ರಿವರ್ಸ್ ಡಯಟಿಂಗ್ ಎಂದರೇನು? ಈ ಟೆಕ್ನಿಕ್ ಆರೋಗ್ಯಕ್ಕೇಕೆ ಬೇಕು?

Published : Apr 04, 2023, 05:09 PM IST

ರಿವರ್ಸ್ ಡಯಟಿಂಗ್ ಈ ಪೌಷ್ಠಿಕಾಂಶದ ತಂತ್ರವು ಕ್ರೀಡಾಪಟುಗಳ ಫಿಟ್ನೆಸ್ ಫ್ರೀಕ್‌ಗಳಲ್ಲಿ ಅಥವಾ ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತೆ ಮತ್ತು ಅದರ ಪ್ರಯೋಜನಗಳು ಯಾವುವು ಎಂದು ತಿಳಿಯೋಣ.

PREV
18
ರಿವರ್ಸ್ ಡಯಟಿಂಗ್ ಎಂದರೇನು? ಈ ಟೆಕ್ನಿಕ್ ಆರೋಗ್ಯಕ್ಕೇಕೆ ಬೇಕು?

ರಿವರ್ಸ್ ಡಯಟಿಂಗ್(Reverse dieting) ಹೇಗೆ ಕೆಲಸ ಮಾಡುತ್ತೆ ?
ದೇಹದಲ್ಲಿ ಗಮನಾರ್ಹ ತೂಕ ಹೆಚ್ಚಳ ಅಥವಾ ಚಯಾಪಚಯ ಆಘಾತವಿಲ್ಲದೆ ಕ್ರಮೇಣ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸೋದು ರಿವರ್ಸ್ ಡಯಟಿಂಗ್‌ನ ಉದ್ದೇಶ. ಏನಿದು ರಿವರ್ಸ್ ಡಯಟಿಂಗ್? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ? 
 

28

ರಿವರ್ಸ್ ಡಯಟಿಂಗ್ ಪ್ರಕ್ರಿಯೆ
ಕ್ಯಾಲೊರಿ (Calorie) ಸೇವನೆ ಹೆಚ್ಚಾದಂತೆ, ದೇಹವು ಕ್ರಮೇಣ ಹೊಸ ಶಕ್ತಿಯ ಸೇವನೆಗೆ ಹೊಂದಿಕೊಳ್ಳುತ್ತೆ ಮತ್ತು ಚಯಾಪಚಯ ದರವು ಹೆಚ್ಚಾಗಲು ಪ್ರಾರಂಭಿಸುತ್ತೆ. ಈ ರೀತಿಯಾಗಿ, ಕ್ರಮೇಣ ಕ್ಯಾಲೊರಿಗಳನ್ನು ಹೆಚ್ಚಿಸುವ ಮೂಲಕ, ದೇಹ ಹೊಂದಿಕೊಳ್ಳಲು ಸಮಯ ಪಡೆಯುತ್ತೆ.

38

ರಿವರ್ಸ್ ಡಯಟಿಂಗ್ ನ ಪ್ರಯೋಜನಗಳು
ಈ ಪ್ರಕ್ರಿಯೆಯು ದೇಹವು ಹೆಚ್ಚುವರಿ ಕ್ಯಾಲೊರಿಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತೆ. ಅತಿಯಾದ ತೂಕ ಹೆಚ್ಚಳವನ್ನು(Weight gain) ತಡೆಯುತ್ತೆ. ದೀರ್ಘಕಾಲದವರೆಗೆ ಕಡಿಮೆ ಕ್ಯಾಲೊರಿ ಆಹಾರ ಸೇವಿಸುತ್ತಿರುವ ವ್ಯಕ್ತಿಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಬಹುದು.

48

ಚಯಾಪಚಯ ಕ್ರಿಯೆಯನ್ನು(Digestion) ಸುಧಾರಿಸುತ್ತೆ 
ರಿವರ್ಸ್ ಡಯಟಿಂಗ್ ಕ್ರಮೇಣ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸುವ ಮೂಲಕ ಮತ್ತು ದೀರ್ಘಕಾಲದ ಕ್ಯಾಲೊರಿ ನಿರ್ಬಂಧದೊಂದಿಗೆ ಸಂಭವಿಸುವ ಸ್ಲೋ ಡೈಜೆಷನ್ ತಡೆಯುವ ಮೂಲಕ ಚಯಾಪಚಯ ಕಾರ್ಯವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತೆ.

58

ದೀರ್ಘಕಾಲೀನ ತೂಕ(Weight) ಹೆಚ್ಚಳವನ್ನು ತಡೆಯುತ್ತೆ
ರಿವರ್ಸ್ ಡಯಟಿಂಗ್ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸುವ ಮೂಲಕ ದೇಹವು ಹೆಚ್ಚುವರಿ ಕ್ಯಾಲೊರಿಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಈ ತೂಕ ಹೆಚ್ಚಳವನ್ನು ತಡೆಯಬಹುದು.

68

ಮಸಲ್ ಮಾಸ್(Muscle mass) ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ
ಇದು ಮಸಲ್ ಮಾಸ್  ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಇದು ಮಾತ್ರವಲ್ಲ, ಸ್ನಾಯುಗಳನ್ನು ಕಾಪಾಡಿಕೊಳ್ಳಲು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಸಹ ಒದಗಿಸುತ್ತೆ.

78

ಹಾರ್ಮೋನುಗಳ ಸಮತೋಲನವನ್ನು(Harmone balance) ಸುಧಾರಿಸುತ್ತೆ 
 ದೀರ್ಘಕಾಲೀನ ಕ್ಯಾಲೊರಿ ನಿರ್ಬಂಧದೊಂದಿಗೆ ಸಂಭವಿಸಬಹುದಾದ ಹಾರ್ಮೋನುಗಳ ಅಸಮತೋಲನವನ್ನು ತಡೆಯುವ ಮೂಲಕ ಅವುಗಳನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತೆ.

88

ಕ್ರೀಡಾಪಟುಗಳಲ್ಲಿ ಜನಪ್ರಿಯ 
ಈ ಪೌಷ್ಠಿಕಾಂಶದ ತಂತ್ರವು ಕ್ರೀಡಾಪಟುಗಳು, ಫಿಟ್ನೆಸ್ ಫ್ರೀಕ್‌ಗಳು (Fitness freak) ಅಥವಾ ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಲ್ಲಿ ಹೆಚ್ಚು ಜನಪ್ರಿಯವಾಗಿದೆ. ನೀವೂ ಇದನ್ನು ಟ್ರೈ ಮಾಡುವ ಮೂಲಕ ಸುಲಭವಾಗಿ ತೂಕ ಇಳಿಕೆ ಮಾಡಬಹುದು. 
 

Read more Photos on
click me!

Recommended Stories