ಮೂಸಂಬಿ ಹುಳಿ ಎಂದು ಇಗ್ನೋರ್ ಮಾಡ್ಬೇಡಿ… ಆರೋಗ್ಯದ ಜೊತೆ ಸೌಂದರ್ಯ ವರ್ಧನೆಗೂ ಬೆಸ್ಟ್

First Published | Feb 29, 2024, 12:44 PM IST

ಮೂಸಂಬಿ ಎವರ್ ಗ್ರೀನ್ ಹಣ್ಣಾಗಿದೆ. ಇದರ ಹುಳಿ ರುಚಿಯಿಂದಾಗಿ, ಜನರು ಇದನ್ನು ಹೆಚ್ಚಾಗಿ ಅವಾಯ್ಡ್ ಮಾಡ್ತಾರೆ. ಆದರೆ ಈ ಹುಳಿ ಹಣ್ಣು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ. ಕಿತ್ತಳೆಗಿಂತ ವಿಟಮಿನ್ ಸಿ ಹೆಚ್ಚಾಗಿರುವ ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. 
 

ಮೂಸಂಬಿ (Mosambi) ಹಣ್ಣನ್ನು ವಿಟಮಿನ್ ಸಿ ಯ ಶಕ್ತಿ ಕೇಂದ್ರ ಎಂದು ಕರೆದರೆ, ತಪ್ಪಲ್ಲ. ಇದರಲ್ಲಿರುವ ಈ ಗುಣದಿಂದಲೇ ಇದನ್ನು ಆರೋಗ್ಯಕ್ಕೆ ಉತ್ತಮ ಎನ್ನಲಾಗುವುದು. ಆದರೆ ಈ ಹಣ್ಣು ಹೆಚ್ಚು ಹುಳಿಯಾಗಿರುವುದರಿಂದ, ಹೆಚ್ಚಿನ ಜನ ಇದನ್ನು ತಿನ್ನೋದಿಲ್ಲ, ಆದರೆ ಇದನ್ನು ಜ್ಯೂಸ್ ಮಾಡಿ ಕುಡಿಯೋದಕ್ಕೆ ಜನ ಇಷ್ಟ ಪಡ್ತಾರೆ. ಈ ಹಣ್ಣು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ರೋಗನಿರೋಧಕ ವರ್ಧಕವಾಗಿ ಕೆಲಸ ಮಾಡುತ್ತೆ. ಅಂದರೆ, ನಮ್ಮ ದೇಹಕ್ಕೆ ಯಾವುದೇ ರೋಗ ಬರದಂತೆ ಈ ಹಣ್ಣು ತಡೆಯುತ್ತೆ. 
 

ಈ ಹಣ್ಣು ತಿನ್ನೋದ್ರಿಂದ ಅಥವಾ ಜ್ಯೂಸ್ ಕುಡಿಯೋದ್ರಿಂದ ದೇಹದ ಎಲ್ಲಾ ರೀತಿಯ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಜನರು ಬೇಗನೆ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ, ಅಷ್ಟೇ ಅಲ್ಲ ದೇಹದ ಮೇಲೆ ವಯಸ್ಸಿನ ಪರಿಣಾಮ ಕಡಿಮೆ ಮಾಡುವ ಶಕ್ತಿ ಕೂಡ ಈ ಹಣ್ಣಿಗಿದೆ. ಈ ಹಣ್ಣಿನಿಂದ ಇನ್ನು ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ. 

Latest Videos


ಆಂಟಿ ಏಜಿಂಗ್ ಗುಣ (anti ageing) : 
ಮೂಸಂಬಿ ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿಯಿಂದ ಸಮೃದ್ಧವಾಗಿದ್ದು, ಇದು ಜೀವಕೋಶಗಳಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಜೀವಕೋಶಗಳಲ್ಲಿನ ಫ್ರೀ ರಾಡಿಕಲ್ಲ್ ಗಳು ಸಹ ಕಡಿಮೆಯಾಗುತ್ತದೆ. ಇದರಿಂದ ನೀವು ಯಾವಾಗಲೂ ಯಂಗ್ ಆಗಿ ಕಾಣಲು ಸಹಾಯವಾಗುತ್ತದೆ. 

ಅಷ್ಟೇ ಅಲ್ಲ , ಮೂಸಂಬಿ ಹಣ್ಣಿನ ಸೇವನೆಯಿಂದ, ಚರ್ಮದಲ್ಲಿ ಕಾಲಜನ್ ಹೆಚ್ಚಾಗುತ್ತದೆ. ಕಾಲಜನ್ ಕಾರಣದಿಂದಾಗಿ, ಚರ್ಮವು ಮೃದುವಾಗಿ (soft skin) ಕಾಣುತ್ತದೆ. ಈ ರೀತಿಯಾಗಿ, ಸಮಯಕ್ಕೇ ಮೊದಲೇ ನೀವು ವಯಸ್ಸಾದವರಂತೆ ಕಾಣುವ ಅಪಾಯವನ್ನು ಈ ಹಣ್ಣು ಕಡಿಮೆ ಮಾಡುತ್ತದೆ. 

ಇಮ್ಯೂನಿಟಿ ಬೂಸ್ಟರ್ (immunity booster) : 
ಮೂಸಂಬಿ ರಸವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ . ನಮ್ಮ ರೋಗನಿರೋಧಕ ಶಕ್ತಿ ಬಲವಾದಾಗ ದೇಹದಲ್ಲಿ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಇದು ರೋಗಗಳು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಯಾವಾಗಲೂ ಆರೋಗ್ಯದಿಂದ ಇರಲು ಸಹಾಯ ಮಾಡುತ್ತೆ. 

ಸ್ನಾಯುಗಳನ್ನು ಬಲಪಡಿಸುತ್ತೆ (Strong Muscles) : 
ಕ್ರೀಡಾಪಟುಗಳು ಮೂಸಂಬಿ ಜ್ಯೂಸ್ ಕುಡಿಯೋದು ಉತ್ತಮ ಎಂದು ತಜ್ಞರು ಹೇಳುತ್ತಾರೆ.  ಏಕೆಂದರೆ ಮೂಸಂಬಿ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಸ್ನಾಯು ಸೆಳೆತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಮೂಸಂಬಿ ನಿರ್ಜಲೀಕರಣದ ಸಮಸ್ಯೆಯನ್ನು ನಿವಾರಿಸುತ್ತದೆ. ಕಷ್ಟಪಟ್ಟು ದುಡಿದು ಬೆವರು ಹರಿಸುವ ಜನರು ಇದನ್ನು ಸೇವಿಸೋದು ಉತ್ತಮ. 

ಸ್ಕರ್ವಿ ಕಾಯಿಲೆ (scurvy) :  
ವಿಟಮಿನ್ ಸಿ ಕೊರತೆಯು ಸ್ಕರ್ವಿಗೆ ಕಾರಣವಾಗುತ್ತದೆ. ಇದರಲ್ಲಿ, ವಸಡುಗಳಲ್ಲಿ ರಕ್ತಸ್ರಾವ, ಆಯಾಸ ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ಮೂಸಂಬಿ ಜ್ಯೂಸ್ ನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸಬೇಕು. 

ಚರ್ಮದ ಹೊಳಪು (shiny skin): 
ಚರ್ಮದ ಹೊಳಪನ್ನು ಹೆಚ್ಚಿಸಲು ಮೂಸಂಬಿ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಆಂಟಿ ಏಜಿಂಗ್ ಗುಣಲಕ್ಷಣಗಳನ್ನು ಹೊಂದಿದೆ, ಎರಡನೆಯದಾಗಿ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾದ ರೀತಿಯಲ್ಲಿ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಚರ್ಮಕ್ಕೆ ಹೊಳಪನ್ನು ತರಲು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಬೇಕಾಗುತ್ತವೆ. ಇದು ಚರ್ಮವನ್ನು ನಿರ್ಜಲೀಕರಣಗೊಳಿಸಲು ಅನುಮತಿಸುವುದಿಲ್ಲ. ಹಾಗಾಗಿ ಮೂಸಂಬಿ ಜ್ಯೂಸ್ ಸೇವಿಸಿ, ಚರ್ಮ ಹೊಳೆಯುವಂತೆ ಮಾಡಿ

click me!