ನಾಸಲ್ ಪಾಲಿಪ್ಸ್ ಸರ್ಜರಿಯಿಂದ ಪ್ರಿಯಾಂಕ ಚೋಪ್ರಾ ಮೂಗು ಚಪ್ಪಟೆಯಾಯ್ತಂತೆ, ಏನದು?

First Published May 7, 2023, 5:26 PM IST

ಬಾಲಿವುಡ್ ನಟಿಯರು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಮೂಗು, ತುಟಿ, ಕೆನ್ನೆ, ಎದೆ ಎಂದು ನಾನಾ ಸರ್ಜರಿ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಹಾಗೆಯೇ ಸದ್ಯ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಹಿಂದೆ ಮೂಗು ಸರ್ಜರಿ ಮಾಡಿಸಿಕೊಂಡಿರೋ ವಿಚಾರ ಸುದ್ದಿಯಲ್ಲಿದೆ.

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸದ್ಯ ತಮ್ಮ ಸ್ಪೈ ಥ್ರಿಲ್ಲರ್ ಸಿರೀಸ್ ಸಿಟಾಡೆಲ್‌ಗಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಮೂಗಿನ ಪಾಲಿಪ್ಸ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಬಹಿರಂಗಪಡಿಸಿದರು. ಇದರಿಂದಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಾಗಿ ತಿಳಿಸಿದರು.

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ 'ದಿ ಹೊವಾರ್ಡ್ ಸ್ಟರ್ನ್' ಶೋನಲ್ಲಿ ತಮ್ಮ ಜೀವನದಲ್ಲಿ ಒಂದು ಕರಾಳ ಹಂತವಿದೆ ಎಂದು ಹೇಳಿದ್ದರು, ಇದರಿಂದಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ, ಮನೆಯಿಂದ ಹೊರಬರಲಿಲ್ಲ. ತನ್ನ ವೃತ್ತಿಜೀವನ ಮುಗಿಯಿತು ಎಂದು ಅವರು ಭಾವಿಸಿದ್ದೆ ಎಂದು ತಿಳಿಸಿದ್ದರು. ಇದರ ಹಿಂದಿನ ಕಾರಣ ಅವರ ಮೂಗಿನ ಶಸ್ತ್ರಚಿಕಿತ್ಸೆ ಎಂಬುದನ್ನು ಬಹಿರಂಗಪಡಿಸಿದ್ದರು.

Latest Videos


ಪ್ರಿಯಾಂಕಾ ಚೋಪ್ರಾಗೆ ಉಸಿರಾಟದ ತೊಂದರೆ ಇತ್ತು. ಅವರು ಮೂಗಿನ ಪಾಲಿಪ್ಸ್ ಹೊಂದಿದ್ದರು. ಈ ಬಗ್ಗೆ ವೈದ್ಯರ ಬಳಿ ಕೇಳಿದಾಗ ಅವರು ಮೂಗಿನಲ್ಲಿರುವ ಪಾಲಿಪ್ಸ್ ಒಂದನ್ನು ತೆಗೆದುಹಾಕಲು ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಶಸ್ತ್ರಚಿಕಿತ್ಸಕರ ತಪ್ಪಿನಿಂದ, ಮುಖವು ಸಂಪೂರ್ಣವಾಗಿ ವಿಭಿನ್ನವಾಗಿತ್ತು ಮತ್ತು ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಪ್ರಿಯಾಂಕ ಚೋಪ್ರಾ ಹೇಳುತ್ತಾರೆ.

ನನ್ನ ಮೂಗು ಚಪ್ಪಟೆಯಾಗಿತ್ತು, ಇದರಿಂದಾಗಿ ನನ್ನ ಸಂಪೂರ್ಣ ಮುಖದ ಸೌಂದರ್ಯ ಹಾಳಾಯಿತು. ಆಗ ಅದನ್ನು ಸರಿಪಡಿಸಲು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ತಂದೆ ಸಲಹೆ ನೀಡಿದರು ಎಂದು ಪಿಗ್ಗಿ ಮಾಹಿತಿ ನೀಡಿದ್ದಾರೆ.

ತನ್ನ ತಂದೆಯ ಸಲಹೆಯನ್ನು ಅನುಸರಿಸಿ, ಭಯದಿಂದ ಮತ್ತೆ ಮೂಗಿನ ಶಸ್ತ್ರಚಿಕಿತ್ಸೆ ಮಾಡಿದೆ. ಆ ವೇಳೆ ಆಪರೇಷನ್ ರೂಮಿನಲ್ಲಿ ತಂದೆಯೂ ಇದ್ದರು. ಆ ನಂತರ ಎಲ್ಲವೂ ಸರಿಯಾಯಿತು. ಮುಖದ ಶೇಪ್‌ ಸಹ ಸರಿಯಾಯಿತು ಎಂದು ಪ್ರಿಯಾಂಕ ಚೋಪ್ರಾ ತಿಳಿಸಿದರು.

ಮೂಗಿನ ಪಾಲಿಪ್ಸ್ ಎಂದರೇನು?
ಮೂಗಿನ ಪಾಲಿಪ್ಸ್ ಮೃದುವಾದ, ನೋವುರಹಿತ, ಕ್ಯಾನ್ಸರ್ ರಹಿತ ಉಂಡೆಗಳಾಗಿವೆ. ಇದು ಮೂಗಿನ ಒಳಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದಕ್ಕೆ ಕಾರಣವೇನು ಎಂದು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. 

ಮೂಗಿನ ಪಾಲಿಪ್ಸ್‌ನ ಲಕ್ಷಣಗಳು
ಉಸಿರಾಟದ ಸಮಸ್ಯೆ
ಸ್ರವಿಸುವ ಮೂಗು
ವಾಸನೆ ಮತ್ತು ರುಚಿಯ ನಷ್ಟ
ಮುಖದ ನೋವು ಅಥವಾ ಒತ್ತಡ
ಗೊರಕೆ ಅಥವಾ ನಿದ್ರೆಯಲ್ಲಿ ಉಸಿರುಕಟ್ಟುವಿಕೆ
ತಲೆನೋವು ಮತ್ತು ತುರಿಕೆ ಕಣ್ಣುಗಳು
ಸೈನಸ್ ಸೋಂಕುಗಳು

ಮೂಗಿನ ಪಾಲಿಪ್ಸ್‌ಗೆ ಚಿಕಿತ್ಸೆ ಏನು?
ಚಿಕಿತ್ಸೆಯು ಮೂಗಿನೊಳಗಿನ ಪಾಲಿಪ್ಸ್ ಗಾತ್ರವನ್ನು ಅವಲಂಬಿಸಿರುತ್ತದೆ. ಇದು ತುಂಬಾ ಚಿಕ್ಕದಾಗಿದ್ದರೆ, ಊತವನ್ನು ಕಡಿಮೆ ಮಾಡಲು ಔಷಧವನ್ನು ನೀಡಲಾಗುತ್ತದೆ. ಸ್ಟಿರಾಯ್ಡ್ ನೋಸ್ ಸ್ಪ್ರೇ ಅನ್ನು ವೈದ್ಯರು ಸಹ ನೀಡುತ್ತಾರೆ. ಅದು ಬೆಳೆದು ಸಮಸ್ಯೆ ಹೆಚ್ಚಾದರೆ ಸರ್ಜರಿ ಮಾಡಿ ತೆಗೆದುಹಾಕಲಾಗುತ್ತದೆ.

click me!