ಸುಮ್ ಸುಮ್ನೆ ಕೋಪ ಬರಲ್ಲ… ಈ ವಿಟಮಿನ್ ಕಡಿಮೆಯಾದ್ರೆ ಕೋಪ ಜಾಸ್ತಿಯಾಗುತ್ತಂತೆ!

ಕೋಪ ಸುಮ್ ಸುಮ್ನೆ ಬರುತ್ತೆ ಅಂದುಕೊಂಡ್ರಾ? ಖಂಡಿತಾ ಇಲ್ಲ. ಕೋಪ ಬರೋದಕ್ಕೆ ಒಂದು ವಿಟಮಿನ್ ಕೊರತೆ ಕಾರಣವಂತೆ. ಆ ವಿಟಮಿನ್ ಯಾವುದು ಅನ್ನೋದನ್ನು ನೋಡೋಣ. 
 

Which vitamin deficiency causes anger pav

ಕೋಪ ನಮ್ಮ ಸ್ವಭಾವದ ಒಂದು ಭಾಗವಾಗಿರಬಹುದು, ಆದರೆ ನೀವು ಪ್ರತಿಯೊಂದು ಸಣ್ಣ ವಿಷಯಕ್ಕೂ ಕೋಪಗೊಂಡರೆ ಅದರ ಹಿಂದಿನ ಕಾರಣ ದೇಹದಲ್ಲಿನ ಜೀವಸತ್ವಗಳು (vitamins) ಮತ್ತು ಖನಿಜಗಳ ಕೊರತೆಯಾಗಿರಬಹುದು ಅನ್ನೋದು ನಿಮಗೆ ಗೊತ್ತೇ?.
 

Which vitamin deficiency causes anger pav

ಹೌದು, ಪದೇ ಪದೇ ಕೋಪಗೊಳ್ಳೋದು (angry) ಸುಮ್ನೆ ಅಲ್ಲ. ಇದಕ್ಕೆ ವಿಟಮಿನ್ ಗಳು ಕಾರಣ. ನಮ್ಮ ದೇಹದಲ್ಲಿ ಎರಡು ಜೀವಸತ್ವಗಳ ಕೊರತೆಯಿದ್ದರೆ ನಾವು ಹೆಚ್ಚಾಗಿ ಕೋಪಗೊಳ್ಳುತ್ತೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆ ಜೀವಸತ್ವಗಳು ಯಾವುವು ಅನ್ನೋದನ್ನು ನೋಡೋಣ. 
 


ಮೊದಲನೇಯದಾಗಿ ವಿಟಮಿನ್ ಬಿ6. ಈ ವಿಟಮಿನ್ ಬಿ6 ನಮ್ಮ ದೇಹಕ್ಕೆ ಬಹಳ ಮುಖ್ಯವಾದ ವಿಟಮಿನ್ ಆಗಿದೆ. ಇವು ದೇಹದಲ್ಲಿ ಮೆದುಳಿನ ರಾಸಾಯನಿಕಗಳಂತೆ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಬಿ6 ನಮ್ಮ ದೇಹದಲ್ಲಿದ್ದರೆ ನಾವು ಆರೋಗ್ಯದಿಂದಿರಲು ಸಾಧ್ಯ. 
 

ನಿಮ್ಮ ಮೆದುಳು ಸರಿಯಾಗಿ  ಕಾರ್ಯನಿರ್ವಹಿಸಲು ನೀವು ಬಯಸಿದರೆ, ಈ ವಿಟಮಿನ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ದೇಹದಲ್ಲಿ ವಿಟಮಿನ್ ಬಿ6 ಕೊರತೆಯಿದ್ದರೆ ನಿಮಗೆ ಹೆಚ್ಚಾಗಿ ಕೋಪ ಬರಬಹುದು. ಹಾಗಾಗಿ ನಿಮ್ಮ ದೇಹದಲ್ಲಿ ವಿಟಮಿನ್ ಬಿ6 ಕೊರತೆ ಆಗದಂತೆ ನೋಡಿಕೊಳ್ಳೋದನ್ನು ಮರಿಬೇಡಿ.  
 

ಎರಡನೇಯದಾಗಿ ವಿಟಮಿನ್ ಬಿ 12, ಇದರ ಕೊರತೆಯಿಂದಲೂ ಕೋಪ ಬರುತ್ತೆ. ಇದಲ್ಲದೆ, ವಿಟಮಿನ್ ಬಿ 12 ಕೊರತೆಯಿಂದಾಗಿ, ನೀವು ದಣಿದ ಮತ್ತು ಆಲಸ್ಯ ಅನುಭವಿಸಬಹುದು. ಕೆಲವೊಮ್ಮೆ ನೀವು ಬಯಸದಿದ್ದರೂ ಸಹ ಕಿರಿಕಿರಿ ಅನುಭವಿಸಬಹುದು. ವಿಟಮಿನ್ ಬಿ 12 ಕೊರತೆಯು ನಿಮ್ಮನ್ನು ಖಿನ್ನತೆಗೆ (depression) ಒಳಗಾಗಿಸಬಹುದು. 

ಹಾಗಾಗಿ ನಿಮಗೆ ಅಥವಾ ನಿಮ್ಮ ಮನೆಯವರಿಗೆ ಕೋಪ ಜಾಸ್ತಿ ಬರುತ್ತಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಬಿ 6 ಹಾಗೂ ವಿಟಮಿನ್ ಬಿ 12 ಇರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಬಿ 6 (Vitamin B6)  ಅಂದ್ರೆ, ಮೊಟ್ಟೆ, ಕೋಳಿ, ಸೋಯಾಬಿನ್, ಕಡ್ಲೆ ಓಟ್ಸ್ ಮತ್ತು ಬಾಳೆಹಣ್ಣುಗಳು ಸೇರಿವೆ. 
 

ವಿಟಮಿನ್ ಬಿ12 (Vitamin B 12) ಹೆಚ್ಚಾಗಿರುವ ಆಹಾರಗಳು ಅಂದ್ರೆ, ಮೊಟ್ಟೆ, ಡೈರಿ ಉತ್ಪನ್ನಗಳು, ಮೀನು, ಮಾಂಸ. ಇವುಗಳನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇವಿಸಿ. ಇಲ್ಲವೇ ಸಪ್ಲಿಮೆಂಟ್ಸ್ ಸೇವಿಸೋದನ್ನು ಮರಿಬೇಡಿ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತೆ. 
 

Latest Videos

vuukle one pixel image
click me!