ಹೃದಯಾಘಾತದ ನಂತರ ರೋಗಿಗಳು ಯಾವ ಆಹಾರ ಸೇವಿಸಿದ್ರೆ ಒಳ್ಳೇಯದು?

First Published | Apr 4, 2023, 4:23 PM IST

ಹೃದಯಾಘಾತದ ನಂತರ, ರೋಗಿಯ ಜೀವನಶೈಲಿ ಮತ್ತು ಆಹಾರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು, ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ, ಆದ್ದರಿಂದ ಹೃದ್ರೋಗಿಗಳಿಗೆ ಯಾವ ರೀತಿಯ ಆಹಾರ ಉತ್ತಮ ಅನ್ನೋದನ್ನು ತಿಳಿಯೋಣ. 

ಹೃದಯಾಘಾತವು (heart attack) ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಇದು ವ್ಯಕ್ತಿಯ ತಕ್ಷಣದ ಸಾವಿಗೆ ಕಾರಣವಾಗಬಹುದು. ಹೃದಯ ಸ್ಥಂಬನ ಅಥವಾ ಹೃದಯಾಘಾತದ ಸಂದರ್ಭದಲ್ಲಿ, ಹೃದಯಕ್ಕೆ ರಕ್ತ ಮತ್ತು ಆಮ್ಲಜನಕವನ್ನು ಸಾಗಿಸುವ ಅಪಧಮನಿಯನ್ನು ಬ್ಲಾಕ್ ಮಾಡುತ್ತೆ. ಈ ತಡೆಯಿಂದ, ಹೃದಯದ ಸ್ನಾಯು ರಕ್ತ ಮತ್ತು ಆಮ್ಲಜನಕ ಪಡೆಯುವುದಿಲ್ಲ. ಈ ಕಾರಣದಿಂದಾಗಿ, ಹೃದಯದ ಮೇಲೆ ಸಾಕಷ್ಟು ಒತ್ತಡ ಉಂಟಾಗುತ್ತೆ.

ಹೃದಯಾಘಾತದ ನಂತರ, ರೋಗಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಬೇಕು, ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಆದ್ದರಿಂದ ಹೃದಯಾಘಾತದ ನಂತರ ಯಾವ ರೀತಿಯ ಆಹಾರ (food after heart attack) ಪ್ರಯೋಜನಕಾರಿ ಎಂದು ತಿಳಿದುಕೊಳ್ಳೋಣ. 
 

Latest Videos


ಆರೋಗ್ಯಕರ ಕೊಬ್ಬು ಸೇವಿಸಿ
ಒಣ ಹಣ್ಣುಗಳು, ಆವಕಾಡೊಗಳು (avacado), ಆಲಿವ್ ಎಣ್ಣೆ ಎಲ್ಲವೂ ಉತ್ತಮ ಕೊಬ್ಬನ್ನು ಹೊಂದಿರುತ್ತವೆ, ಇದು ಹೃದಯವನ್ನು ಆರೋಗ್ಯವಾಗಿಡಲು ಅವಶ್ಯಕವಾಗಿದೆ. ಆದ್ದರಿಂದ ಅವುಗಳನ್ನು ವಿಶೇಷವಾಗಿ ನಿಮ್ಮ ಆಹಾರದಲ್ಲಿ ಸೇರಿಸಿ. ಸಂಜೆ ಹಸಿವನ್ನು ಶಮನಗೊಳಿಸಲು ಹುರಿದ ವಸ್ತುಗಳ ಬದಲು ಬೆರಳೆಣಿಕೆಯಷ್ಟು ಬೀಜಗಳನ್ನು ಸೇವಿಸಿ. ಸಲಾಡ್ ಮತ್ತು ಊಟವನ್ನು ತಯಾರಿಸಲು ಆಲಿವ್ ಎಣ್ಣೆಯನ್ನು ಬಳಸಿ. 

ಒಮೆಗಾ 3 ಕೊಬ್ಬಿನಾಮ್ಲಗಳನ್ನು  (omega 3 faty acid) 
ಹೃದಯಾಘಾತದ ನಂತರ, ರೋಗಿಗಳು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ವಸ್ತುಗಳನ್ನು ತಮ್ಮ ಆಹಾರದಲ್ಲಿ ತೆಗೆದುಕೊಳ್ಳಬೇಕು. ಇದಕ್ಕಾಗಿ, ಸಾಲ್ಮನ್, ಟ್ರೌಟ್, ಟ್ಯೂನಾ ಮೀನುಗಳನ್ನು ತೆಗೆದುಕೊಳ್ಳಿ. ನೀವು ಸಸ್ಯಾಹಾರಿಗಳಾಗಿದ್ದರೆ, ಸೂರ್ಯಕಾಂತಿ ಬೀಜಗಳು, ಒಣ ಹಣ್ಣುಗಳು, ಹಸಿರು ತರಕಾರಿಗಳನ್ನು ಪ್ರಮುಖವಾಗಿ ಸೇರಿಸಿ. 

ಪ್ರೋಟೀನ್ ಆಹಾರ ಬಹಳ ಮುಖ್ಯ
ಹೃದಯಾಘಾತದ ನಂತರ, ಮಸೂರ, ಬೀನ್ಸ್, ಕಡಲೆ, ಚೀಸ್, ಪೀನಟ್ ಬಟರ್ (peanut butter), ವಿವಿಧ ರೀತಿಯ ತರಕಾರಿ, ಹಣ್ಣುಗಳು ಮತ್ತು ಬೀಜಗಳಂತಹ ಪ್ರೋಟೀನ್ ಸಮೃದ್ಧ ವಸ್ತುಗಳನ್ನು ಆಹಾರದಲ್ಲಿ ಸೇರಿಸಿ. 

 ಧಾನ್ಯಗಳು ಪ್ರಯೋಜನಕಾರಿ
ಹೃದಯಾಘಾತದ ನಂತರ, ಆಹಾರದಲ್ಲಿ ಧಾನ್ಯಗಳ ಪ್ರಮಾಣವನ್ನು ಹೆಚ್ಚಿಸಿ. ಇದರಲ್ಲಿ ಓಟ್ಸ್, ಬ್ರೌನ್ ರೈಸ್ (brown rice) ಸೇರಿವೆ. ದ್ವಿದಳ ಧಾನ್ಯಗಳ ಸೇವನೆಯು ಹೃದ್ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. 

ಜೀವಸತ್ವಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸಿ
ಸಾಕಷ್ಟು ಪ್ರಮಾಣದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಭರಿತ ವಸ್ತುಗಳನ್ನು (fiber food) ಸೇವಿಸಿ. ಇದಕ್ಕಾಗಿ, ಹಸಿರು ತರಕಾರಿಗಳು, ಸೀಸನಲ್ ಹಣ್ಣುಗಳು, ಬೀನ್ಸ್ ತಿನ್ನಬಹುದು.

click me!