ದೀರ್ಘಕಾಲ ಟಿವಿ-ಟ್ಯಾಬ್ಲೆಟ್ ನೋಡುವುದೂ ಆಟಿಸಂ ಲಕ್ಷಣವೇ?

First Published Oct 28, 2023, 4:19 PM IST

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎಎಸ್ಡಿ) ಹೊಂದಿರುವ ಮಕ್ಕಳು, ಆನುವಂಶಿಕವಾಗಿ ಮಾತ್ರವಲ್ಲ ಆಟಿಸಂಗೆ ಗುರಿಯಾಗೋದು, ಅದಕ್ಕೂ ಮುನ್ನ ಟಿವಿಗಳು ಮತ್ತು ಟ್ಯಾಬ್ ದೀರ್ಘಕಾಲ ನೋಡುವವರು ಸಹ ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ. . 
 

ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ (Autism) ಎಂದು ಗುರುತಿಸಲಾಗುತ್ತದೆ. ಸಾವಿರ ಜನರಲ್ಲಿ ಒಬ್ಬರೋ ಇಬ್ಬರಿಗೆ ಇದು ಕಂಡು ಬರುತ್ತದೆ. ಇದು ಅನುವಂಶಿಕವಾಗಿಯೂ ಬರುತ್ತದೆ. ಆದರೆ ಇದರ ನಿಖರ ಲಕ್ಷಣಗಳನ್ನು ಗುರುತಿಸಲು ಸಾಧ್ಯವಿಲ್ಲ. 

ಆಟಿಸಂ ಸಮಸ್ಯೆ ಇರುವವರಲ್ಲಿ ಹಲವಾರು ಲಕ್ಷಣಗಳು ಕಂಡು ಬರುತ್ತವೆ. ಈ ಸಮಸ್ಯೆ ಎಲ್ಲರಲ್ಲೂ ವಿಭಿನ್ನವಾಗಿರುತ್ತದೆ. ಮುಖ್ಯ ಲಕ್ಷಣ ಎಂದರೆ ಆ ಮಕ್ಕಳ ನಡವಳಿಕೆ ವಿಭಿನ್ನವಾಗಿರುತ್ತದೆ. ಅಲ್ಲದೇ ವ್ಯಕ್ತಿ ಅಥವಾ ಮಗು ದೀರ್ಘಕಾಲ ಟಿವಿ (watching tv for long time) ಅಥವಾ ಟ್ಯಾಬ್ ನೋಡುತ್ತಿರುವುದು, ಒಂದು ವಿಷಯದ ಕಡೆಗೆ ಹೆಚ್ಚು ಆಕರ್ಷಕವಾಗಿರೋದು ಸಹ ಆಟಿಸಂ ನ ಲಕ್ಷಣ.

ಬಾಲ್ಯದಲ್ಲಿ ದೀರ್ಘಕಾಲದವರೆಗೆ ಟಿವಿ-ಟ್ಯಾಬ್ಲೆಟ್ ನೋಡುವುದು ಆಟಿಸಂ ಸಮಸ್ಯೆ ಮತ್ತು ಗಮನ ಕೊರತೆ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ ಗೆ ಮುಖ್ಯ ಕಾರಣ ಎಂದು ಸಂಶೋಧನೆಯೊಂದು ತಿಳಿಸಿದೆ. ಈ ಮಾಹಿತಿಯನ್ನು ಅಧ್ಯಯನವೊಂದರಲ್ಲಿ ಬಹಿರಂಗಪಡಿಸಲಾಗಿದೆ. ASD ಕಾರಣದಿಂದಾಗಿ, ಕೆಲವು ಜನರು ಟಿವಿ-ಟ್ಯಾಬ್ಲೆಟ್ ದೀರ್ಘಕಾಲದವರೆಗೆ ನೋಡುವ ಅಭ್ಯಾಸ ಹೊಂದಿದ್ದಾರೆ ಎಂದು ಕಂಡುಬಂದಿದೆ.

ಸೈಕಿಯಾಟ್ರಿ ರಿಸರ್ಚ್ ಜರ್ನರ್‌ನಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶಗಳು, ಎಎಸ್ಡಿಯ (Autism Spectrum Disorder) ಹೆಚ್ಚಿನ ಆನುವಂಶಿಕ ಅಪಾಯ ಹೊಂದಿರುವ ಮಕ್ಕಳು ಬಾಲ್ಯದಿಂದಲೂ ಟಿವಿ-ಟ್ಯಾಬ್ಲೆಟ್‌ಗಳನ್ನು ದೀರ್ಘಕಾಲದವರೆಗೆ (ದಿನಕ್ಕೆ 3 ಗಂಟೆಗಳು ಅಥವಾ ದಿನಕ್ಕೆ 4 ಗಂಟೆಗಳು) ಬಳಸುತ್ತಾರೆ ಎಂದು ತೋರಿಸಿದೆ. 

ಅಷ್ಟೇ ಅಲ್ಲ ಎಡಿಎಚ್ಡಿಯ ಹೆಚ್ಚಿನ ಆನುವಂಶಿಕ ಅಪಾಯದಲ್ಲಿರುವ ಮಕ್ಕಳು ವಯಸ್ಸಾದಂತೆ ಟಿವಿ-ಟ್ಯಾಬ್ಲೆಟ್ ನೋಡುವ ಅಭ್ಯಾಸವನ್ನು ಹೆಚ್ಚಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನಿಮ್ಮ ಮಗು ಹೆಚ್ಚು ಹೊತ್ತು ಟಿವಿ ನೋಡುತ್ತಿದ್ದರೆ, ಆಟಿಸಂ ಕಡೆಗೆ ಗಮನ ಹರಿಸೋದು ಮುಖ್ಯ.

';ಎಎಸ್ಡಿಯ ಆನುವಂಶಿಕ ಅಪಾಯ ಹೊಂದಿರುವ ಜನರು ದಿನಕ್ಕೆ ಸುಮಾರು ಮೂರು ಗಂಟೆಗಳ ಕಾಲ ಟಿವಿ-ಟ್ಯಾಬ್ಲೆಟ್ ಬಳಸುವ ಗುಂಪಿನಲ್ಲಿ ಉಳಿಯುವ ಸಾಧ್ಯತೆ 1.5 ಪಟ್ಟು ಹೆಚ್ಚು ಮತ್ತು ನಾಲ್ಕು ಗಂಟೆಗಳಿಗಿಂತ ಹೆಚ್ಚು ಟಿವಿ-ಟ್ಯಾಬ್ಲೆಟ್ಸ್ ಬಳಸುವ ಗುಂಪಿನಲ್ಲಿ 2.1 ಪಟ್ಟು ಹೆಚ್ಚು ಎಂದು ಸಂಶೋಧನೆಗಳು ತೋರಿಸಿವೆ,' ಎಂದು ಜಪಾನ್ನ ನಗೋಯಾ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ನಾಗಾಹೈಡ್ ತಕಹಾಶಿ ಹೇಳಿದ್ದಾರೆ. 

ಎಎಸ್‌ಡಿ ಹೊಂದಿರುವ ಮಕ್ಕಳು ಜನರಿಗಿಂತ ವಸ್ತುಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅಂದರೆ ಅವರು ಒಂದು ವಿಷ್ಯದ ಕಡೆಗೆ ಹೆಚ್ಚು ಆಕರ್ಷಿತರಾಗಿ, ಅದರ ಕಡೆಗೆ ಹೆಚ್ಚು ಗಮನ ಕೊಡಲು, ಅದಕ್ಕೆ ಸಂಬಂಧಿಸಿದ ಕ್ರಿಯೆ ಮಾತ್ರ ಮಾಡಲು ಪ್ರಾರಂಭಿಸುತ್ತಾರೆ ಎಂದು ತಿಳಿದು ಬಂದಿದೆ. 

click me!