ವೀರ್ಯ ಸೂಪರ್‌ಫುಡ್ ಅಂತ ಹೇಳಿದ್ಯಾರು? ಅದನ್ನು ತಿಂದ್ರೆ ಯಾರಾದ್ರೂ ಗರ್ಭ ಧರಿಸ್ತಾರಾ?

First Published | May 10, 2024, 2:56 PM IST

ಓರಲ್ ಸೆಕ್ಸ್ (Oral Sx) ಮತ್ತು ವೀರ್ಯದ (Sperms) ಬಗ್ಗೆ ಕೆಲವು ಕಲ್ಪನೆಗಳು (Myths) ಅನೇಕ ಮಿಥ್ಯೆಗಳಿಗೆ ಕಾರಣವಾಗಿವೆ. ವೀರ್ಯ ಮತ್ತು ಅವುಗಳ ಸತ್ಯದ ಬಗ್ಗೆ ಕೆಲವು ಮಿಥ್ಯೆಗಳನ್ನು ನೀವಿಂದು ತಿಳಿದುಕೊಳ್ಳಲೇಬೇಕು. 
 

ಇಂದಿಗೂ ಕೂಡ ಜನರು ಲೈಂಗಿಕತೆಯ (sex) ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಈಗಿನ ಯುವಕ - ಯುವತಿಯರಲ್ಲಿ ಸಹ ಲೈಂಗಿಕತೆಯ ಬಗ್ಗೆ ವಿಭಿನ್ನ ಕಲ್ಪನೆಗಳಿವೆ. ಸೆಕ್ಸ್ ಮಾಡುವ ವಿಧಾನ ಅಥವಾ ಅದರ ಪರಿಣಾಮಗಳ ಬಗ್ಗೆ ಹಲವು ತಪ್ಪು ಕಲ್ಪನೆಗಳು ಸಹ ಇವೆ. ಅಲ್ಲದೇ ಓರಲ್ ಸೆಕ್ಸ್ (Oral sex) ಮತ್ತು ವೀರ್ಯದ ಬಗ್ಗೆ ಇರುವಂತಹ ಕೆಲವೊಂದು ತಪ್ಪು ನಂಬಿಕೆಗಳನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ. 
 

ವೀರ್ಯದ ಬಗ್ಗೆ ಬೇರೆ ಬೇರೆ ವಿಷಯಗಳನ್ನು ಹೇಳಲಾಗುತ್ತದೆ. ಓರಲ್ ಸೆಕ್ಸ್ ಸಮಯದಲ್ಲಿ ವೀರ್ಯ (swallowing sperm) ಸೇವನೆ ತಪ್ಪೇನಲ್ಲ. ಇದು ಪೌಷ್ಟಿಕವಾಗಿ ಎಂದು ಕೆಲವರು ಹೇಳುತ್ತಾರೆ. ಅದೇ ಸಮಯದಲ್ಲಿ, ಇನ್ನೂ ಕೆಲವರು ವೀರ್ಯ ಬಾಯಿಯ ಮೂಲಕ ದೇಹದೊಳಕ್ಕೆ ಹೋದರೆ ನೀವು ಗರ್ಭಿಣಿಯಾಗಬಹುದು ಎಂದು ಹೇಳುತ್ತಾರೆ. ಈ ವಿಷಯಗಳಲ್ಲಿ ಎಷ್ಟು ಸತ್ಯವಿದೆ! ವೀರ್ಯವನ್ನು ಸೇವಿಸುವುದು ನಿಜವಾಗಿಯೂ ಸರಿಯೇ, ಇದು ನಿಜವಾಗಿಯೂ ಪ್ರಯೋಜನಕಾರಿಯೇ? ಇಂದು ನಾವು ಬಾಯಿಯ ಮೂಲಕ ವೀರ್ಯವನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಮಿಥ್ಯೆಗಳ ಬಗ್ಗೆ ಮಾತನಾಡೋಣ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಸತ್ಯವನ್ನು ತಿಳಿಯೋಣ. 
 

Latest Videos


ಓರಲ್ ಸೆಕ್ಸ್ ಸಮಯದಲ್ಲಿ ಕಾಂಡೋಮ್ ಬಳಕೆ ಮುಖ್ಯ
ಸ್ತ್ರೀರೋಗ ತಜ್ಞರು ಹೇಳುವಂತೆ, 'ಯಾವುದೇ ಕಾರಣಕ್ಕಾಗಿ ವೀರ್ಯವು ಬಾಯಿಗೆ ಹೋದರೆ, ಅದರಿಂದ ಯಾವುದೇ ಪ್ರಯೋಜನ ಅಥವಾ ಹಾನಿ ಎರಡೂ ಇಲ್ಲ. ನೀವು ವೀರ್ಯವನ್ನು ಹೊರ ಹಾಕಲು ಬಯಸುತ್ತೀರಾ ಅಥವಾ ನುಂಗಲು ಬಯಸುತ್ತೀರಾ ಎಂಬುದು ವೈಯಕ್ತಿಕ ಆಯ್ಕೆ. ಆದರೆ ಸಂಗಾತಿಯು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಈ ಪರಿಸ್ಥಿತಿಯಲ್ಲಿ ವೀರ್ಯ ಸೇವಿಸುವುದು ಹಾನಿಕಾರಕ. ಹಾಗೆ ಮಾಡುವುದರಿಂದ ಎಸ್ಟಿಐ (STI) ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಮೌಖಿಕ ಲೈಂಗಿಕತೆಯಲ್ಲಿ ಕಾಂಡೋಮ್ (Condom) ಬಳಕೆ ಮಾಡೋದು ಮುಖ್ಯ. 

ವೀರ್ಯ ನುಂಗುವ ಬಗ್ಗೆ ಕೆಲವು ಮಿಥ್ಯೆಗಳು ಮತ್ತು ಅವುಗಳ ಸತ್ಯವನ್ನು ಇಲ್ಲಿ ತಿಳಿಯಿರಿ  
ಮಿಥ್ಯೆ 1: ವೀರ್ಯವನ್ನು ನುಂಗೋದರಿಂದ ಗರ್ಭಿಣಿಯಾಗಬಹುದೇ?

ಇದನ್ನೇ ನೀವು ಸತ್ಯ ಅಂದುಕೊಂಡ್ರೆ ಅದು ತಪ್ಪು. ವೀರ್ಯ ಸೇವನೆಯಿಂದ ಯಾವುದೇ ಮಹಿಳೆ ಗರ್ಭಿಣಿಯಾಗುವುದಿಲ್ಲ (pregnant). ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮಲ್ಲಿ ಯಾರೂ ಪ್ರೊಟೆಕ್ಷನ್ ಬಳಸದೆ ಓರಲ್ ಮಾಡಬಾರದು.  ಜೀರ್ಣಾಂಗ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಪರಸ್ಪರ ನೇರ ಸಂಪರ್ಕವನ್ನು ಹೊಂದಿಲ್ಲ, ಆದ್ದರಿಂದ ನೀವು ವೀರ್ಯ ಸೇವಿಸಿದರೆ, ಅದು ಜೀರ್ಣಕಾರಿ ಪ್ರಕ್ರಿಯೆಯಿಂದ ಹೊರಬರುತ್ತೆ ಅಷ್ಟೇ. 
 

ಮಿಥ್ಯೆ 2: ವೀರ್ಯ ದೇಹಕ್ಕೆ ಪೋಷಣೆ ನೀಡುತ್ತದೆ
ಸತ್ಯ: ವೀರ್ಯವನ್ನು ತಯಾರಿಸುವ ಪದಾರ್ಥಗಳು ಸಂಪೂರ್ಣವಾಗಿ ಸುರಕ್ಷಿತ. ಅದೇ ಸಮಯದಲ್ಲಿ, ವೀರ್ಯವು ಅಗತ್ಯ ಪೋಷಕಾಂಶಗಳನ್ನು, ವಿಶೇಷವಾಗಿ ಅವುಗಳಲ್ಲಿ ಪ್ರೋಟೀನ್ (protien) ಅಂಶವನ್ನು ಹೊಂದಿರುತ್ತದೆ. ಹಾಗಂತ ಇದು ದೇಹಕ್ಕೆ ಅಗತ್ಯ ಪೋಷಕಾಂಶ ಏನೂ ನೀಡಲ್ಲ. ಕೆಲವರಿಗೆ ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಇನ್ನು ವೀರ್ಯ ಸೇವನೆಯಿಂದ ಎಸ್ ಟಿಐ ಹರಡಬಹುದು. ಅಲ್ಲದೇ ಹರ್ಪಿಸ್, ಸಿಫಿಲಿಸ್ ಮತ್ತು ಗೊನೊರಿಯಾವನ್ನು ಪಡೆಯಬಹುದು. ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ.

ಮಿಥ್ಯೆ: ವೀರ್ಯವು ಚರ್ಮ ಮತ್ತು ಕೂದಲಿಗೆ ಒಳ್ಳೇದು
ಸತ್ಯ: ವೀರ್ಯವು ನಿಮ್ಮ ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಿಸಲು ನೀವು ಇದನ್ನು ಸೇವಿಸುತ್ತಿದ್ದರೆ, ಅದು ಅಲರ್ಜಿ ಪ್ರತಿಕ್ರಿಯೆಗಳು ಮತ್ತು ಎಸ್ಟಿಐ ಸಮಸ್ಯೆ ತಂದೊಡ್ಡುತ್ತದೆ. ಆರೋಗ್ಯಕರ ಚರ್ಮಕ್ಕಾಗಿ, ಹಣ್ಣುಗಳು, ತರಕಾರಿಗಳು, ಬೀಜಗಳು, ದ್ವಿದಳ ಧಾನ್ಯಗಳು ಮುಂತಾದ ಅನೇಕ ಆರೋಗ್ಯಕರ ಆಹಾರ ಸೇವಿಸಿ. 

ಮಿಥ್ಯೆ: ವೀರ್ಯ ಖಿನ್ನತೆಯನ್ನು ಕಡಿಮೆ ಮಾಡುತ್ತದೆ
ವಾಸ್ತವ: ವೀರ್ಯವನ್ನು ಮೂಡ್ ಬೂಸ್ಟರ್ (mood buster) ಎಂದು ಕರೆಯಲಾಗುತ್ತದೆ. ಒತ್ತಡವನ್ನು ಬಿಡುಗಡೆ ಮಾಡಲು ಅನೇಕರು ಅದನ್ನು ಸೇವಿಸುತ್ತಾರೆ. ಇದು ಸಂಪೂರ್ಣವಾಗಿ ಆರೋಗ್ಯಕರವಲ್ಲ. ವೀರ್ಯ ನುಂಗುವುದು ಖಿನ್ನತೆಯನ್ನು (depression) ನಿಭಾಯಿಸಲು, ಮನಸ್ಥಿತಿಯನ್ನು ಸುಧಾರಿಸಲು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅನ್ನೋದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಇದನ್ನು ಮಾಡುವುದರಿಂದ, ನಿಮಗೆ ಸೋಂಕು (Infection) ತಗುಲಬಹುದು. ಸೋಂಕಿನ ಸಂದರ್ಭದಲ್ಲಿ, ವ್ಯಕ್ತಿಯ ಮನಸ್ಥಿತಿ ತುಂಬಾ ಕಡಿಮೆಯಾಗುತ್ತದೆ, ಆದ್ದರಿಂದ ವೀರ್ಯ ಸೇವನೆಯ ತಪ್ಪು ಮಾತ್ರ ಮಾಡ್ಬೇಡಿ. 
 

click me!