ನಾವು ಬೇಸಿಗೆಯಲ್ಲಿ ತುಂಬಾನೆ ಸೆಕೆ ಇದ್ದಾಗ ತಣ್ಣೀರಿನ ಸ್ನಾನ ಮಾಡುತ್ತೇವೆ. ಆದರೆ ಚಳಿಗಾಲ, ಮಳೆಗಾಲ ಬಂತೆಂದ್ರೆ ಸಾಕು ಬಿಸಿ ಬಿಸಿ ನೀರಿನ ಸ್ನಾನ ಬೇಕೇ ಬೇಕು? ಹಾಗಾದ್ರೆ ಯಾವ ನೀರಿನಲ್ಲಿ ಸ್ನಾನ ಮಾಡೋದು ಬೆಸ್ಟ್?
ಬೇಸಿಗೆಯಲ್ಲಿ ಮಾತ್ರ ತಣ್ಣೀರಿನ ಸ್ನಾನ (cold water bath) ಮಾಡುತ್ತೇವೆ, ಚಳಿಗಾಲ ಬರ್ತಿದ್ದ ಹಾಗೆ ಬಿಸಿ ನೀರಿನ ಸ್ನಾನ ಮಾಡುತ್ತಾರೆ. ಆದರೆ ನಿಜಕ್ಕೂ ಯಾವ ನೀರಿನಲ್ಲಿ ಸ್ನಾನ ಮಾಡೊದು ಬೆಸ್ಟ್? ನಿಮಗೂ ಈ ಕನ್ ಫ್ಯೂಸ್ ಇದ್ದರೆ ಕೇಳಿ ಇಲ್ಲಿ… ಕಾಲ ಯಾವುದೇ ಇರಲಿ ತಣ್ಣೀರಿನಲ್ಲಿ ಸ್ನಾನ ಮಾಡೋದು ತುಂಬಾ ಒಳ್ಳೆಯದು, ಇದರಿಂದ ಹಲವು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ.
210
ಒತ್ತಡ (Stress) ನಿವಾರಿಸುತ್ತದೆ :
ನಿಮಗೆ ಗೊತ್ತಾ? ಪ್ರತಿದಿನ ತಣ್ಣಿರಿನಲ್ಲಿ ಸ್ನಾನ ಮಾಡೋದರಿಂದ ಒತ್ತಡ ನಿವಾರಣೆಯಾಗುತ್ತೆ (stress control). ತಣ್ಣೀರನ್ನು ದೇಹದ ಮೇಲೆ ಹಾಕಿದಾಗ, ದೇಹದಲ್ಲಿರುವ ಯೂರಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ ರಕ್ತದಲ್ಲಿರುವ ಗ್ಲುಟಾಟಿಯೋನ್ ನ್ನು ಹೆಚ್ಚಿಸುತ್ತದೆ. ಹೀಗೆ ಆದಾಗ ಒತ್ತದ ನಿವಾರಣೆಯಾಗುತ್ತೆ.
310
ಖಿನ್ನತೆಯನ್ನು (Depression) ದೂರ ಮಾಡುತ್ತೆ
ವರ್ಜೀನಿಯಾ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ ತಣ್ಣೀರಿನ ಸ್ನಾನ ಮಾಡೋದರಿಂದ ಖಿನ್ನತೆ (depression) ಸಮಸ್ಯೆ ದೂರವಾಗುತ್ತದೆ ಎನ್ನಲಾಗುತ್ತದೆ. ಒಮ್ಮೆಲೆ ತಣ್ಣೀರು ಮೈಮೇಲೆ ಬಿದ್ದಾಗ ಮೆದುಳಿನಲ್ಲಿ ಇಲೆಕ್ಟ್ರಿಕಲ್ ಇಂಪಲ್ಸ್ (Electrical Impulse) ಆಗುತ್ತೆ, ಇದರಿಂದ ಖಿನ್ನರೆ ದೂರವಾಗುತ್ತೆ.
410
ರೋಗನಿರೋಧಕ (Immunity Power) ಶಕ್ತಿ ಹೆಚ್ಚು
ತಣ್ಣೀರಿನಿಂದ ಸ್ನಾನ ಮಾಡಿದವರು ಅನಾರೋಗ್ಯಕ್ಕೆ ತುತ್ತಾಗುವುದು ತುಂಬಾನೆ ಕಡಿಮೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಜನರಲ್ಲಿ ರೋಗನಿರೋಧಕ ಶಕ್ತಿ(immunity power) ಹೆಚ್ಚಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇದಲ್ಲದೆ, ಅನಾರೋಗ್ಯದ ಹೊರತಾಗಿಯೂ ದೈನಂದಿನ ಚಟುವಟಿಕೆಯನ್ನು ಮಾಡುವ ಸಾಮರ್ಥ್ಯವು ಬೆಳೆಯುತ್ತದೆ.
510
ಮಸಲ್ಸ್ ಗೆ ಅತ್ಯುತ್ತಮ
ತಣ್ಣಿರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ (Blood Circulation) ಚೆನ್ನಾಗಿ ಆಗುತ್ತದೆ. ವರ್ಕ್ ಔಟ್ ಮಾಡಿದ ನಂತರ ತಣ್ಣಿರಿನ ಸ್ನಾನ ಮಾಡಿದ್ರೆ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುವ ಮೂಲಕ ದೇಹವು ರಿಲ್ಯಾಕ್ಸ್ ಆಗುತ್ತೆ.
610
ಇಚ್ಛಾಶಕ್ತಿ ಹೆಚ್ಚುತ್ತದೆ
ಬೆಳಗ್ಗೆ ತಣ್ಣಿರಿನ ಸ್ನಾನ ಮಾಡೋದರಿಂದ ಇಚ್ಛಾಶಕ್ತಿ(Will power) ಹೆಚ್ಚುತ್ತದೆ, ಇದು ಮುಂಜಾನೆ ಅದ್ಭುತ ಅನುಭವ ನೀಡುತ್ತದೆ. ಪ್ರತಿದಿನ ತಣ್ಣಿರಿನ ಸ್ನಾನ ಮಾಡಬೇಕಾದರೆ ವಿಲ್ ಪವರ್ ಬೇಕೇಬೇಕು. ತಣ್ಣೀರು ಸ್ನಾನನಿಂದ ಇಚ್ಛಾಶಕ್ತಿ ಮತ್ತು ಮೂಡ್ ಬೂಸ್ಟ್ ಆಗುತ್ತದೆ.
710
ತೂಕ ಇಳಿಕೆಗೆ ಸಹಾಯ ಮಾಡುತ್ತೆ
ನಮ್ಮ ದೇಹದಲ್ಲಿ ಎರಡು ರೀತಿಯ ಫ್ಯಾಟ್ ಗಳಿವೆ. ಬ್ರೌನ್ ಮತ್ತು ವೈಟ್ ಫ್ಯಾಟ್. ವೈಟ್ ಫ್ಯಾಟ್ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೆ ಬ್ರೌನ್ ಫ್ಯಾಟ್ ಉತ್ತಮವಾಗಿದೆ. ತಣ್ಣೀರಿನಿಂದ ಸ್ನಾನ ಮಾಡೋದರಿಂದ ಬ್ರೌನ್ ಫ್ಯಾಟ್ ಆಕ್ಟೀವ್ ಆಗುತ್ತದೆ. ಇದರಿಂದ ತೂಕ ಇಳಿಕೆಗೆ (weight loss) ಸಹಾಯ ಮಾಡುತ್ತೆ.
810
ಚರ್ಮದ ಆರೋಗ್ಯಕ್ಕೆ ಉತ್ತಮ
ಬಿಸಿ ನೀರಿನ ಸ್ನಾನ ಮಾಡೋದರಿಂದ ತ್ವಚೆ ತುಂಬಾನೆ ಡ್ರೈ ಆಗುತ್ತದೆ. ಆದರೆ ತಣ್ಣೀರಿನಲ್ಲಿ ಸ್ನಾನ ಮಾಡೋದರಿಂದ ಸ್ಕಿನ್ ಟೈಟ್ (skin tight) ಆಗುತ್ತೆ. ಇದರಿಂದ ಚರ್ಮದಲ್ಲಿ ಧೂಳು, ಕೊಳೆ ಸಹ ಸೇರಿಕೊಳ್ಳೋದಿಲ್ಲ. ಒಟ್ಟಲ್ಲಿ ತಣ್ಣೀರಿನಿಂದ ಚರ್ಮದ ಆರೋಗ್ಯ ಉತ್ತಮವಾಗುತ್ತದೆ.
910
ಆರೋಗ್ಯಯುತ ಕೂದಲಿಗೆ ಸಹಕಾರಿ
ತಣ್ಣಿರಿನ ಸ್ನಾನ ಮಾಡೋದರಿಂದ ಕೂದಲಿನ ಆರೋಗ್ಯವೂ (healthy hair) ಉತ್ತಮವಾಗಿರುತ್ತೆ. ಇದು ನಿಮ್ಮ ಸ್ಕಾಲ್ಪ್ ನ್ನು ಕ್ಲೀನ್ ಆಗಿಟ್ಟುಕೊಳ್ಳುವ ಮೂಲಕ ಕೂದಲನ್ನು ಆರೋಗ್ಯಯುತವಾಗಿಸುತ್ತೆ.
1010
ಉಸಿರಾಟಕ್ಕೆ ಉತ್ತಮ
ನೀವು ಈ ಮೊದಲು ತಣ್ಣೀರಿನಲ್ಲಿ ಸ್ನಾನ ಮಾಡಿದ್ರೆ ಹೇಗಾಗುತ್ತೆ ಅನ್ನೋದು ನಿಮಗೂ ಗೊತ್ತಿದೆ. ಒಂದೇ ಸಲಕ್ಕೆ ತಣ್ಣಿರು ಮೈ ಮೇಲೆ ಬಿದ್ದಾಗ ಚಳಿಯಿಂದಾಗಿ ಉಸಿರಾಡಲು ಸಹ ಕಷ್ಟವಾಗುತ್ತೆ. ಇದರಿಂದ ನೀವು ಆಳವಾದ ಉಸಿರಾಟ ತೆಗೆದುಕೊಳ್ಳಬೇಕಾಗುತ್ತೆ. ಆಳವಾದ ಉಸಿರಾಟದಿಂದ ಆರೋಗ್ಯ ಉತ್ತಮವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.