Health Tips: ಇದು ಬ್ರೈನ್ ಸ್ಟ್ರೋಕ್ ಲಕ್ಷಣ… ಕಡೆಗಣಿಸಿದರೆ ಅಪಾಯ

First Published May 5, 2023, 7:00 AM IST

ಬ್ರೈನ್ ಸ್ಟ್ರೋಕ್ ಉಂಟಾದಾಗ, ಮೆದುಳಿನ ರಕ್ತನಾಳ ಸ್ಫೋಟಗೊಳ್ಳುತ್ತದೆ. ಆದರೆ ಇದಕ್ಕಿಂತ ಮುಂಚಿತವಾಗಿ ಒಂದು ಸಣ್ಣ ಅಟ್ಯಾಕ್ ಆಗೋದನ್ನು ನೋಡಬಹುದು. ರೋಗಲಕ್ಷಣಗಳನ್ನು ಗುರುತಿಸುವ ಮೂಲಕ  ಬ್ರೈನ್ ಸ್ಟ್ರೋಕ್ ತಪ್ಪಿಸಬಹುದು.

ಮೆದುಳಿನಲ್ಲಿ ನರವನ್ನು ನಿರ್ಬಂಧಿಸಿದಾಗ, ಬ್ರೈನ್ ಸ್ಟ್ರೋಕ್ ಉಂಟಾಗುತ್ತೆ. ಇದು ಮಾರಣಾಂತಿಕ ಸ್ಥಿತಿಯಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸಬಹುದು. ಆದರೆ ಮಿನಿ ಬ್ರೈನ್ ಸ್ಟ್ರೋಕ್ ಬಗ್ಗೆ ನಿಮಗೆ ತಿಳಿದಿದೆಯೇ? ಇದು ದೊಡ್ಡ ಅಟ್ಯಾಕ್ ಆಗುವ ಮುನ್ನವೇ ಸಂಭವಿಸುತ್ತೆ ಇದರ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ, ಇದನ್ನು ಸಮಯಕ್ಕೆ ಸರಿಯಾಗಿ ಗುರುತಿಸುವ ಮೂಲಕ ದೊಡ್ಡ ಅಟ್ಯಾಕ್ ತಪ್ಪಿಸಬಹುದು. ಇದನ್ನು ಮಿನಿ ಬ್ರೈನ್ ಸ್ಟ್ರೋಕ್ ಅಥವಾ ತಾತ್ಕಾಲಿಕ ಇಸ್ಕೀಮಿಕ್ ದಾಳಿ ಎಂದು ಕರೆಯಲಾಗುತ್ತದೆ; ಅಲ್ಲದೇ ಇದನ್ನ ಟಿಐಎ ಎಂದೂ ಸಹ ಕರೆಯುತ್ತಾರೆ. (Mini Stroke or Transient Ischaemic Attack; TIA) 
 

ಮಿನಿ ಬ್ರೈನ್ ಸ್ಟ್ರೋಕ್ ಯಾವಾಗ ಸಂಭವಿಸುತ್ತೆ?
ಬ್ರೈನ್ ಸ್ಟ್ರೋಕ್
ನಂತೆ, ಸಣ್ಣ ಮೆದುಳಿನ ದಾಳಿಯು ( Mini brain attack) ಮೆದುಳಿನ ರಕ್ತನಾಳವನ್ನು ನಿರ್ಬಂಧಿಸುವುದರಿಂದ ಬರುತ್ತದೆ. ಎನ್ಎಚ್ಎಸ್ ಪ್ರಕಾರ, ಇದು ಮೆದುಳಿಗೆ ಆಮ್ಲಜನಕ (Oxygen) ಪಡೆಯುವುದನ್ನು ನಿಲ್ಲಿಸಲು ಕಾರಣವಾಗುತ್ತದೆ. ಆದರೆ ಈ ಹಾನಿಯು ಶಾಶ್ವತವಲ್ಲ ಮತ್ತು 24 ಗಂಟೆಗಳಲ್ಲಿ ತಾನಾಗಿಯೇ ಗುಣವಾಗುತ್ತದೆ. ಆದರೆ ಅದರ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಬದಲಾಗಿ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಬೇಕು

ಮಿನಿ ಬ್ರೈನ್ ಸ್ಟ್ರೋಕ್ ರೋಗಲಕ್ಷಣಗಳನ್ನು ತಿಳಿಯಿರಿ ( Mini Stroke Symptoms)
ದೇಹದ ಒಂದು ಬದಿಯಲ್ಲಿ ಮುಖ, ತೋಳುಗಳು ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ದೌರ್ಬಲ್ಯ
ಹಠಾತ್ ಗೊಂದಲ
ಮಾತನಾಡಲು ಹಠಾತ್ ತೊಂದರೆ
ಇದ್ದಕ್ಕಿದ್ದಂತೆ ನೋಡಲು ತೊಂದರೆ
ಹಠಾತ್ ದೈಹಿಕ ಸಮತೋಲನ ನಷ್ಟ
ನಡೆಯಲು ಹಠಾತ್ ತೊಂದರೆ
ತಲೆತಿರುಗುವಿಕೆ
ತೀವ್ರ ತಲೆನೋವು
ನುಂಗಲು ಕಷ್ಟವಾಗೋದು

ರೋಗಲಕ್ಷಣಗಳು 24 ಗಂಟೆಗಳಲ್ಲಿ ಕಣ್ಮರೆಯಾಗುತ್ತವೆ
ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ (blood clot) ಮಿನಿ ಬ್ರೈನ್ ಸ್ಟ್ರೋಕ್ ಸಂಭವಿಸುತ್ತದೆ. ಈ ಕಾರಣದಿಂದಾಗಿ ರಕ್ತವು ಸಂಪೂರ್ಣ ಸ್ವಾತಂತ್ರ್ಯದಿಂದ ಚಲಿಸಲು ಸಾಧ್ಯವಾಗೋದಿಲ್ಲ. ಆದರೆ ಈ ರಕ್ತ ಹೆಪ್ಪುಗಟ್ಟುವಿಕೆ ತಾತ್ಕಾಲಿಕವಾಗಿದ್ದು, ಯಾವುದೇ ಸಮಯದಲ್ಲಿ ಕರಗುತ್ತವೆ. ಆದರೆ ಈ ಸ್ಥಿತಿಯನ್ನು ನಿರ್ಲಕ್ಷಿಸಬಾರದು..

ಮಿನಿ ಸ್ಟ್ರೋಕ್ ತಪ್ಪಿಸಲು ಸಲಹೆಗಳು
ಮಿನಿ ಸ್ಟ್ರೋಕ್ ಅಥವಾ ಬ್ರೈನ್ ಸ್ಟ್ರೋಕ್ ತಪ್ಪಿಸುವ ಮಾರ್ಗಗಳು ಒಂದೇ ಆಗಿರುತ್ತವೆ.ಅದಕ್ಕಾಗಿ ನೀವು ಏನು ಮಾಡಬೇಕು ನೋಡೋಣ : 
ಧೂಮಪಾನ ಮತ್ತು ಮದ್ಯಪಾನವನ್ನು ನಿಲ್ಲಿಸಿ. (quit smoking and drinking)
ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಸೇವಿಸಿ.
ದೇಹದ ತೂಕವನ್ನು ನಿಯಂತ್ರಣದಲ್ಲಿಡಿ.
ನಿಯಮಿತವಾಗಿ ವ್ಯಾಯಾಮ ಮಾಡಿ.
ಕೊಬ್ಬಿನ ಸೇವನೆ ಕಡಿಮೆ ಮಾಡಿ.
ಟೈಪ್ 2 ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಲೇ ಇರಿ.

ಬ್ರೈನ್ ಸ್ಟ್ರೋಕ್ ತಡೆಗಟ್ಟುವ ಆಹಾರಕ್ರಮ
ಮೆದುಳಿನ
ಪಾರ್ಶ್ವವಾಯುವನ್ನು ತಪ್ಪಿಸಲು, ಕಡಿಮೆ ಕೊಬ್ಬು, ಕಡಿಮೆ ಉಪ್ಪು ಹೊಂದಿರುವ ಹೆಚ್ಚಿನ ಫೈಬರ್ (Fiber) ಆಹಾರವನ್ನು ತೆಗೆದುಕೊಳ್ಳಬೇಕು. ಇವು ದೇಹದಲ್ಲಿ ರಕ್ತಪರಿಚಲನೆ ಚೆನ್ನಾಗಿ ಆಗಲು ಸಹಾಯ ಮಾಡುತ್ತೆ. ಇದರಿಂದ ಬ್ರೈನ್ ಸ್ಟ್ರೋಕ್ ಅಪಾಯ ಕೂಡ ಕಡಿಮೆ. 

ಬ್ರೈನ್ ಸ್ಟ್ರೋಕ್ ತಪ್ಪಿಸಲು ಈ ಆಹಾರಗಳನ್ನು ತಿನ್ನಬಹುದು  
ಪೇರಳೆ ಹಣ್ಣು, ಸ್ಟ್ರಾಬೆರಿ, ಆವಕಾಡೊ, ಸೇಬು, ಬಾಳೆಹಣ್ಣು, ಕ್ಯಾರೇಟ್, ಬೀಟ್ರೂಟ್ (Beetroot), ಬ್ರೊಕೊಲಿ, ಪಾಲಕ್, ಟೊಮಾಟೋ (Tomato), ಬೇಳೆಕಾಳುಗಳು, ಕಿಡ್ನಿ ಬೀನ್ಸ್ (Kidney Beans), ಚೋಲೆ, ಕ್ವಿನೋವಾ, ಓಟ್ಸ್, ಬಾದಾಮಿ, ಚಿಯಾ ಸೀಡ್ಸ್ , ಗೆಣಸು ಇತ್ಯಾದಿ. 

click me!