ಚಳಿ ಇರಲಿ, ಬಿಸಿಲಿರಲಿ ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದರೆ ನಿರ್ಜಲೀಕರಣ (ಡಿಹೈಡ್ರೇಶನ್) ಆಗುವ ಸಾಧ್ಯತೆ ಹೆಚ್ಚು. ಈ ಸಾಮಾನ್ಯ ಲಕ್ಷಣಗಳು ನಿರ್ಜಲೀಕರಣದ ಮುನ್ಸೂಚನೆ ಆಗಿರಬಹುದು. ಈ ಬಗ್ಗೆ ನೀವು ಗಮನಹರಿಸಲೇಬೇಕಾದ ಅಂಶಗಳು ಇಲ್ಲಿವೆ.
ಪದೇ ಪದೇ ಬಾಯಾರಿಕೆ ಆಗುವುದು ನಿರ್ಜಲೀಕರಣದ ಪ್ರಮುಖ ಲಕ್ಷಣಗಳಲ್ಲಿ ಒಂದು. ಹಾಗಾಗಿ ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಯುತ್ತದೆ.
26
ಬಾಯಿ ಒಣಗುವುದು
ನೀರು ಕುಡಿದ ಮೇಲೂ ಬಾಯಿ ಮತ್ತು ತುಟಿಗಳು ಒಣಗುತ್ತಿದ್ದರೆ ಅದು ನಿರ್ಜಲೀಕರಣದ ಮತ್ತೊಂದು ಲಕ್ಷಣ. ಇದನ್ನು ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.
36
ಮೂತ್ರದ ಬಣ್ಣದಲ್ಲಿ ಬದಲಾವಣೆ
ಮೂತ್ರವು ಕಡು ಹಳದಿ ಬಣ್ಣದಲ್ಲಿ ಹೋಗುತ್ತಿದ್ದರೆ ಅದು ದೇಹದಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ನಿಯಮಿತವಾಗಿ ನೀರು ಕುಡಿಯುವುದನ್ನು ಮರೆಯಬೇಡಿ.
ಯಾವಾಗಲೂ ಸುಸ್ತು, ಆಯಾಸ ಮತ್ತು ಶಕ್ತಿಯ ಕೊರತೆ ಕಾಡುತ್ತಿದ್ದರೆ ಅದು ನಿರ್ಜಲೀಕರಣದ ಲಕ್ಷಣ. ದೇಹವು ಸರಿಯಾಗಿ ಕೆಲಸ ಮಾಡಲು ಅಗತ್ಯವಾದ ನೀರಿನಂಶ ಇಲ್ಲದಿದ್ದಾಗ ಹೀಗಾಗುತ್ತದೆ.
56
ತಲೆನೋವು
ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತಲೆನೋವು ಮತ್ತು ಮೈಗ್ರೇನ್‌ನಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಪ್ರತಿದಿನ ಸಾಕಷ್ಟು ನೀರು ಕುಡಿಯುವುದರ ಕಡೆಗೆ ಗಮನ ಕೊಡಿ.
66
ತಲೆತಿರುಗುವಿಕೆ
ನಿಂತಾಗ ಅಥವಾ ನಡೆಯುವಾಗ ಪದೇ ಪದೇ ತಲೆತಿರುಗಿದಂತೆ ಆಗುವುದು ಕೂಡ ನಿರ್ಜಲೀಕರಣದ ಲಕ್ಷಣವೇ ಆಗಿದೆ. ಇಂತಹ ಲಕ್ಷಣಗಳನ್ನು ನೀವು ಎಂದಿಗೂ ಕಡೆಗಣಿಸಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.