುತ್ತಾರೆ. ಅದೇ ಸಮಯದಲ್ಲಿ, ಈ ಜನರಲ್ಲಿ ಅನೇಕರು ಬೇಸಿಗೆಯ ಋತುವಿನಲ್ಲಿಯೂ ಸಹ ಹೆಚ್ಚು ಶೀತವನ್ನು ಹೊಂದುತ್ತಾರೆ. ಈ ರೀತಿ ಆಗೋದು ಯಾಕೆ ಗೊತ್ತಾ?

ಆಗಾಗ್ಗೆ ಶೀತಕ್ಕೆ(Cold)  ಕಾರಣವೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಪದೇ ಪದೇ ಉದ್ಭವಿಸುತ್ತೆ. ಕೋವಿಡ್ -19 ರಿಂದ, ನೆಗಡಿ ಮತ್ತು ಕೆಮ್ಮುಗಳನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಲು ಪ್ರಾರಂಭಿಸಿರೋದರಿಂದ ಶೀತ ಸಹ ತುಂಬಾ ಅಪಾಯಕಾರಿಯಾಗುತ್ತಿವೆ, ಇದರಿಂದಾಗಿ ಅನೇಕ ಜನರ ಆತಂಕವು ಇನ್ನೂ ಹೆಚ್ಚಾಗುತ್ತಿದೆ. ಆದ್ದರಿಂದ , ಆಗಾಗ್ಗೆ ಬರುವ ಶೀತಕ್ಕೆ ಕಾರಣವೇನು ಎಂದು ತಿಳಿದುಕೊಳ್ಳುವುದು ಅತ್ಯಗತ್ಯ. 

ದುರ್ಬಲ ರೋಗನಿರೋಧಕ ಶಕ್ತಿ: ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಜನರು ಆಗಾಗ್ಗೆ ಜ್ವರ, ಕೆಮ್ಮು ಅಥವಾ ಶೀತದಂತಹ ಸಮಸ್ಯೆಗಳನ್ನು ಹೊಂದುತ್ತಾರೆ. ಹಾಗಾಗಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೀವು ಆಹಾರದಲ್ಲಿ ಹೆಚ್ಚಿನ ವಿಟಮಿನ್-ಸಿ(Vitamin C)  ತೆಗೆದುಕೊಳ್ಳೋದು ಬಹಳ ಮುಖ್ಯ. 

ಅಲರ್ಜಿ (Alergy): ಅನೇಕ ಜನರು ಧೂಳಿನಿಂದ ಅಲರ್ಜಿ ಹೊಂದುತ್ತಾರೆ, ಅನೇಕ ಜನರು ವಾಸನೆಗೆ ಅಲರ್ಜಿ ಹೊಂದಿರುತ್ತಾರೆ. ಅಲರ್ಜಿ ಇದ್ದಾಗ, ಪದೇ ಪದೇ ಸೀನುವಿಕೆ ಇರುತ್ತೆ ಮತ್ತು ನಂತರ ಶೀತವಾಗುತ್ತೆ. ಅನೇಕ ಜನರು ಮಾರುಕಟ್ಟೆಗಳಿಗೆ ಅಥವಾ ಜನದಟ್ಟಣೆಯ ಸ್ಥಳಗಳಿಗೆ ಹೋದಾಗ ಅಲರ್ಜಿಯಿಂದಾಗಿ ಶೀತದ ಸಮಸ್ಯೆಗೆ ಗುರಿಯಾಗುತ್ತಾರೆ. 
 

ಸೋಂಕು(Infection): ಕೆಲವು ಜನರು ಕೆಲವು ಸೋಂಕನ್ನು ಹೊಂದಿರುತ್ತಾರೆ ಆದರೆ ಅವರು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಅದನ್ನು ನಿಯಂತ್ರಿಸುತ್ತಾರೆ, ಆದರೆ ಸೋಂಕಿನ ಬ್ಯಾಕ್ಟೀರಿಯಾಗಳು  ದೇಹದಿಂದ ಸಂಪೂರ್ಣವಾಗಿ ತೆಗೆದುಹಾಕಲ್ಪಡೋದಿಲ್ಲ, ಅವು ಹಾಗೆ ಉಳಿಯುವುದರಿಂದ ಆಗಾಗ್ಗೆ ಶೀತ ಉಂಟಾಗುತ್ತೆ.  

ದೇಹದಲ್ಲಿ ಟಾಕ್ಸಿನ್ (Toxin) ಶೇಖರಣೆ: ದೇಹದಲ್ಲಿ ಟಾಕ್ಸಿನ್ ಶೇಖರಣೆಯಾದಾಗ ಮತ್ತು ಅವುಗಳನ್ನು ತೆಗೆದುಹಾಕದಿದ್ದಾಗ, ಅವು ಶೀತದ ಮೂಲಕ  ದೇಹದಿಂದ ಹೊರಬರಲು ತಾವೇ ಪ್ರಯತ್ನಿಸುತ್ತೆ. ಹಾಗಾಗಿ ಆದಷ್ಟು ನಮ್ಮ ಜಾಗ್ರತೆಯಲ್ಲಿ ನಾವಿದ್ದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. 

ದೇಹವನ್ನು ಬೆಚ್ಚಗಿರಿಸುವ ಆಹಾರ(Hot Food) ಸೇವಿಸಿ: ಚಳಿಗಾಲದಲ್ಲಿ ಸಾಧ್ಯವಾದಷ್ಟು ದೇಹವನ್ನು ಬೆಚ್ಚಗಿರಿಸುವ ಆಹಾರ ಸೇವಿಸುವುದು ಮುಖ್ಯ. ಇದರಿಂದ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡೋದಿಲ್ಲ. ಅಷ್ಟೇ ಅಲ್ಲ, ದೇಹವು ಬೆಚ್ಚಗಿದ್ದರೆ, ಶೀತ ಸಮಸ್ಯೆ ಕೂಡ ಉಂಟಾಗೋದಿಲ್ಲ. ಆದುದರಿಂದ ಚಳಿಗಾಲದಲ್ಲಿ ಬೆಚ್ಚಗಿರಿಸುವಂತಹ ಆಹಾರವನ್ನೇ ಸೇವಿಸಿ. 
 

ವ್ಯಾಯಾಮ(Exercise) ಮಾಡೋದನ್ನು ಮರೆಯಬೇಡಿ: ಹೆಚ್ಚಿನ ಜನರು ಚಳಿಗಾಲ ಎಂದ ಕೂಡಲೇ ಜಿಮ್ ಹೋಗೋದು, ವಾಕಿಂಗ್ ಹೋಗೋದು, ಎಲ್ಲವನ್ನೂ ಮರೆತು ಬಿಡುತ್ತಾರೆ. ಇದರಿಂದಾಗಿಯೇ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಮ್ಮ ದೇಹ ಆಕ್ಟೀವ್ ಆಗಿದ್ದರೆ, ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಆದುದರಿಂದ ಚಳಿಗಾಲದಲ್ಲೂ ವ್ಯಾಯಾಮ ಮಾಡೊದನ್ನು ಮರೆಯಬೇಡಿ. 
 

click me!