Health Tips: ಹೆಚ್ಚಿನ ಜನರನ್ನು ಕಾಡುತ್ತಿದೆ ಕೊಲೈಟಿಸ್ ರೋಗ… ಏನಿದು ಸಮಸ್ಯೆ ತಿಳಿಯಿರಿ

First Published | Sep 23, 2022, 5:48 PM IST

ಇತ್ತೀಚಿನ ದಿನಗಳಲ್ಲಿ, ಕೊಲೈಟಿಸ್ ಸಮಸ್ಯೆಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕೇಳುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಹೆಚ್ಚಿನ ಜನರಿಗೆ ಈ ರೋಗ ಅದರ ಹೆಸರಿನಿಂದ ತಿಳಿದಿರೋದಿಲ್ಲ, ಇದನ್ನು ಸಾಮಾನ್ಯವಾಗಿ ಹೊಟ್ಟೆಯ ಉರಿಯೂತ, ಕರುಳುಗಳಲ್ಲಿ ಉರಿಯೂತ ಎಂದು ಕರೆಯಲಾಗುತ್ತೆ. ಜಠರದಲ್ಲಿ ಈ ಉರಿಯೂತವು ಸಾಮಾನ್ಯವಾಗಿ ದೊಡ್ಡ ಕರುಳಿನ ಕೆಳಭಾಗದಲ್ಲಿ, ಗುದನಾಳದ ಬಳಿ ಸಂಭವಿಸುತ್ತೆ. ಆರಂಭದಲ್ಲಿ ಗಮನಿಸದಿದ್ದರೆ, ಅದು ಇಡೀ ಕರುಳನ್ನು ಆವರಿಸುತ್ತೆ ಮತ್ತು ವ್ಯಕ್ತಿ ಮೋಷನ್ನಲ್ಲಿ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸುತ್ತಾನೆ. ಈ ರೋಗದ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಗಳು ಇಲ್ಲಿವೆ...

ಕೊಲೈಟಿಸ್ (Colitis) ಎಂದರೇನು?
ಕೊಲೈಟಿಸ್ ದೊಡ್ಡ ಕರುಳಿನ ಉರಿಯೂತದ ಕಾಯಿಲೆಯಾಗಿದ್ದು, ಇದು ಗುದನಾಳ ಮತ್ತು ಕರುಳಿಗೆ ಸಂಪೂರ್ಣವಾಗಿ ಹರಡುತ್ತೆ. ಈ ರೋಗದಿಂದ ಬಳಲುತ್ತಿರುವಾಗ, ರೋಗಿಯ ದೊಡ್ಡ ಕರುಳಿನ ಪದರದ ಸೆಲ್ಸ್ ನಾಶವಾಗಲು ಪ್ರಾರಂಭಿಸುತ್ತೆ ಮತ್ತು ಹೊಸ ಸೆಲ್ಸ್ ರೂಪುಗೊಳ್ಳೋದನ್ನು ನಿಲ್ಲಿಸುತ್ತೆ. ಈ ಸಮಯದಲ್ಲಿ, ದೊಡ್ಡ ಕರುಳಿನಲ್ಲಿ ಹುಣ್ಣು (ಗುಳ್ಳೆಗಳು) ರೂಪುಗೊಳ್ಳಲು ಪ್ರಾರಂಭಿಸುತ್ತವೆ, ಇದರಿಂದಾಗಿ ಕರುಳು ಚಲಿಸುವಾಗ ಕೀವು, ಲೋಳೆ ಅಥವಾ ರಕ್ತಸ್ರಾವ ಪ್ರಾರಂಭವಾಗುತ್ತೆ.

ಕೊಲೈಟಿಸ್ ಸಮಸ್ಯೆಯ ಲಕ್ಷಣಗಳು ಹೀಗಿವೆ : 
ರಿಪೀಟೆಡ್ ಮೊಷನ್ ಬರೋಹಾಗೆ ತೀಕ್ಷ್ಣವಾದ ಒತ್ತಡದ ಅನುಭವವಾಗುತ್ತೆ, ಆದರೆ ಮಲ ಬರೋದಿಲ್ಲ.
ಕಿಬ್ಬೊಟ್ಟೆಯ ನೋವು ಮತ್ತು ಸೆಳೆತ
ಸ್ವಲ್ಪ ಮಾತ್ರ ಹಸಿವಾಗೋದು ಅಥವಾ ಹಸಿವೇ ಆಗದಿರೋದು 
ಗುದನಾಳದಲ್ಲಿ ನೋವು

Latest Videos


ಮೋಶನ್ ಸಮಯದಲ್ಲಿ ಗುದನಾಳದ ಮಾರ್ಗಗಳಿಂದ ರಕ್ತಸ್ರಾವ
ಪದೇ ಪದೇ ತೂಕ ಇಳಿಕೆಯಾಗೋದು(Weightloss) 
ಎಲ್ಲಾ ಸಮಯದಲ್ಲೂ ಸುಸ್ತು ಮತ್ತು ಹಾಸಿಗೆಯಿಂದ ಮೇಲೇಳೋ ಮನಸ್ಸಾಗದಿರೋದು 
ಕೀಲು ನೋವು
ಇವುಗಳನ್ನು ಹೊರತುಪಡಿಸಿ, ಇತರ ಅನೇಕ ರೋಗಲಕ್ಷಣಗಳು ಕೊಲೈಟಿಸ್ ಅನ್ನು ಸೂಚಿಸುತ್ತವೆ. ಇವು ವ್ಯಕ್ತಿಯ ದೇಹ ಮತ್ತು ರೋಗದ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತೆ.

ಕೊಲೈಟಿಸ್ ನ ವಿಧ ಮತ್ತು ಕಾರಣಗಳು
ಕೊಲೈಟಿಸ್ ನಲ್ಲಿ ಮುಖ್ಯವಾಗಿ 4 ವಿಧಗಳಿವೆ. ಪ್ರತಿಯೊಂದು ಸಮಸ್ಯೆಯ ಕಾರಣವು ವಿಭಿನ್ನವಾಗಿರುತ್ತೆ ಮತ್ತು ಅದರ ರೋಗಲಕ್ಷಣಗಳು (Symptoms) ವಿಭಿನ್ನ ಜನರಲ್ಲಿ ವಿಭಿನ್ನವಾಗಿರಬಹುದು. ಯಾವುವು ಆ ವಿಧಗಳನ್ನು ಅವುಗಳನ್ನು ಪತ್ತೆ ಹಚ್ಚೋದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ಅಲ್ಸರೇಟಿವ್ ಕೊಲೈಟಿಸ್: ಇದು ಅತ್ಯಂತ ಸಾಮಾನ್ಯ ರೀತಿಯ ಕೊಲೈಟಿಸ್ ಆಗಿದೆ ಮತ್ತು ಕೆಲವು ಸೂಕ್ಷ್ಮಜೀವಿಗಳ ಕಡೆಗೆ ಒಬ್ಬರ ಸ್ವಂತ ದೇಹದ ರೋಗನಿರೋಧಕ ಶಕ್ತಿಯು ಅತಿಯಾಗಿ ಸಕ್ರಿಯವಾದಾಗ ಸಂಭವಿಸುತ್ತೆ. ಉದಾಹರಣೆಗೆ  ಜೀರ್ಣಾಂಗವ್ಯೂಹದಲ್ಲಿ(Digestive system) ಇರುವ ಬ್ಯಾಕ್ಟೀರಿಯಾಗಳು.  ಅಲ್ಸರೇಟಿವ್ ಕೊಲೈಟಿಸ್ ಸಹ ತನ್ನದೇ ಆದ ಅನೇಕ ವಿಧಗಳನ್ನು ಹೊಂದಿದೆ.

ಇಸ್ಕೆಮಿಕ್ ಕೊಲೈಟಿಸ್: ಕರುಳು ಅಥವಾ ದೊಡ್ಡ ಕರುಳಿನ ಕೆಳಭಾಗಕ್ಕೆ ರಕ್ತದ ಹರಿವು ತಾತ್ಕಾಲಿಕವಾಗಿ ಅಡ್ಡಿಪಡಿಸಿದಾಗ, ಜೀರ್ಣಾಂಗ ವ್ಯವಸ್ಥೆಯ ಜೀವಕೋಶಗಳು ಸಾಕಷ್ಟು ಆಮ್ಲಜನಕ ಮತ್ತು ರಕ್ತದ ಹರಿವನ್ನು ಪಡೆಯೋದಿಲ್ಲ. ಈ ಕಾರಣದಿಂದಾಗಿ, ಈ ಸೆಲ್ಸ್(Cells) ಹಾನಿಗೊಳಗಾಗಲು ಪ್ರಾರಂಭಿಸುತ್ತವೆ. ಈ ಸ್ಥಿತಿಯನ್ನು ಇಸ್ಕೆಮಿಕ್ ಕೊಲೈಟಿಸ್ ಎನ್ನಲಾಗುತ್ತೆ.

ಮೈಕ್ರೋಸ್ಕೋಪಿಕ್ ಕೊಲೈಟಿಸ್: ಮೈಕ್ರೋಸ್ಕೋಪಿಕ್ ಕೊಲೈಟಿಸ್ ನಲ್ಲಿ ಎರಡು ವಿಧಗಳಿವೆ. ಮೈಕ್ರೋಸ್ಕೋಪ್(Microscope) ಮೂಲಕ ಕರುಳಿನಿಂದ ಒಂದು ಮಾದರಿಯನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ಅದರ ಪ್ರಕಾರವನ್ನು ಕಂಡುಹಿಡಿಯಲಾಗುತ್ತೆ  ಮತ್ತು ಚಿಕಿತ್ಸೆ ನೀಡಲಾಗುತ್ತೆ.

ಶಿಶುಗಳಲ್ಲಿ ಅಲರ್ಜಿಕ್ ಕೊಲೈಟಿಸ್: ಈ ಕೊಲೈಟಿಸ್ ಚಿಕ್ಕ ಮಕ್ಕಳಲ್ಲಿ ಮಾತ್ರ ಕಂಡುಬರುತ್ತೆ. ಇದರಲ್ಲಿ, ಮಗುವಿನ(Child) ಪ್ರತಿರಕ್ಷಣಾ ವ್ಯವಸ್ಥೆಯು ಹಸುವಿನ ಹಾಲಿನಲ್ಲಿ ಕಂಡುಬರುವ ನಿರ್ದಿಷ್ಟ ಪ್ರೋಟೀನ್ ಕಡೆಗೆ ಅತಿಯಾಗಿ ಕಾರ್ಯನಿರ್ವಹಿಸುತ್ತೆ, ಇದು ಮಕ್ಕಳ ಕರುಳಿನಲ್ಲಿ ಊತಕ್ಕೆ ಕಾರಣವಾಗುತ್ತೆ.

ಕೊಲೈಟಿಸ್ ಚಿಕಿತ್ಸೆ 
ಒಮ್ಮೆ ಕೊಲೈಟಿಸ್ ಉಂಟಾದರೆ, ಸಂಪೂರ್ಣವಾಗಿ ಚೇತರಿಸಿಕೊಳ್ಳುವುದು ಕಷ್ಟ. ಆದರೆ ಅದನ್ನು ಎಷ್ಟು ನಿಯಂತ್ರಿಸಬಹುದು ಎಂದರೆ ವ್ಯಕ್ತಿಯು ಸಾಮಾನ್ಯ ಜೀವನವನ್ನು ನಡೆಸಬಹುದು. ಹಾಗಾಗಿ ಒಳ್ಳೆಯ ಲೈಫ್ ಸ್ಟೈಲ್ ನಿಂದ  ಕೊಲೈಟಿಸ್ ಬರದಂತೆ ನೋಡಿಕೊಳ್ಳಿ. ಉತ್ತಮ ಲೈಫ್ ಸ್ಟೈಲ್(Lifestyle), ಆಹಾರ ಅಭ್ಯಾಸ ರೂಢಿಸಿಕೊಂಡು ಸಮಸ್ಯೆಯನ್ನು ನಿವಾರಿಸಿ. 

click me!