ಹೆಚ್ಚಾಗಿ ನಾವು ಸ್ವೀಟ್ಸ್ ಖರೀದಿಸುವಾಗ ಅದರ ಮೇಲೆ ಬೆಳ್ಳಿ ಲೇಪ (silver vark) ಇರೋದನ್ನು ನೋಡಿರುತ್ತೇವೆ. ಆದ ಈ ಬೆಳ್ಳಿ ಲೇಪವನ್ನು ಹೇಗೆ ತಯಾರಿಸಲಾಗುತ್ತದೆ? ಬೆಳ್ಳಿ ಎಲೆ ಅಥವಾ ಬೆಳ್ಳಿಯ ಲೇಪವನ್ನು ಜೈವಿಕ ಸಕ್ರಿಯವಲ್ಲದ ಬೆಳ್ಳಿಯ ತುಂಡುಗಳನ್ನು ಹಾಕುವ ಮೂಲಕ ತಯಾರಿಸಲಾಗುತ್ತದೆ. ನಂತರ ಅದನ್ನು ಪೇಪರ್ಸ್ ನಡುವೆ ಇರಿಸಲಾಗುತ್ತದೆ, ಇದರಿಂದ ಅದು ಒಡೆಯುವುದಿಲ್ಲ.
2016 ರ ಸುದ್ದಿ ವಿವಾದ ಸೃಷ್ಟಿಸಿತ್ತು
2016 ರಲ್ಲಿ, ಎತ್ತುಗಳು ಮತ್ತು ಎಮ್ಮೆಗಳ ಕರುಳಿನ ಒಳಗೆ ಈ ಬೆಳ್ಳಿ ಇರಿಸಿ, ನಂತರ ತೆಳ್ಳಗೆ ಮಾಡುವುದಕ್ಕಾಗಿ ಸುತ್ತಿಗೆಯಿಂದ ಹೊಡೆಯಲಾಗುತ್ತದೆ ಎಂದು ಸುದ್ದಿಯಾಗಿತ್ತು. ಅದು ನಿಜವಾಗಿತ್ತು. ಆದಾಗ್ಯೂ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಾಣಿಗಳ ಬಳಕೆಯನ್ನು ನಿಷೇಧಿಸಿತು. ಅದರ ನಂತರ ಆ ವಿಧಾನ ಬದಲಾಯಿತು.
ಬೆಳ್ಳಿ ಲೇಪನ ಪ್ರಯೋಜನಗಳು (benefits of silver vark)
ಶುದ್ಧ ತಿನ್ನಬಹುದಾದ ಸಿಲ್ವರ್ ಫಾಯಿಲ್ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ನಂಬಲಾಗಿದೆ, ಇದು ಆರೋಗ್ಯವನ್ನು ಹೆಚ್ಚಿಸಲು ಮತ್ತು ಆಹಾರದ ಶೆಲ್ಫ್ ಲೈಫ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೈಜ ಮತ್ತು ನಕಲಿ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುವುದು? (how to findout fake and real silver vark)
ಅದನ್ನು ನಿಮ್ಮ ಬೆರಳುಗಳಿಂದ ಉಜ್ಜಿಕೊಳ್ಳಲು ಪ್ರಯತ್ನಿಸಿ. ಅದನ್ನು ಬೆರಳುಗಳ ಮೇಲೆ ಇರಿಸಿದ ಕೂಡಲೇ ತುಂಡುಗಳಾಗಿ ಒಡೆದರೆ, ಅದು ನಿಜವೆಂದು ಅರ್ಥಮಾಡಿಕೊಳ್ಳಿ. ಇದು ಸಂಭವಿಸದಿದ್ದರೆ, ಅಲ್ಯೂಮಿನಿಯಂ ಅನ್ನು ಅದರಲ್ಲಿ ಬೆರೆಸಲಾಗಿದೆ ಅನ್ನೋದನ್ನು ತಿಳಿಯಿರಿ.
ಸುಡುವ ಮೂಲಕ ಪರೀಕ್ಷೆ
ಬೆಳ್ಳಿಯ ಎಲೆಯ ಒಂದು ಸಣ್ಣ ತುಂಡನ್ನು ತೆಗೆದುಕೊಂಡು ಅದಕ್ಕೆ ಬೆಂಕಿ ಹಚ್ಚಿ (burn it). ಅದು ಸಣ್ಣ ಚೆಂಡಾಗಿ ಮಾರ್ಪಟ್ಟರೆ ಅದು ನಿಜ. ಸುಡುವ ಮೂಲಕ ಕಂದು ಅಥವಾ ಕಪ್ಪು ಅಂಶವು ಬಿಡುಗಡೆಯಾದರೆ, ಅದು ಕಲಬೆರಕೆಯಾಗಿದೆ.
ಅದನ್ನು ಬೆರಳಿಗೆ ಅಂಟಿಸಿ...
ಬೆಳ್ಳಿಯ ಎಲೆಯನ್ನು ನಿಮ್ಮ ಬೆರಳುಗಳ ಮೇಲೆ ಇರಿಸಿ ಮತ್ತು ಅದನ್ನು ನಿಮ್ಮ ಬೆರಳುಗಳಿಂದ ಒತ್ತಲು ಪ್ರಯತ್ನಿಸಿ. ಅದು ನಿಮ್ಮ ಬೆರಳುಗಳಿಗೆ ಅಂಟಿಕೊಂಡಿದ್ದರೆ ಅದು ನಿಜವಲ್ಲ. ಯಾಕೆಂದರೆ ಸಿಲ್ವರ್ ಫಾಯಿಲ್ ಬೆರಳಿಗೆ ಅಂಟಿಕೊಳ್ಳುವುದಿಲ್ಲ.
ಬೆಳ್ಳಿಯ ಲೇಪನ ಮಾಂಸಾಹಾರಿಯೇ? (Is SIlver vark is non begetarian?)
ಮೇಲೆ ಹೇಳಿದಂತೆ, 2016 ರಲ್ಲಿ, ಎಫ್ಎಸ್ಎಸ್ಎಐ ಪ್ರಾಣಿ ಬಳಕೆಯನ್ನು ನಿಷೇಧಿಸಿತು. ಈಗ ಬೆಳ್ಳಿಯ ಲೇಪನ ನಾನ್-ವೆಜ್ ಅಲ್ಲ, ಬೆಳ್ಳಿಯ ಲೇಪನವನ್ನು ಪ್ರಾಣಿಗಳನ್ನು ಬಳಸದೆಯೇ ತಯಾರಿಸುತ್ತಾರೆ. ಆದ್ದರಿಂದ ನಿಮ್ಮ ಸಿಹಿತಿಂಡಿಗಳನ್ನು ಕೂಲ್ ಆಗಿ ಎಂಜಾಯ್ ಮಾಡಿ. .