ಮಸಾಲೆಯುಕ್ತ ಚಟ್ನಿ, ಅಥವಾ ಯಾವುದೇ ಸ್ಪೈಸಿ ಆಹಾರ (spicy food) ತಿಂದಾಗ ಬಾಯಿ ಖಾರ ಆಗುತ್ತೆ, ಮುಖ ಕೆಂಪಾಗುತ್ತೆ, ಮೈಯೆಲ್ಲಾ ಬಿಸಿಯಾಗಲು ಆರಂಭಿಸುತ್ತೆ, ಇದರ ಮೇಲೆ, ನೀವು ಬಿಸಿ ನೀರು ಕುಡಿದ್ರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅನೇಕ ಜನರಿಗೆ ಸ್ಪೈಸಿ ಆಹಾರ ತಿನ್ನೋದಕ್ಕೆ ಸಾಧ್ಯವಾಗೋದಿಲ್ಲ. ಅವರು ತಮ್ಮ ಆಹಾರದಲ್ಲಿ ಸಣ್ಣ ಮೆಣಸಿನಕಾಯಿ ತಿಂದರೂ ಕಿವಿಯಿಂದ ಗಾಳಿ ಬರೋದಕ್ಕೆ ಆರಂಭವಾಗುತ್ತೆ, ಮೈಯೆಲ್ಲಾ ಬಿಸಿಯಾಗುತ್ತೆ. ಆದರೆ ಸ್ಪೈಸಿ ಆಹಾರ ತಿಂದ ಕೂಡಲೇ ಮೈ ಬಿಸಿಯಾಗಲು, ಬೆವರಲು ಕಾರಣ ಏನು ಅನ್ನೋದರ ಬಗ್ಗೆ ತಿಳಿಯೋಣ.
ಮಸಾಲೆಯುಕ್ತ ಆಹಾರ ಸೇವಿಸಿದ ನಂತರ ಬಾಯಿಯಲ್ಲಿ ಉಂಟಾಗುವ ಸಂವೇದನೆಯಿಂದಾಗಿ ಬಾಯಿ (sensation in mouth) ಖಾರವಾಗುತ್ತೆ. ಇದರ ನಂತರ ನೀವು ಬಿಸಿ ಚಹಾ ಅಥವಾ ಕಾಫಿ ಕುಡಿದರೆ, ತೀಕ್ಷ್ಣತೆ ಮಟ್ಟ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಬಾಯಿ ಮತ್ತು ತುಟಿಗಳ ಬಳಿ ಸುಡುವ ಸಂವೇದನೆ ಉಂಟಾಗುತ್ತೆ. ಹೆಚ್ಚು ಖಾರದ ಆಹಾರ ತಿನ್ನೋದ್ರಿಂದ ಹಾನಿಕಾರಕ ಉಸಿರಾಟದಿಂದ ಶ್ವಾಸಕೋಶವನ್ನು ರಕ್ಷಿಸುವ ಲೋಳೆಯ ಪೊರೆಯು ಹೆಚ್ಚು ಸಕ್ರಿಯವಾಗುತ್ತದೆ, ಇದರಿಂದಾಗಿ ಮೂಗಲ್ಲಿ ನೀರು ಬರಲು ಆರಂಭಿಸುತ್ತೆ. ದೇಹದ ಉಷ್ಣತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಅನೇಕ ಜನರು ಬಿಕ್ಕಳಿಕೆಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ.
ಸ್ಪೈಸಿ ಆಹಾರ ತಿಂದ ನಂತರ ದೇಹ ಬಿಸಿ ಏಕೆ ಅನಿಸುತ್ತದೆ?
ಈ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿಗೆ ಬಂದಿದ್ದರೆ, ಉತ್ತರವು ತುಂಬಾ ಸರಳವಾಗಿದೆ ಮತ್ತು ಅದು ಮೆಣಸಿನಲ್ಲಿರುವ ಕ್ಯಾಪ್ಸೈಸಿನ್. ಹೌದು, ಇದು ಮಸಾಲೆಯುಕ್ತ ಆಹಾರದಲ್ಲಿನ ಸಕ್ರಿಯ ಘಟಕಾಂಶ. ನೀವು ಸ್ಪೈಸಿ ಆಹಾರವನ್ನು ಸೇವಿಸಿದಾಗ, ಕ್ಯಾಪ್ಸೈಸಿನ್ (capsaicin) ಬಾಯಿಯಲ್ಲಿರುವ ಗ್ರಾಹಿಗಳೊಂದಿಗೆ (receptor) ಸೇರುತ್ತದೆ, ರೆಸೆಪ್ಟರ್ ಅಥವಾ ಗ್ರಾಹಕಗಳು ಶಾಖವನ್ನು ಡಿಟೆಕ್ಟ್ ಮಾಡುವಲ್ಲಿ ಹೆಸರುವಾಸಿ. ಇದು ಬಾಯಿಯನ್ನು ಬಿಸಿ ವಸ್ತುಗಳಿಂದ ಸುಡುವುದನ್ನು ತಡೆಯುತ್ತದೆ. ಆದರೆ ಕ್ಯಾಪ್ಸೈಸಿನ್ ಸೇವನೆಯಿಂದ ಈ ಗ್ರಾಹಕಗಳು ಸಕ್ರಿಯಗೊಳ್ಳುತ್ತವೆ ಮತ್ತು ನೀವು ಬಿಸಿ ಆಹಾರ ತಿನ್ನುವಾಗ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆಯೋ ಹಾಗೆಯೇ ಪ್ರತಿಕ್ರಿಯಿಸುತ್ತದೆ. ನೀವು ತುಂಬಾ ಬಿಸಿ ಅನುಭವಿಸಲು ಮತ್ತು ಬೆವರಲು ಪ್ರಾರಂಭಿಸಲು ಇದು ಕಾರಣ. ಬೆವರುವುದು ನಿಮ್ಮ ದೇಹದ ತಾಪಮಾನವನ್ನು ನಿಧಾನಗೊಳಿಸುತ್ತದೆ.
ಮಸಾಲೆಯುಕ್ತ ಆಹಾರದಿಂದಾಗಿ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ?
ಮಸಾಲೆಯುಕ್ತ ಆಹಾರವನ್ನು ಸೇವಿಸೋದ್ರಿಂದ ಹೃದಯ ಬಡಿತ ಹೆಚ್ಚಾಗುತ್ತದೆ, ಚಯಾಪಚಯವೂ ಹೆಚ್ಚಾಗುತ್ತದೆ ಮತ್ತು ಮೂಗಿನಿಂದ ನೀರು ಹೊರಬರಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಕಣ್ಣುಗಳಿಂದ ಕಣ್ಣೀರು (tears from eyes) ಬರಲು ಪ್ರಾರಂಭಿಸುತ್ತದೆ.
ಸ್ಪೈ ಫುಡ್ ಸೇವನೆಯಿಂದ ದೇಹ ಎಂಡಾರ್ಫಿನ್ಗಳನ್ನು (Endorphin) ಬಿಡುಗಡೆ ಮಾಡುತ್ತದೆ. ಇದು ಮೆದುಳಿನಲ್ಲಿ ಕಂಡುಬರುವ ರಾಸಾಯನಿಕವಾಗಿದ್ದು, ನೋವನ್ನು ನಿವಾರಿಸುವ ಮೂಲಕ ಸಂತೋಷವನ್ನು ಹೆಚ್ಚಿಸುತ್ತದೆ.
ನೋವಿನಿಂದ ಪರಿಹಾರ ಪಡೆಯಲು ಕೆಲವರು ಸ್ಪೈಸಿ ಫುಡ್ ಸೇವಿಸುತ್ತಾರೆ. ಇದು ಅವರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ.
ಬಾಯಿ ಉರಿಯುತ್ತಿದೆ ಎಂದು ಮೆದುಳು ಹೇಗೆ ನಿರ್ಧರಿಸುತ್ತದೆ?
ಅನೇಕ ತಜ್ಞರಿಗೆ ಇದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಆದರೆ ಮೆದುಳು ಸ್ವೀಕರಿಸುವ ಪ್ರಚೋದನೆಗಳ ಪ್ರಕಾರ ಮತ್ತು ವೈವಿಧ್ಯತೆಯ ಆಧಾರದ ಮೇಲೆ ಇದನ್ನು ನಿರ್ಧರಿಸುತ್ತದೆ. ನೋಸಿಸೆಪ್ಟರ್ ಮಾತ್ರ ಅಪಾಯಕಾರಿ ಪ್ರಚೋದನೆ ಮತ್ತು ವಿಪರೀತ ತಾಪಮಾನವನ್ನು ಸೂಚಿಸುತ್ತದೆ. ಆದರೆ ಮೆಣಸಿನಲ್ಲಿ ಸಕ್ರಿಯ ಘಟಕಾಂಶವಾದ ಕ್ಯಾಪ್ಸೈಸಿನ್, ತಾಪಮಾನದಲ್ಲಿ ಸ್ವಲ್ಪ ಹೆಚ್ಚಳಕ್ಕೆ ಪ್ರತಿಕ್ರಿಯಿಸುವ ನರಗಳನ್ನು ಉತ್ತೇಜಿಸುತ್ತದೆ. ಕ್ಯಾಪ್ಸೈಸಿನ್ ಮೂಲಕ ಸಂದೇಶ ಮೆದುಳಿಗೆ ಹೋದಾಗ, ಉಷ್ಣತೆ ಹೆಚ್ಚಿಸಲು ಪ್ರಾರಂಭಿಸುತ್ತದೆ. ಇದೇ ಪ್ರಚೋದನೆಗಳು ಚುಚ್ಚುವ ಅಥವಾ ಕತ್ತರಿಸುವ ಬದಲು ಸುಡುವ ಫೀಲ್ ನೀಡುತ್ತೆ.
ಸ್ಪೈಸಿ ಆಹಾರ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಬಾಯಲ್ಲಿ ಕಿರಿಕಿರಿ ಉಂಟಾಗುತ್ತದೆ ಮತ್ತು ದೀರ್ಘಕಾಲದವರೆಗೆ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ.. ಆದಾಗ್ಯೂ, ಇದು ಬಾಯಿಯ ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಒಂದು ರೀತಿಯಲ್ಲಿ ತೂಕ ನಷ್ಟಕ್ಕೆ ಒಳ್ಳೆಯದು. ಸ್ಪೈಸಿ ಆಹಾರ ತಿನ್ನುವ ಮೂಲಕ, ನಿಮ್ಮ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು ಮತ್ತು ನಿಮಗೆ ಕಡಿಮೆ ಹಸಿವು ಉಂಟಾಗುತ್ತದೆ.
ಮೆಣಸಿನಕಾಯಿಯನ್ನು ವಿಟಮಿನ್-ಎ ಮತ್ತು ಸಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
ಸ್ಪೈಸಿ ಆಹಾರ ಆಹಾರದ ಅನಾನುಕೂಲಗಳು (effects of spicy food)
ಆರೋಗ್ಯ ಪ್ರಯೋಜನಗಳಿಗಾಗಿ ಗುರುತಿಸಲ್ಪಟ್ಟ ಮೆಣಸು ತಿನ್ನುವುದರಿಂದ ಅನಾನುಕೂಲಗಳೂ ಇವೆ. ಇದನ್ನು ಸೇವಿಸಿದ ನಂತರ, ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ, ಕಣ್ಣಿನ ನೋವು, ಅತಿಸಾರ, ಕಿಬ್ಬೊಟ್ಟೆ ನೋವು, ಆಸಿಡ್ ರಿಫ್ಲಕ್ಸ್, ಎದೆಯುರಿ ಮತ್ತು ತಲೆನೋವು ಮುಂತಾದ ಸಮಸ್ಯೆಗಳು ಉಂಟಾಗಬಹುದು.