ಅಧ್ಯಯನ ಒಂದರ ಪ್ರಕಾರ, ಸೊಂಟದ ಗಾತ್ರವು ಮಹಿಳೆಯರಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. 18 ರಿಂದ 45 ವರ್ಷ ವಯಸ್ಸಿನ 3,239 ಮಹಿಳೆಯರ ಡೇಟಾವನ್ನು ವಿಶ್ಲೇಷಿಸಲಾಗಿದ್ದು, ಇದರಲ್ಲಿ 11.1 ಪ್ರತಿಶತದಷ್ಟು ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಇತ್ತು ಮತ್ತು ಸೊಂಟದ ಗಾತ್ರದಲ್ಲಿ ಒಂದು ಸೆಂಟಿಮೀಟರ್ ಹೆಚ್ಚಳವು ಬಂಜೆತನದ ಅಪಾಯವನ್ನು ಶೇಕಡಾ 3 ರಷ್ಟು ಹೆಚ್ಚಿಸುತ್ತದೆ. ಬಂಜೆತನದ ಹೆಚ್ಚಿನ ಅಪಾಯವನ್ನು ಹೊಂದಿರುವ ಮಹಿಳೆಯರು ಅಧಿಕ ರಕ್ತ ದೊತ್ತಡ (Blood Pressure) ಮತ್ತು ಮಧುಮೇಹ (Diabetes) ಸಮಸ್ಯೆಗಳನ್ನು ಹೊಂದಿದ್ದರು ಮತ್ತು ಹೆಚ್ಚಿನ ಬಿಎಂಐ ಹೊಂದಿದ್ದರು ಎಂದು ತಿಳಿದು ಬಂದಿದೆ.