ಈಗಂತೂ ತೂಕ ಇಳಿಸೋಕೆ ಹೇಳಿಕೊಡೋದು, ಅದಕ್ಕಾಗಿ ಸಲಹೆ ನೀಡೋದು ದೊಡ್ಡ ಉದ್ಯಮವಾಗಿದೆ. ಅದಕ್ಕಾಗಿ ಹಲವಾರು ಆಹಾರಗಳು, ಔಷಧಿಗಳು, ಊಟದ ಬದಲಿ ಯೋಜನೆಗಳು, 50 ರೀತಿಯ ಡಯಟ್, ವರ್ಕೌಟ್ ಮುಂತಾದವು ಇವೆ. ಆದರೆ ಅವುಗಳಲ್ಲಿ ಹೆಚ್ಚಿನವು ವೈಜ್ಞಾನಿಕ ಬೆಂಬಲವನ್ನು ಹೊಂದಿರುವುದಿಲ್ಲ. ಸುಮ್ಮನೆ ತಮಗೆ ತೋಚಿದ್ದನ್ನೇ ಬೆಸ್ಟ್ ಎಂಬಂತೆ ಮಾರ್ಕೆಟಿಂಗ್ ಮಾಡಿ ಅದರಲ್ಲಿ ಹಣ ಗಳಿಸೋ ಮಾರ್ಗ ಕಂಡುಕೊಳ್ಳುತ್ತಾರೆ ಹಲವರು.