ಯಾವುದೇ ಕಾರಣ ಇಲ್ಲದೇ ದೇಹದ ಮೇಲೆ ಗಾಯದ ಗುರುತು ಕಾಣಿಸೋದು ಯಾಕೆ?

Published : Oct 29, 2023, 04:12 PM IST

ಕೆಲವೊಮ್ಮೆ ನಮ್ಮ ದೇಹದ ಮೇಲೆ ಇದ್ದಕ್ಕಿದ್ದಂತೆ ಗಾಯಗಳು ಅಥವಾ ನೀಲಿ ಗುರುತುಗಳು ಕಾಣಿಸುತ್ತವೆ. ಚರ್ಮದ ಮೇಲಿನ ಈ ಗುರುತುಗಳು ವಾರಗಳವರೆಗೆ ಇರಬಹುದು. ಅವುಗಳನ್ನು ದೀರ್ಘಕಾಲದವರೆಗೆ ಹಾಗೇ ಉಳಿದರೆ ಇಗ್ನೋರ್ ಮಾಡಬೇಡಿ. ಆಯುರ್ವೇದವು ಅದಕ್ಕೆ ಉತ್ತಮ ಚಿಕಿತ್ಸೆಯನ್ನು ಹೊಂದಿದೆ. ಇವುಗಳ ಸಹಾಯದಿಂದ, ನೀವು ಊತ ಮತ್ತು ನೋವಿನಿಂದ ಪರಿಹಾರ ಪಡೆಯಬಹುದು.  

PREV
16
ಯಾವುದೇ ಕಾರಣ ಇಲ್ಲದೇ ದೇಹದ ಮೇಲೆ ಗಾಯದ ಗುರುತು ಕಾಣಿಸೋದು ಯಾಕೆ?

ಇದ್ದಕ್ಕಿದ್ದಂತೆ ನಿಮ್ಮ ಕಣ್ಣುಗಳು ನಿಮ್ಮ ಕೈಯಲ್ಲಿ ಆಗಿರುವ ಗಾಯದ ಅಥವಾ ನೀಲಿ ಗುರುತಿನ (blue mark) ಕಡೆಗೆ ಹೋಗುತ್ತೆ. ಈ ಗಾಯ ಯಾವಾಗ ಆಯ್ತು? ಹೇಗೆ ಆಯ್ತು ಅನ್ನೋದೆ ಗೊತ್ತಿರೋದಿಲ್ಲ.  ನೀವು ಎಲ್ಲೂ ಬಿದ್ದಿಲ್ಲ, ಯಾವುದೇ ವಸ್ತುಗಳಿಂದ ಗಾಯವೂ ಆಗಿಲ್ಲ. ಆದರೂ ಈ ಗಾಯವಾಗಿರುತ್ತೆ. ವಿಚಿತ್ರವೆಂದರೆ, ಈ ಗಾಯವು ವಾರಗಳವರೆಗೆ ಇರುತ್ತದೆ, ಆದರೆ ನೋವನ್ನು ಉಂಟುಮಾಡುವುದಿಲ್ಲ. ನಿಮಗೂ ಇದೇ ರೀತಿ ಅನುಭವ ಆಗಿದ್ಯಾ? 

26

ಈ ರೀತಿಯ ಗಾಯಗಳು (bruises) ಯಾಕೆ ಆಗುತ್ತೆ ಗೊತ್ತಾ? ಚರ್ಮದ ಕೆಳಗಿನ ಸಣ್ಣ ರಕ್ತನಾಳಗಳು ಹಾನಿಗೊಳಗಾದಾಗ ಮತ್ತು ಸುತ್ತಮುತ್ತಲಿನ ಅಂಗಾಂಶಗಳಲ್ಲಿ ರಕ್ತ ಸೋರಿಕೆಯಾಗಲು ಪ್ರಾರಂಭಿಸಿದಾಗ ಚರ್ಮದ ಮೇಲೆ ತನ್ನಷ್ಟಕ್ಕೆ ಗಾಯಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಆಯುರ್ವೇದದಲ್ಲಿ ಪರಿಹಾರಗಳೂ ಇವೆ. 

36

ಅರಿಶಿನವನ್ನು ಅತ್ಯುತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ: ಅರಿಶಿನವನ್ನು (turmeric) ಶತಮಾನಗಳಿಂದ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಇದು ಅಡುಗೆಮನೆಯ ಪ್ರಮುಖ ಮಸಾಲೆ ಕೂಡ ಹೌದು. ಅರಿಶಿನವು  ಗಾಯದಿಂದ ಉಂಟಾಗುವ ಊತ ಮತ್ತು ನೋವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ, ಅರಿಶಿನವನ್ನು ನೀರು ಅಥವಾ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಬಾಧಿತ ಪ್ರದೇಶಕ್ಕೆ ಹಚ್ಚಿ. ಗಾಯ ಬೇಗನೆ ಗುಣವಾಗುವುದು.

46

ಹರಳೆಣ್ಣೆ ಗಾಯದ ಊತವನ್ನು ಕಡಿಮೆ ಮಾಡುತ್ತದೆ: ಹರಳೆಣ್ಣೆ (castor oil) ತೆರೆದ ಗಾಯಗಳನ್ನು ಬಹಳ ಬೇಗ ಗುಣಪಡಿಸುತ್ತದೆ. ಇದು ನೈಸರ್ಗಿಕ ಎಣ್ಣೆಯಾಗಿದ್ದು, ಇದನ್ನು ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ಗಾಯದ ನಂತರ ಬರುವ ಉರಿಯೂತವನ್ನು ಕಡಿಮೆ ಮಾಡಲು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಬಾಧಿತ ಪ್ರದೇಶದ ಮೇಲೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ನಿಮಗೆ ಪರಿಹಾರ ಸಿಗುತ್ತದೆ.
 

56

ಅಲೋವೆರಾ ಪ್ರಯೋಜನಕಾರಿಯಾಗಿದೆ: ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು (skin problem)ತೆಗೆದುಹಾಕುವಲ್ಲಿ ಅಲೋವೆರಾ ಉತ್ತಮ ಪರಿಹಾರ ನೀಡುತ್ತೆ. ಇದು ಜೆಲ್ ತರಹದ ಅಂಟು ಪದಾರ್ಥವನ್ನು ಹೊಂದಿರುವ ಸಸ್ಯವಾಗಿದೆ. ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ನಿಮ್ಮ ಚರ್ಮದ ಮೇಲೆ ಗಾಯದ ಗುರುತು ಕಂಡ, ತಕ್ಷಣ ಅಲೋವೆರಾ ಎಲೆಯಿಂದ ಜೆಲ್ ಅನ್ನು ತೆಗೆದು ಬಾಧಿತ ಪ್ರದೇಶದ ಮೇಲೆ ಹಚ್ಚಿ. ಇದರ ನಂಜುನಿರೋಧಕ ಗುಣಲಕ್ಷಣಗಳಿಂದಾಗಿ, ಇದು ಗಾಯವನ್ನು ಬಹಳ ಬೇಗನೆ ಗುಣಪಡಿಸುತ್ತದೆ.

66

ಆರ್ನಿಕಾ ಊತ ಮತ್ತು ನೋವನ್ನು ತೆಗೆದುಹಾಕುತ್ತದೆ: ಆರ್ನಿಕಾ (arnica) ಕೂಡ ಒಂದು ಗಿಡಮೂಲಿಕೆಯಾಗಿದ್ದು, ಇದನ್ನು ಅನೇಕ ಸಮಸ್ಯೆ ಗುಣಪಡಿಸಲು ಬಳಸಲಾಗುತ್ತದೆ. ಗಾಯವಾದ ನಂತರ ಚರ್ಮದ ಮೇಲೆ ಬರುವ ಊತದಿಂದ ಪರಿಹಾರ ಪಡೆಯಲು ನೀವು ಇದನ್ನು ಬಳಸಬಹುದು. ಆರ್ನಿಕಾ ಜೆಲ್ ಅನ್ನು ಪೀಡಿತ ಪ್ರದೇಶಕ್ಕೆ ದಿನಕ್ಕೆ 3-5 ಬಾರಿ ಹಚ್ಚೋದ್ರಿಂದ ಊತ ಮತ್ತು ನೋವು ಎರಡನ್ನೂ ನಿವಾರಿಸುತ್ತದೆ.
 

Read more Photos on
click me!

Recommended Stories