ಪರ್ಫೆಕ್ಟ್‌ ಫಿಗರ್‌ ಮೈಂಟೇನ್ ಮಾಡೋಕೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಏನ್ ತಿನ್ತಾರೆ?

Published : Feb 29, 2024, 01:30 PM IST

ಬಾಲಿವುಡ್‌ನ ದಂತಕಥೆಯಾಗಿ ಉಳಿದಿರುವ ನಟಿ ಶ್ರೀದೇವಿ. ಸೌಂದರ್ಯದಲ್ಲಿ ತಾಯಿಗೆ ತಕ್ಕ ಮಕ್ಕಳು ಜಾನ್ವಿ ಕಪೂರ್‌. ತಮ್ಮ ಮೈಮಾಟದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಪರ್ಫೆಕ್ಟ್‌ ಫಿಗರ್‌ಗಾಗಿ ಜಾನ್ವಿ ಕಪೂರ್‌ ಏನೆಲ್ಲಾ ಮಾಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

PREV
19
ಪರ್ಫೆಕ್ಟ್‌ ಫಿಗರ್‌ ಮೈಂಟೇನ್ ಮಾಡೋಕೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಏನ್ ತಿನ್ತಾರೆ?

ಬಾಲಿವುಡ್‌ನ ದಂತಕಥೆಯಾಗಿ ಉಳಿದಿರುವ ನಟಿ ಶ್ರೀದೇವಿ. ಸೌಂದರ್ಯದಲ್ಲಿ ತಾಯಿಗೆ ತಕ್ಕ ಮಕ್ಕಳು ಜಾನ್ವಿ ಕಪೂರ್‌. ತಮ್ಮ ಮೈಮಾಟದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.

29

ವಿಶೇಷವಾಗಿ ಜಾನ್ವಿ ತಮ್ಮ ಫಿಗರ್ ಮೈಂಟೇನ್ ಮಾಡುವತ್ತ ಹೆಚ್ಚು ಗಮನಹರಿಸುತ್ತಾರೆ. ಪರ್ಫೆಕ್ಟ್‌ ಫಿಗರ್‌ಗಾಗಿ ಜಾನ್ವಿ ಕಪೂರ್‌ ಏನೆಲ್ಲಾ ಮಾಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

39

ಕಾರ್ಡಿಯೋ ವ್ಯಾಯಾಮ
ಜಾನ್ವಿ ಕಪೂರ್ ತನ್ನ ದೇಹವನ್ನು ಕಾಪಾಡಿಕೊಳ್ಳಲು ಪ್ರತಿದಿನ 45 ನಿಮಿಷಗಳ ಕಾಲ ಓಡುವುದು, ಸೈಕ್ಲಿಂಗ್ ಮತ್ತು ನೃತ್ಯದಂತಹ ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಾರೆ.  

49

ನಿಯಮಿತವಾಗಿ ಕಾರ್ಡಿಯೋ ವ್ಯಾಯಾಮಗಳನ್ನು ಮಾಡುವುದರ ಜೊತೆಗೆ, ಜಾನ್ವಿ ಕಪೂರ್ ತೂಕ ಎತ್ತುವುದು, ಪುಶ್ ಅಪ್ಸ್ ಮತ್ತು ಸ್ಕ್ವಾಟ್‌ಗಳಂತಹ ಇತರ ದೈಹಿಕ ವ್ಯಾಯಾಮಗಳನ್ನು ಸಹ ಮಾಡುತ್ತಾರೆ. ಹೀಗಾಗಿ ತೂಕ ಹೆಚ್ಚಳವಾಗೋದಿಲ್ಲ.

59

ಆರೋಗ್ಯ ಕರ ಪಾನೀಯ 
ಜಾನ್ವಿ ಕಪೂರ್ ಸೌಂದರ್ಯದ ಹಿಂದೆ ಹಲವು ರಹಸ್ಯಗಳಿವೆ. ಈ ಚೆಲುವೆ ಬೆಳಿಗ್ಗೆ ಎದ್ದಾಗ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯುತ್ತಾರೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. 

69

ಉಪಾಹಾರ 
ಜಾನ್ವಿ ಕಪೂರ್ ಬೆಳಗ್ಗೆ ಹೆವಿಯಾದ ಯಾವುದೇ ಆಹಾರವನ್ನು ತಿನ್ನುವುದಿಲ್ಲ. ದೋಸೆ, ಪೋಹಾ, ಪರೋಟಾಗಳನ್ನು ಅವಾಯ್ಡ್ ಮಾಡುತ್ತಾರೆ. ಬದಲಿಗೆ ಬೆಳಗ್ಗೆ ಮೊಟ್ಟೆ, ಗ್ರೀನ್ ಟೀ ಮತ್ತು ಬ್ರೆಡ್ ಟೋಸ್ಟ್ ತಿನ್ನುತ್ತಾರೆ. 

79

ಮಧ್ಯಾಹ್ನದ ಊಟ 
ಜಾನ್ವಿ ಕಪೂರ್ ಮಧ್ಯಾಹ್ನ ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ಈ ಊಟವು ಫ್ರೈಡ್ ಚಿಕನ್ ಅಥವಾ ಮೀನು, ವಿವಿಧ ತರಕಾರಿಗಳು ಮತ್ತು ಬ್ರೌನ್ ರೈಸ್ ಅನ್ನು ಒಳಗೊಂಡಿರುತ್ತದೆ. ಜಾನ್ವಿ ಕಪೂರ್ ಉತ್ತಮ ಪ್ರೊಟೀನ್ ಆಹಾರ ಸೇವನೆಯಿಂದಾಗಿ ತುಂಬಾ ಆರೋಗ್ಯವಾಗಿದ್ದಾರೆ. 

89

ಸಂಜೆ ಸ್ನ್ಯಾಕ್ಸ್
ಜಾಹ್ನವಿ ಕಪೂರ್ ಸಂಜೆ ಸ್ನ್ಯಾಕ್ಸ್‌ಗೆ ಆರೋಗ್ಯಕರ ತಿಂಡಿಗಳನ್ನು ಮಾತ್ರ ಸೇವಿಸುತ್ತಾರೆ. ಹಣ್ಣಿನ ಸ್ಮೂಥಿಗಳು, ಬಾದಾಮಿ, ಪಿಸ್ತಾ, ಗೋಡಂಬಿಗಳನ್ನು ತಿನ್ನುತ್ತಾರೆ.

99

ರಾತ್ರಿಯ ಊಟ
ಜಾಹ್ನವಿ ಕಪೂರ್ ಎಷ್ಟೇ ಟೇಸ್ಟಿ ಆಗಿದ್ದರೂ ಹೊರಗಿನ ಆಹಾರವನ್ನು ತಿನ್ನುವುದಿಲ್ಲ. ರಾತ್ರಿಯಲ್ಲಿ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸುತ್ತಾರೆ. ರಾತ್ರಿಯಲ್ಲಿ ಚಿಕನ್ ಸಲಾಡ್ ಅಥವಾ ಬೇಯಿಸಿದ ಮೀನುಗಳನ್ನು ತಿನ್ನಲು ಇಷ್ಟಪಡುತ್ತಾರೆ.

Read more Photos on
click me!

Recommended Stories