ಹವಾಮಾನ ಬದಲಾಗುವ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್‌

First Published | Sep 30, 2022, 4:56 PM IST

ಬದಲಾಗುತ್ತಿರುವ ಹವಾಮಾನದಲ್ಲಿ ಆರೋಗ್ಯಕರವಾಗಿ ಉಳಿಯೋದು ಒಂದು ಸವಾಲಿನ ಕೆಲಸವಾಗಿದೆ ಎಂದರೆ ತಪ್ಪಾಗಲಾರದು. ಹವಾಮಾನ ಬದಲಾದಂತೆ ಒಂದೊಂದು ರೋಗಗಳು ಸಹ ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ, ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ನೀವು ನಿರ್ಲಕ್ಷ್ಯ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಾಗಾದರೆ ಹವಾಮಾನ ಬದಲಾಗುವ ಸಮಯದಲ್ಲಿ ನಮ್ಮನ್ನು ನಾವು ನೋಡಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ. 
 

ಆರೋಗ್ಯ ತಜ್ಞರ ಪ್ರಕಾರ, ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಜನರಲ್ಲಿ ಇಮ್ಮ್ಯೂನ್ ಸಿಸ್ಟಮ್(Immune system) ಇನ್ನು ದುರ್ಬಲಗೊಳ್ಳುವುದು, ಅಲ್ಲದೇ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ. ಹಾಗಾಗಿ, ಅವರ ರೋಗನಿರೋಧಕ ಶಕ್ತಿ ಬಲವಾಗಬೇಕು. ಆಗ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. 
 

ವಿಶೇಷವಾಗಿ, ಬದಲಾಗುತ್ತಿರುವ ಋತುವಿನಲ್ಲಿ, ಕೆಮ್ಮು(Cough), ಶೀತದ ಅಪಾಯವು ಹೆಚ್ಚಾಗುತ್ತೆ. ಇದನ್ನು ತಪ್ಪಿಸಲು, ಮೊದಲನೆಯದಾಗಿ, ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿ. ವಿಟಮಿನ್ ಸಿ ಮತ್ತು ಡಿ ಸಮೃದ್ಧ ಆಹಾರ ಸೇರಿಸಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಮತ್ತು ಪ್ರತಿದಿನ ವ್ಯಾಯಾಮ ಮಾಡುವ ಮೂಲಕ, ಉತ್ತಮ ಆರೋಗ್ಯ ಕಾಪಾಡಿ. ಇದಲ್ಲದೆ, ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯಕರವಾಗಿರಲು ಈ ಸಲಹೆಗಳನ್ನು ಅನುಸರಿಸಿ-

Tap to resize

ಕೈಗಳನ್ನು ತೊಳೆಯಿರಿ(Hand wash)
ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯಕರವಾಗಿರಲು ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ಯಾವುದೇ ವಸ್ತುವನ್ನು ಸ್ಪರ್ಶಿಸಿದ ನಂತರ, ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ನಂತರವೂ ಕೈಗಳನ್ನು ಚೆನ್ನಾಗಿ ತೊಳೆಯಿರಿ. ನೀವು ಬಯಸಿದರೆ ಸ್ಯಾನಿಟೈಸರ್  ಸಹ ಬಳಸಬಹುದು.

ಸಮತೋಲಿತ ಆಹಾರ ಸೇವಿಸಿ
ಎಲ್ಲಾ ಅಗತ್ಯ ಪೋಷಕಾಂಶಗಳು ಸಮತೋಲಿತ ಆಹಾರದಲ್ಲಿ ಕಂಡುಬರುತ್ತವೆ. ಅಲ್ಲದೆ, ಸಾಕಷ್ಟು ಕ್ಯಾಲೋರಿಗಳು(Calorie) ಸಹ ಇರುತ್ತವೆ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳದಿರುವುದು ದೇಹದಲ್ಲಿ ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತೆ. ಆದುದರಿಂದ ಸಮತೋಲಿತ ಆಹಾರ ಸೇವಿಸಿ. 

ಸರಿಯಾದ ಆಹಾರ ಸೇವನೆ ಮಾಡದೇ ಇದ್ದರೆ ರೋಗ ನಿರೋಧಕ ಶಕ್ತಿಯೂ ದುರ್ಬಲವಾಗುತ್ತೆ . ಇದಕ್ಕಾಗಿ, ಪ್ರತಿದಿನ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಪ್ರತಿದಿನ ಮನೆಯಲ್ಲಿ ಜ್ಯೂಸ್ (Juice) ತಯಾರಿಸಿ ಸೇವಿಸಬಹುದು. ಇದರಿಂದ ಇಮ್ಯೂನಿಟಿ ಬೂಸ್ಟ್ ಆಗುತ್ತೆ.

ಸಾಮಾಜಿಕ ಅಂತರ (social distancing) ಕಾಯ್ದುಕೊಳ್ಳಿ
ಸೋಂಕನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಅನುಸರಿಸಿ. ಅನಾರೋಗ್ಯ ಪೀಡಿತರಿಂದ ಅಂತರ ಕಾಯ್ದುಕೊಳ್ಳಿ. ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತೆ. ವಿಶೇಷವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವುದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತೆ. ಆದುದರಿಂದ ಅಂತರ ಕಾಯ್ದುಕೊಳ್ಳುವುದು ಮುಖ್ಯ.

ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ
ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯವಾಗಿರಲು ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸೋದು ಬಹಳ ಮುಖ್ಯ. ನಿಮ್ಮ ಮನೆಯನ್ನು ಚೆನ್ನಾಗಿ ಸ್ವಚ್ಛವಾಗಿರಿಸಿ. ನಿಮ್ಮ ಕರವಸ್ತ್ರ ಮತ್ತು ಟವೆಲ್ ಗಳನ್ನು ಬೇರೆ ಯಾವುದೇ ವ್ಯಕ್ತಿಯು ಬಳಸಲು ಬಿಡಬೇಡಿ. ಅಗತ್ಯವಿದ್ದರೆ ಮಾಸ್ಕ್ ಧರಿಸಬಹುದು. ಮನೆಯಿಂದ ಹೊರಹೋಗುವಾಗ ಮಾಸ್ಕ್ (Mask) ಧರಿಸಿ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತೆ.

ಚಳಿಗೂ ಸಿದ್ಧರಾಗಿ
ಹಬ್ಬದ ಸೀಸನ್ (Festival season) ನಡೆಯುತ್ತಿದೆ. ಇದರ ಜೊತೆಗೆ ಚಳಿ ನಿಧಾನವಾಗಿ ಆವರಿಸುತಿದೆ. ಬದಲಾಗುತ್ತಿರುವ ಹವಾಮಾನವು ತಾಪಮಾನವನ್ನು ಸಹ ಕಡಿಮೆ ಮಾಡುತ್ತೆ. ಈ ಕಾರಣದಿಂದಾಗಿ, ಜನರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅದರೆ ಜನರು ಹವಾಮಾನಕ್ಕೆ ಅನುಗುಣವಾಗಿ ತಮ್ಮನ್ನು ತಾವು ಇಟ್ಟುಕೊಳ್ಳಬೇಕು. ಚಳಿ ಹೆಚ್ಚಾದಾಗ ನೀವು ಬೆಚ್ಚಗಿನ ಬಟ್ಟೆಗಳನ್ನು ಧರಿಸಬಹುದು.
 

Latest Videos

click me!