New Year 2023: ಹೊಸ ವರ್ಷ ಈ ಕೆಲಸ ಮಾಡಿದ್ರೆ, ವರ್ಷವಿಡೀ ಯಾವುದೇ ರೋಗ ಬರೋದಿಲ್ಲ

Published : Dec 31, 2022, 04:45 PM IST

ಹೊಸ ವರ್ಷ ಇನ್ನೇನು ಆರಂಭವಾಗಲಿದೆ. ಈ ವರ್ಷ, ನಿಮ್ಮನ್ನು ನೀವು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು, ಆಯುರ್ವೇದ ವೈದ್ಯರು ಸೂಚಿಸಿದಂತೆ ಸಣ್ಣ ಕೆಲಸಗಳನ್ನು ಮಾಡಿ. ಇವುಗಳನ್ನು ಮಾಡುವ ಮೂಲಕ ನೀವು ಹೊಸ ವರ್ಷದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ.

PREV
17
New Year 2023: ಹೊಸ ವರ್ಷ ಈ ಕೆಲಸ ಮಾಡಿದ್ರೆ, ವರ್ಷವಿಡೀ ಯಾವುದೇ ರೋಗ ಬರೋದಿಲ್ಲ

ಹ್ಯಾಪಿ ನ್ಯೂ ಇಯರ್ 2023 (happy new year 2023) ಈಗಷ್ಟೇ ಬರುತ್ತಿದೆ. ಮುಂಬರುವ ವರ್ಷಕ್ಕೆ ಪ್ರತಿಯೊಬ್ಬರೂ ಕೆಲವು ಯೋಜನೆಗಳನ್ನು ಹೊಂದಿರುತ್ತಾರೆ. ಕೆಲವರು ಧೂಮಪಾನವನ್ನು ತ್ಯಜಿಸುತ್ತಾರೆ ಮತ್ತು ಕೆಲವರು ತೂಕ ಕಳೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ನೀವು ಆಯುರ್ವೇದ ಸಲಹೆಗಳನ್ನು ಅಳವಡಿಸಿಕೊಳ್ಳಲು ಹೊರಟಿದ್ದೀರಾ? ಇಲ್ಲಿ ಒಂದಿಷ್ಟು ಆಯುರ್ವೇದ ಸಲಹೆಗಳನ್ನು ನೀಡಲಾಗಿದೆ. ಈ ಆಯುರ್ವೇದ ಸಲಹೆಗಳು ವರ್ಷವಿಡೀ ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

27

2023 ಕ್ಕೆ ನೀವು ಈ ಆಯುರ್ವೇದ ಸಲಹೆಗಳ ರೆಸಲ್ಯೂಶನ್ (ayurveda resolution) ತೆಗೆದುಕೊಳ್ಳೋದು ಉತ್ತಮ. 
ಎದ್ದೇಳಲು ಮತ್ತು ಮಲಗಲು ನಿಗದಿತ ಸಮಯ, ಜೀರ್ಣಕ್ರಿಯೆ ಮತ್ತು ಪೌಷ್ಟಿಕಾಂಶದ ಬಳಕೆಯಂತಹ ಚಯಾಪಚಯ ಮತ್ತು ಜೈವಿಕ ಕಾರ್ಯಗಳಿಗೆ ಸೂರ್ಯನ ಬೆಳಕು ಬಹಳ ಮುಖ್ಯವಾಗಿದೆ. ಆದ್ದರಿಂದ ಬೆಳಿಗ್ಗೆ ಬೇಗನೆ ಎದ್ದು ಅದನ್ನು ಸಾಕಷ್ಟು ಪಡೆಯಿರಿ. ಈ ಸಣ್ಣ ಅಭ್ಯಾಸವು ನಿಮ್ಮ ಆರೋಗ್ಯ ಮತ್ತು ಜೀವನವನ್ನು ಬದಲಾಯಿಸಬಹುದು.

37

ನಿಮ್ಮ ಆಹಾರವನ್ನು ನೀವೇ ಕುಕ್ ಮಾಡಿ: ಅಡುಗೆ ಮಾಡುವುದು ನೀರಸ ಕೆಲಸವಲ್ಲ, ಆದರೆ ನಿಮ್ಮನ್ನು ನೀವು ನೋಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ಆಹಾರವನ್ನು ಸ್ವತಃ ಬೇಯಿಸುವುದು ದೇಹಕ್ಕೆ ಪೌಷ್ಠಿಕಾಂಶವನ್ನು ಒದಗಿಸುತ್ತದೆ, ಅಷ್ಟೇ ಅಲ್ಲ ಇದು ಒತ್ತಡವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

47

ಇಂದ್ರಿಯಗಳ ಬಗ್ಗೆ ಕಾಳಜಿ ವಹಿಸಿ: ಇಂದ್ರಿಯಗಳು ದೇಹಕ್ಕೆ ಕಿಟಕಿಯಾಗಿ ಕಾರ್ಯನಿರ್ವಹಿಸುತ್ತವೆ, ಇದು ಜಗತ್ತನ್ನು ಅನುಭವಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಕಣ್ಣುಗಳು, ಮೂಗು, ಕಿವಿಗಳು, ನಾಲಿಗೆ ಮತ್ತು ಚರ್ಮದ ಬಗ್ಗೆ ಕಾಳಜಿ ವಹಿಸಿ. ನಾಲಿಗೆಯನ್ನು ಸ್ಕ್ರ್ಯಾಪ್ ಮಾಡುವ ಮೂಲಕ ಕೊಳೆಯನ್ನು ತೆಗೆದುಹಾಕುವುದು, ಕಿವಿಯಲ್ಲಿ ಒಂದು ಹನಿ ಎಳ್ಳೆಣ್ಣೆಯನ್ನು ಹಾಕುವುದು ಮುಂತಾದ ಆಯುರ್ವೇದ ಸಲಹೆಗಳು ಇಂದ್ರಿಯಗಳಿಗೆ ಒಳ್ಳೆಯದು.

57

ಪ್ರತಿದಿನ ವ್ಯಾಯಾಮ ಮಾಡೋದನ್ನು ಮರೆಯಬೇಡಿ: ದೇಹ ಆರೋಗ್ಯದಿಂದಿರಲು ನೀವು ಪ್ರತಿದಿನ ವ್ಯಾಯಾಮ ಮಾಡೋದನ್ನು ಮರೆಯಬೇಡಿ. ವ್ಯಾಯಾಮ ಮಾಡೋದರಿಂದ ದೇಹವು ಆಕ್ಟೀವ್ ಆಗಿರುತ್ತೆ. ಇದರಿಂದ ನೀವು ವರ್ಷ ಪೂರ್ತಿ ಸದೃಢರಾಗಿರಲು ಸಹಾಯ ಮಾಡುತ್ತೆ. ಹಾಗಾಗಿ ನಿತ್ಯ ವ್ಯಾಯಾಮ ಮಾಡಿ.
 

67

ಮಾನಸಿಕ ಆರೋಗ್ಯ ಉತ್ತಮವಾಗಿರಲಿ: ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ, ದೈಹಿಕ ಆರೋಗ್ಯ ಸಹ ಉತ್ತಮವಾಗಿರುತ್ತೆ. ಆದುದರಿಂದ ಸಾಧ್ಯವಾದಷ್ಟು ನೀವು ಸಂತೋಷವಾಗಿರಲು ಟ್ರೈ ಮಾಡಿ. ಇದಕ್ಕಾಗಿ ನಿತ್ಯ ಪ್ರಾಣಾಯಾಮ, ಧ್ಯಾನ ಮಾಡಿ. ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತೆ.

77

ದೇಹದ ಮಾತನ್ನು ಆಲಿಸಿ: ನಮ್ಮ ದೇಹವು ಸಾಕಷ್ಟು ಬುದ್ಧಿವಂತವಾಗಿದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಅಗತ್ಯವಿರುವುದನ್ನು ಯಾವಾಗ ಮಾಡಬೇಕೆಂದು ನಮ್ಮ ದೇಹವು ನಮಗೆ ಸಂಕೇತ ನೀಡುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ತಿನ್ನಿ, ಸಮಯಕ್ಕೆ ಸರಿಯಾಗಿ ಹೊಟ್ಟೆಯನ್ನು ಸ್ವಚ್ಛಗೊಳಿಸಿ. ಒಟ್ಟಲ್ಲಿ ದೇಹದ ಮಾತನ್ನು ಆಲಿಸೋದನ್ನು ಮರೆಯಬೇಡಿ.

Read more Photos on
click me!

Recommended Stories