ಬೆಳಗ್ಗೆ ಬೇಗ ಎದ್ದು ನೋಡಿ… ನಿಮಗೆ ಗೊತ್ತಿಲ್ಲದೇನೆ ಪಾಸಿಟಿವ್ ಚೇಂಜಸ್ ಆಗುತ್ತೆ!

First Published | Oct 4, 2023, 5:14 PM IST

ಇಂದಿನ ವೇಗದ ಜೀವನದಲ್ಲಿ, ರಾತ್ರಿಯಲ್ಲಿ ಸಮಯಕ್ಕೆ ಸರಿಯಾಗಿ ಮಲಗಲು ಮತ್ತು ಬೆಳಿಗ್ಗೆ ಬೇಗನೆ ಎದ್ದೇಳಲು ಪ್ರತಿಯೊಬ್ಬರು ಕಷ್ಟಪಡ್ತಾರೆ. ಹೆಚ್ಚಾಗಿ ನಾವು ತಡವಾಗಿ ಮಲಗಿ, ಆಫೀಸ್ ಗೆ ಇನ್ನೇನು ಹೋಗಬೇಕು ಅನ್ನೋವಷ್ಟರಲ್ಲಿ ಎದ್ದು, ಎಲ್ಲಾ ಕೆಲಸ ನಿಮಿಷಗಳಲ್ಲಿ ಮುಗಿಸಿ, ಆಫೀಸ್ ಗೆ ಓಡಿ ಹೋಗುತ್ತೇವೆ. ಇದರ ಬದಲು ರಾತ್ರಿ ಬೇಗನೆ ಮಲಗಿ ಬೆಳಗೆ ಬೇಗ ಎದ್ದೇಳೋದು ಎಷ್ಟೊಂದು ಉತ್ತಮ ಗೊತ್ತಾ? 
 

ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಬೇಗ ಎದ್ದೇಳುವುದು ಕಷ್ಟ. ಆದರೆ ಈ ಮೊದಲು ಜನರು ಆರೋಗ್ಯಕರ ಮತ್ತು ದೀರ್ಘ ಜೀವನ ನಡೆಸಲು ಸಾಧ್ಯವಾಗಿದ್ದು  ಏಕೆಂದರೆ ಅವರು ನಿಯಮಿತವಾಗಿ ಬೆಳಿಗ್ಗೆ ಬೇಗ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಾತ್ರಿ ತಡವಾಗಿ ಮಲಗೋ (late night sleeper) ಜನರಿಗೆ ಬೆಳಗ್ಗೆ ಬೇಗನೆ ಎದ್ದೇಳೋದೆ ಕಷ್ಟ.

ಇತ್ತೀಚಿನ ದಿನಗಳಲ್ಲಿ ಜನರಿಗೆ ರಾತ್ರಿ ಮೊಬೈಲ್ ನೋಡದೇ, ಟಿವಿ ನೋಡದೇ ನಿದ್ದೇನೆ ಬರಲ್ಲ. ಹೀಗೆ ವಿಡಿಯೋ ಸೀರೀಸ್ ನೋಡಿ ನೋಡಿ ಮಧ್ಯರಾತ್ರಿವರೆಗೆ ಎದ್ದು ಕುಳಿತಿರೋರೇ ಹೆಚ್ಚು. ಹೀಗೆ ಮಾಡಿದ್ರೆ ಯಾರು ತಾನೆ ಬೆಳಗ್ಗೆ ಬೇಗ ಎದ್ದಾರು ಅಲ್ವಾ? ಆದ್ರೆ ನಿಮಗೆ ಗೊತ್ತಾ? ಬೆಳಗ್ಗೆ ಬೇಗನೆ ಎದ್ದೆಳೋದ್ರಿಂದ (wake up early morning) ಎಷ್ಟೊಂದು ಲಾಭ ಇದೆ ಎಂದು. ಅದರ ಬಗ್ಗೆ ತಿಳಿಯೋಣ. 

Tap to resize

ಒತ್ತಡ(Stress) ಕಡಿಮೆ ಮಾಡುತ್ತದೆ
ಬೆಳಗ್ಗೆ ಬೇಗನೆ ಎದ್ದೇಳುವುದು ಒತ್ತಡವನ್ನು  (stress) ಕಡಿಮೆ ಮಾಡುತ್ತದೆ ಮತ್ತು ವ್ಯಾಯಾಮ (Exercise), ಯೋಗ (Yoga), ಧ್ಯಾನ (Meditaion) ದಂತಹ ಯಾವುದೇ ರೀತಿಯ ಸಕಾರಾತ್ಮಕ ಕ್ರಿಯೆಯನ್ನು ಮಾಡಲು ಸುಲಭ. ಇದರಿಂದ ದೇಹಕ್ಕೆ ತಾಜಾತನ (Freshness) ಸಿಗುತ್ತದೆ. ಬೆಳಿಗ್ಗೆ ಸೂರ್ಯೋದಯದ (Sun Rise) ಶಕ್ತಿ ದೇಹವನ್ನು ಪ್ರವೇಶಿಸುತ್ತದೆ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತದೆ, ಇದರಿಂದಾಗಿ ಒತ್ತಡ ಕಡಿಮೆಯಾಗುತ್ತೆ.

ಹೆಚ್ಚುವರಿ ಸಮಯ ಸಿಗುತ್ತೆ 
ಬೆಳಿಗ್ಗೆ ಬೇಗನೆ ಎದ್ದೇಳೊದ್ರಿಂದ ನಿಮಗಾಗಿ ಸಮಯ ಮೀಸಲಿಡಲು ಸಮಯ ಸಿಗುತ್ತೆ. ಈ ಸಮಯದಲ್ಲಿ ನಿಮಗೆ ಆಸಕ್ತಿಯಿರುವ ಏನನ್ನಾದರೂ ನೀವು ಮಾಡಬಹುದು ಇದರಿಂದ ನೀವು ನಿಮ್ಮ ಗುರಿಯನ್ನು ತಲುಪಲು ಸುಲಭವಾಗುತ್ತೆ ಮತ್ತು ಮಾನಸಿಕವಾಗಿ ತೃಪ್ತರಾಗಬಹುದು. ಉದಾಹರಣೆಗೆ ಯೋಗ, ಧ್ಯಾನ, ಕಾದಂಬರಿಗಳನ್ನು ಓದುವುದು, ಆಧ್ಯಾತ್ಮಿಕ ಪುಸ್ತಕಗಳನ್ನು (Spiritual Books) ಓದುವುದು, ತೋಟಗಾರಿಕೆ, ಶುಚಿಗೊಳಿಸುವಿಕೆ ಇತ್ಯಾದಿ.
 

ದಿನಚರಿ ಚೆನ್ನಾಗಿ ಪ್ಲ್ಯಾನ್ ಮಾಡಬಹುದು
ಬೆಳಿಗ್ಗೆ ಬೇಗನೆ ಎದ್ದೇಳುವ ಮೂಲಕ, ದಿನದ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುತ್ತೆ. ಜೀವನವು ನಿಯಮದ ಪ್ರಕಾರ ನಡೆಯುತ್ತದೆ ಮತ್ತು ದಿನಚರಿ ಸರಿಯಾಗಿಯೇ ಇರುತ್ತೆ. ತಿನ್ನುವುದು, ಕುಡಿಯುವುದು, ಸ್ನಾನ ಮಾಡುವುದು, ಮಲಗುವುದು ಮುಂತಾದ ಎಲ್ಲಾ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಮಾಡಲು ಸಾಧ್ಯವಾಗುತ್ತೆ. ನೀವು ಇತರ ಕೆಲಸಗಳನ್ನು ಆರಾಮವಾಗಿ ಮಾಡಲು ಪ್ಲ್ಯಾನ್ ಕೂಡ ಮಾಡಬಹುದು.

ಬೆಳಗ್ಗೆ ಸೂರ್ಯನ ಬೆಳಕಿನಿಂದ ಸಿಗುತ್ತೆ ಪ್ರಯೋಜನ 
ಬೆಳಗ್ಗೆ ಬೇಗನೆ ಎದ್ದೇಳುವುದರಿಂದ, ನೀವು ಸೂರ್ಯೋದಯವನ್ನು ಆನಂದಿಸಬಹುದು ಮತ್ತು ಬೆಳಗ್ಗಿನ ಸೂರ್ಯನ ಬೆಳಕ್ಕಿನಿಂದ (sun light) ಅನೇಕ ಪ್ರಯೋಜನ ಪಡೆಯಬಹುದು. ಸೂರ್ಯನಲ್ಲಿ ಬೆಳಕಿನಲ್ಲಿ ವಿಟಮಿನ್-ಡಿ ಲಭ್ಯವಿರುತ್ತೆ, ಇದು ಅಧಿಕ ರಕ್ತದೊತ್ತಡದ (Blood Pressure) ಅಪಾಯವನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ ಅಸ್ತಮಾ ಮತ್ತು ಖಿನ್ನತೆಯಿಂದ ರಕ್ಷಿಸುತ್ತದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯ (Mental Health) ಉತ್ತಮವಾಗಿರುತ್ತದೆ
ಬೇಗನೆ ಎದ್ದೇಳುವುದರಿಂದ, ನೀವು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯ, ಇದರಿಂದಾಗಿ ನೀವು ಸಮಯಕ್ಕೆ ಸರಿಯಾಗಿ ರಾತ್ರಿ ಊಟದ ನಂತರ ಮಲಗುತ್ತೀರಿ. ತಡವಾಗಿ ಮಲಗೋದು ರಾತ್ರಿ ಊಟದ ನಂತರದ ಹಸಿವಿಗೆ ಕಾರಣವಾಗಬಹುದು, ಇದು ಬೊಜ್ಜಿಗೆ ಕಾರಣವಾಗುತ್ತದೆ.

ನೀವು ಬೆಳಗ್ಗೆ ಬೇಗನೆ ಎದ್ದರೆ ರಾತ್ರಿ ಮಲಗುವ ಹೊತ್ತಿಗೆ, ದೇಹಕ್ಕೆ ತುಂಬಾನೆ ದಣಿವಾಗಿರುತ್ತೆ. ಹಾಗಾಗಿ ಬೇಗ ನಿದ್ರೆ ಕೂಡ ಬರುತ್ತೆ. ಇದರಿಂದಾಗಿ ನೀವು ಸಾಕಷ್ಟು ನಿದ್ರೆಯನ್ನು ಸಹ ಪಡೆಯುತ್ತೀರಿ. ಹೀಗಾಗಿ, ಸರಿಯಾಗಿ ಆಹಾರ ಸೇವಿಸೋದು, ಸರಿಯಾಗಿ ನಿದ್ರೆ ಮಾಡೋದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತೆ. 

Latest Videos

click me!