ವೆಯಿಟ್ ಟ್ರೈನಿಂಗ್ ಮೂಲಕ ಮತ್ತಷ್ಟು ಯಂಗ್ ಆಗಿರಿ

First Published Oct 2, 2022, 6:04 PM IST

ವ್ಯಾಯಾಮಗಳಲ್ಲಿ ವೆಯಿಟ್ ಟ್ರೈನಿಂಗ್ ಅಗತ್ಯವೆಂದು ಪರಿಗಣಿಸಲಾಗುತ್ತೆ. ಸಾಮಾನ್ಯವಾಗಿ, ಜನರು ತಮ್ಮ ಸ್ನಾಯುಗಳನ್ನು ಬಲಪಡಿಸಲು ವೆಯಿಟ್ ಟ್ರೈನಿಂಗ್ ಮಾಡುತ್ತಾರೆ. ಹೆಚ್ಚುತ್ತಿರುವ ವಯಸ್ಸಿನ ಸಮಸ್ಯೆಗಳನ್ನು ದೂರ ಮಾಡಲು ವೆಯಿಟ್ ಟ್ರೈನಿಂಗ್ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತೆ. ನೀವು ವಯಸ್ಸಾದಂತೆ ಇನ್ನೂ ಯಂಗ್ ಆಗಿ ಕಾಣಲು ಯಾವ ರೀತಿ ವೈಟ್ ಟ್ರೈನಿಂಗ್ ಮಾಡಬೇಕು ಅನ್ನೋದನ್ನು ನೋಡೋಣ. 
 

ವೆಯಿಟ್ ಟ್ರೈನಿಂಗ್ ನಿಮ್ಮ ದೇಹವನ್ನು ಯಂಗ್ ಆಗಿರಿಸಲು ಸಹಾಯ ಮಾಡುತ್ತೆ. ನಿಮ್ಮ ಮೂಳೆ ಸಾಂದ್ರತೆ ಮತ್ತು ಸ್ನಾಯುಗಳನ್ನು ಶಕ್ತಿಯುತವಾಗಿಸಲು ಸಹ ಪರಿಣಾಮಕಾರಿ. ನೀವು ವೈಟ್ ಎತ್ತಿದಾಗ, ನಿಮಗೆ ಗಾಯ ಮೊದಲಾದ ಸಮಸ್ಯೆ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತೆ. ಆದ್ದರಿಂದ ನಿಮ್ಮ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವಲ್ಲಿ ವೆಯಿಟ್ ಟ್ರೈನಿಂಗ್ ಎಷ್ಟು ಪ್ರಯೋಜನಕಾರಿಯಾಗಿದೆ ಎಂದು ತಿಳಿಯೋಣ.
 

ದೇಹವನ್ನು ಯಂಗ್ ಆಗಿರಿಸುತ್ತೆ

ವಯಸ್ಸಾದಂತೆ, ನಿಮ್ಮ ಸ್ನಾಯುಗಳು ದುರ್ಬಲಗೊಳ್ಳಲು (weak muscles) ಪ್ರಾರಂಭಿಸುತ್ತವೆ. ಈ ಪ್ರಕ್ರಿಯೆಯನ್ನು ಸಾರ್ಕೊಪೆನಿಯಾ ಎಂದು ಕರೆಯಲಾಗುತ್ತೆ. ಈ ಕಾರಣದಿಂದಾಗಿ, ಬೀಳುವ ಅಥವಾ ಮೂಳೆ ಮುರಿತದ ಸಾಧ್ಯತೆ ಹೆಚ್ಚಾಗುತ್ತೆ. ಆದರೆ ನೀವು ದೇಹವನ್ನು ಯಂಗ್ ಆಗಿಡಲು ಬಯಸಿದರೆ,  ನೀವು ಪ್ರತಿದಿನ ವೆಯಿಟ್ ಟ್ರೈನಿಂಗ್ ಮಾಡಿ.

ಹೆಚ್ಚು ಸ್ವಾವಲಂಬಿಯಾಗಿ ಬದುಕಲು

ಸಂಶೋಧನೆಯ ಪ್ರಕಾರ, ನೀವು ನಾಲ್ಕು ತಿಂಗಳ ಕಾಲ ವೆಯಿಟ್ ಟ್ರೈನಿಂಗ್ (weight training) ಮಾಡಿದರೆ, ಅದು ನಿಮ್ಮ ಸ್ನಾಯುಗಳ ಬಲವನ್ನು ಶೇಕಡಾ 60 ರಷ್ಟು ಹೆಚ್ಚಿಸುತ್ತೆ. ಇದರಿಂದ ನೀವು ಚೆನ್ನಾಗಿ ನಡೆಯಲು ಮತ್ತು ಕುಳಿತುಕೊಳ್ಳಲು ಸಾಧ್ಯವಾಗುತ್ತೆ. ಬಲವಾದ ಸ್ನಾಯುಗಳಿಂದಾಗಿ, ಮುರಿತ ಇತ್ಯಾದಿಗಳ ಸಾಧ್ಯತೆಯೂ ಕಡಿಮೆಯಾಗುತ್ತೆ.

ರೋಗಗಳಿಂದ ದೂರವಿರಲು

 ಏರೋಬಿಕ್ಸ್ ಮತ್ತು ವೆಯಿಟ್ ಟ್ರೈನಿಂಗ್ (Weight Training) ಮಾಡೋದರಿಂದ, ಸ್ನಾಯುಗಳು ಮತ್ತು ದೇಹದ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ, ಇದರಿಂದ ವಯಸ್ಸಾಗುವಿಕೆಯ ಯಾವುದೇ ರೋಗಗಳು ಇರೋದಿಲ್ಲ. ನೀವು ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ. 

ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೆ

ವೈಟ್ ಟ್ರೈನಿಂಗ್ ಮಾಡೋದರಿಂದ ನಿಮ್ಮ ಸ್ನಾಯುಗಳನ್ನು ಉತ್ತಮಗೊಳಿಸೋದು ಮಾತ್ರವಲ್ಲದೆ, ನಿಮ್ಮ ದೇಹದಲ್ಲಿ ರಕ್ತದ ಹರಿವು ಸಹ ಉತ್ತಮವಾಗುತ್ತೆ, ಇದರಿಂದ ನಿಮ್ಮ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೆ ಮತ್ತು ಯಾವುದೇ ರೋಗಗಳು ಸಹ ಹತ್ತಿರ ಬರೋದಿಲ್ಲ.

ಆಯಾಸವನ್ನು ದೂರವಿಡುತ್ತೆ

ವೆಯಿಟ್ ಟ್ರೈನಿಂಗ್ ಜೊತೆ ನೀವು ಪ್ರೋಟೀನ್ ಭರಿತ ಆಹಾರ ಸೇರಿಸಿದರೆ, ಅದು ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತೆ ಮತ್ತು ನೀವು ಪದೇ ಪದೇ ಆಯಾಸದ ಸಮಸ್ಯೆಯನ್ನು ಎದುರಿಸೋದು ತಪ್ಪುತ್ತೆ. ಈ ರೀತಿಯಾಗಿ, ನೀವು ತಜ್ಞರ ಸಲಹೆ ಪಡೆದು ವೈಟ್ ಟ್ರೈನಿಂಗ್ ಮಾಡಿದರೆ, ನಿಮ್ಮನ್ನು ನೀವು ದೀರ್ಘಕಾಲದವರೆಗೆ ಫಿಟ್ ಮತ್ತು ಆರೋಗ್ಯಕರವಾಗಿಡಲು ಸಾಧ್ಯವಾಗುತ್ತೆ.

click me!