ಬೇಸಿಗೆಯಲ್ಲಿ ತಂಪಾಗಿಸಿಕೊಳ್ಳೋಕೆ ತರಹೇವಾರಿ ಪಾನೀಯಗಳನ್ನು ಕುಡಿಯುತ್ತೇವೆ. ನಿಂಬೆ ಪಾನಕ, ಮಜ್ಜಿಗೆ ಇವುಗಳಲ್ಲಿ ಮುಖ್ಯವಾದವು. ಇವುಗಳನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಮಜ್ಜಿಗೆಯಲ್ಲಿ ಪ್ರೋಬಯೋಟಿಕ್ಸ್ ಇದ್ದು, ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಮಜ್ಜಿಗೆ ಕುಡಿಯಬಾರದು.
25
ಮಜ್ಜಿಗೆ ಯಾರು ಕುಡಿಯಬಾರದು?
ಎಲ್ಲರಿಗೂ ಹಾಲು, ಹಾಲಿನ ಉತ್ಪನ್ನಗಳು, ಮಜ್ಜಿಗೆ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಲಿನಲ್ಲಿರುವ ಲ್ಯಾಕ್ಟೋಸ್ ಎಲ್ಲರಿಗೂ ಸೂಕ್ತವಲ್ಲ. ಇದರಿಂದ ಹೊಟ್ಟೆ ನೋವು, ಗ್ಯಾಸ್, ಹೊಟ್ಟೆ ಉಬ್ಬರ, ಭೇದಿ ಉಂಟಾಗಬಹುದು. ಮಜ್ಜಿಗೆ ಕೂಡ ಹಾಲಿನಿಂದ ತಯಾರಾಗುವುದರಿಂದ, ಲ್ಯಾಕ್ಟೋಸ್ ಸಮಸ್ಯೆ ಇರುವವರು ಮಜ್ಜಿಗೆ ಕುಡಿಯಬಾರದು.
35
ಹಾಲಿನ ಅಲರ್ಜಿ ಇರುವವರು
ಕೆಲವರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಅಲರ್ಜಿ ಇರುತ್ತದೆ. ಅವರು ಮಜ್ಜಿಗೆ ಕುಡಿಯಬಾರದು. ಕುಡಿದರೆ ಚರ್ಮದ ತುರಿಕೆ, ದದ್ದುಗಳು, ಉಸಿರಾಟದ ತೊಂದರೆ ಉಂಟಾಗಬಹುದು. ಜ್ವರ, ಶೀತ ಇರುವವರು ಆಯುರ್ವೇದದ ಪ್ರಕಾರ ಮಜ್ಜಿಗೆ ಕುಡಿಯಬಾರದು.
ಜೀರ್ಣಕ್ರಿಯೆ ಸಮಸ್ಯೆ ಇರುವವರು ಮಜ್ಜಿಗೆ ಕುಡಿದರೆ ಹೊಟ್ಟೆ ಉಬ್ಬರ, ಅಜೀರ್ಣ, ಹೊಟ್ಟೆ ನೋವು ಉಂಟಾಗಬಹುದು. ಹೆಚ್ಚು ಊಟ ಮಾಡಿದ ನಂತರವೂ ಮಜ್ಜಿಗೆ ಕುಡಿಯಬಾರದು.
55
ಕಿಡ್ನಿ ಸಮಸ್ಯೆ ಇರುವವರು
ಮಜ್ಜಿಗೆಯಲ್ಲಿ ಪೊಟ್ಯಾಶಿಯಂ, ಸೋಡಿಯಂ ಇದೆ. ಇದು ಆರೋಗ್ಯಕ್ಕೆ ಒಳ್ಳೆಯದಾದರೂ, ಕಿಡ್ನಿ ಸಮಸ್ಯೆ ಇರುವವರಿಗೆ ಹಾನಿಕಾರಕ. ಕೀಲು ನೋವು ಇರುವವರು ಕೂಡ ಮಜ್ಜಿಗೆ ಕುಡಿಯುವಾಗ ಎಚ್ಚರಿಕೆ ವಹಿಸಬೇಕು.