Health Tips: ಊಟ ತಿಂಡಿಗೆ ಹೊತ್ತು ಗೊತ್ತಿರಲಿ, ಹೃದಯದ ಆರೋಗ್ಯ ಜೋಪಾನ!

First Published | Dec 21, 2023, 3:50 PM IST

ಹೃದಯಾಘಾತವು ಜನರನ್ನು ಹೆಚ್ಚಾಗಿ ಕಾಡುತ್ತಿರುವ ಕಾಯಿಲೆ. ಇದನ್ನು ತಪ್ಪಿಸಲು ಸಂಶೋಧಕರು ಉತ್ತಮ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಆದರೆ ಆಘಾತಕಾರಿ ವಿಷಯವೆಂದರೆ ಈ ಸಲಹೆಯನ್ನು ಹಲವಾರು ಸಾವಿರ ವರ್ಷಗಳ ಹಿಂದೆ ನಮ್ಮ ವೇದಗಳು ಮತ್ತು ಪುರಾಣಗಳಲ್ಲಿ ನೀಡಲಾಗಿದೆ.
 

ಆಹಾರ ತಿನ್ನೋದು ನಮಗೆ ಕೆಲಸ ಮಾಡೋದಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತದೆ. ಆದರೆ ನೀವು ಸರಿಯಾದ ಸಮಯದಲ್ಲಿ ಆಹಾರ ತಿನ್ನೋದರಿಂದ, ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ನಿಮ್ಮ ಊಟದ ಸಮಯ ಮತ್ತು ಹೃದ್ರೋಗಗಳ ಅಪಾಯದ (heart problems) ನಡುವೆ ಆಳವಾದ ಸಂಬಂಧವಿದೆ ಎಂದು ಇತ್ತೀಚಿನ ಸಂಶೋಧನೆ ಒತ್ತಿ ಹೇಳಿದೆ.

ವರದಿಯ ಪ್ರಕಾರ, ನೇಚರ್ ಕಮ್ಯುನಿಕೇಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಇದರಲ್ಲಿ ಬೇಗನೆ ತಿನ್ನುವುದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತದೆ. ಸರಾಸರಿ 42 ವರ್ಷ ವಯಸ್ಸಿನ 1,03,389 ಜನರನ್ನು ಅಧ್ಯಯನ ಮಾಡಿದ ನಂತರ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ವೇದಗಳು ಮತ್ತು ಪುರಾಣಗಳು ಈ ಮಾಹಿತಿಯನ್ನು ಬಹಳ ಹಿಂದೆಯೇ ತಿಳಿಸಿದೆ ಗೊತ್ತಾ?

Tap to resize

ಅಧ್ಯಯನ ಏನು ಹೇಳುತ್ತದೆ?
ಈ ಅಧ್ಯಯನದ ಪ್ರಕಾರ, ನೀವು ದಿನದ ಮೊದಲ ಊಟವನ್ನು ಬೆಳಿಗ್ಗೆ 9 ಗಂಟೆಯ ನಂತರ  ಮತ್ತು ದಿನದ ಕೊನೆಯ ಊಟವನ್ನು ರಾತ್ರಿ 8 ರ ಬದಲು ರಾತ್ರಿ 9 ಗಂಟೆಯ ನಂತರ ಸೇವಿಸಿದರೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಹೆಚ್ಚು. ಈ ಅಪಾಯವು ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ.

ಅಧ್ಯಯನದ ಫಲಿತಾಂಶಗಳು ಸಂಜೆ ಬೇಗನೆ ತಿನ್ನುವುದರಿಂದ ರಾತ್ರಿಯಲ್ಲಿ ದೀರ್ಘಕಾಲ ಉಪವಾಸವಿರಬೇಕಾಗಿ ಬರುತ್ತದೆ. ಬೆಳಗಿನ ಉಪಾಹಾರವನ್ನು (breakfast) ಬಿಟ್ಟು ಬಿಡುವ ಬದಲು, ಸರಿಯಾದ ಸಮಯಕ್ಕೆ ಆಹಾರ ತಿಂದರೆ ಹೃದಯ ರಕ್ತನಾಳದ ಕಾಯಿಲೆಯನ್ನು ತಡೆಗಟ್ಟುವಲ್ಲಿ  ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ.
 

ತಪ್ಪು ಸಮಯದಲ್ಲಿ ತಿಂದರೇನಾಗುತ್ತೆ?
ಬೆಳಿಗ್ಗೆ 8 ರಿಂದ ರಾತ್ರಿ 9 ಗಂಟೆಯೊಳಗೆ ಆಹಾರ ಸೇವಿಸೋದರಿಂದ ಆರೋಗ್ಯ ಉತ್ತಮವಾಗಿರುತ್ತೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. 
ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುವುದಕ್ಕೂ ಹೃದ್ರೋಗದ ಅಪಾಯಕ್ಕೂ ಸಂಬಂಧವಿದೆ.
ಪ್ರತಿ ಗಂಟೆ ತಡವಾಗಿ ತಿನ್ನುವುದು ಸೆರೆಬ್ರೊವಾಸ್ಕುಲರ್ ಕಾಯಿಲೆಯ ಅಪಾಯವನ್ನು ಸುಮಾರು 6% ಹೆಚ್ಚಿಸುತ್ತದೆ.
ದಿನದ ಕೊನೆಯ ಊಟವನ್ನು (dinner) ರಾತ್ರಿ 8 ಗಂಟೆಯ ಬದಲಾಗಿ ರಾತ್ರಿ 9 ಗಂಟೆಯ ನಂತರ ಸೇವಿಸುವುದರಿಂದ ಸೆರೆಬ್ರೊವಾಸ್ಕುಲರ್ ಕಾಯಿಲೆಯ ಅಪಾಯವನ್ನು 28% ಹೆಚ್ಚಿಸುತ್ತದೆ.

ನೀವು ಒಂದು ದಿನದಲ್ಲಿ ಎಷ್ಟು ಬಾರಿ ತಿನ್ನುತ್ತೀರಿ ಎಂಬುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಬೆಳಗಿನ ಉಪಾಹಾರವನ್ನು ಬಿಟ್ಟು ಬಿಡುವ ಬದಲು ಬೇಗನೆ ರಾತ್ರಿ ಊಟವನ್ನು ತಿನ್ನುವುದು ಸೆರೆಬ್ರೊವಾಸ್ಕುಲರ್ (cerebrovascular) ಕಾಯಿಲೆಯ ಅಪಾಯವನ್ನು 7% ರಷ್ಟು ಕಡಿಮೆ ಮಾಡುತ್ತದೆ.

ಊಟದ ಸಮಯದ ಬಗ್ಗೆ ಈ ವಿಷಯವನ್ನು ಅರ್ಥಮಾಡಿಕೊಳ್ಳಿ
ಊಟದ ಸಮಯವು ಸಿರ್ಕಾಡಿಯನ್ ಲಯಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಸಿರ್ಕಾಡಿಯನ್ ಲಯವು ದೇಹದ ಜೈವಿಕ ಮಾದರಿಯಾಗಿದ್ದು, ಇದು 24 ಗಂಟೆಗಳ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಶರೀರಶಾಸ್ತ್ರ, ಚಯಾಪಚಯ ಮತ್ತು ನಡವಳಿಕೆಯನ್ನು ನಿರ್ಧರಿಸುತ್ತದೆ. ನಿಮ್ಮ ಊಟದ ಸಮಯವು ಈ ಸಿರ್ಕಾಡಿಯನ್ ಲಯದಿಂದ ಹೊರಗೆ ಹೋದಾಗ, ಕೊಬ್ಬನ್ನು ಸಂಗ್ರಹಿಸುವ ಹಾರ್ಮೋನುಗಳು ಹೆಚ್ಚಾಗುತ್ತವೆ ಮತ್ತು ಬೊಜ್ಜು ಹೆಚ್ಚಾಗುತ್ತದೆ.

ಸಿರ್ಕಾಡಿಯನ್ ರಿದಮ್ ಗೆ ಆಹಾರ ಚಿಕಿತ್ಸೆ
ನೀವು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಯಾವ ಸಮಯದಲ್ಲಿ ಸೇವಿಸುತ್ತೀರಿ ಎಂಬುದರ ಮೇಲೆ ಸಿರ್ಕಾಡಿಯನ್ ಲಯವು (circadian rhythm) ರೂಪುಗೊಳ್ಳುತ್ತದೆ. ನೀವು ದಿನದ ಮೊದಲ ಊಟವನ್ನು ಬೆಳಿಗ್ಗೆ 8 ರೊಳಗೆ ಸೇವಿಸಬೇಕು ಮತ್ತು ರಾತ್ರಿ ಊಟವನ್ನು ರಾತ್ರಿ 8 ಗಂಟೆಯ ನಂತರ ತಿನ್ನಬಾರದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಸಿರ್ಕಾಡಿಯನ್ ಲಯಗಳ ಪ್ರಾರಂಭ ಮತ್ತು ಪ್ರಕ್ರಿಯೆಯು ಸೂರ್ಯನಿಗೆ ಅನುಗುಣವಾಗಿ ಚಲಿಸುತ್ತದೆ.

ಈ ಮಾದರಿಯ ಪ್ರಕಾರ, ನಾವು ಹಗಲಿನಲ್ಲಿ ತಿನ್ನಬೇಕು ಮತ್ತು ಸೂರ್ಯಾಸ್ತದ ವೇಳೆಗೆ ಊಟ ಮಾಡಬೇಕು. ಇದರಿಂದ ನೀವು ರಾತ್ರಿಯಲ್ಲಿ ಉಪವಾಸ ಮಾಡಲು ಗರಿಷ್ಠ ಸಮಯವನ್ನು ಪಡೆಯಬಹುದು. ತಿನ್ನುವ ಸಮಯವು ನಮ್ಮ ಆರೋಗ್ಯದ ಮೇಲೆ ಬಹಳ ಆಳವಾದ ಪರಿಣಾಮ ಬೀರುತ್ತದೆ . ತಡವಾಗಿ ತಿಂದಷ್ಟು ಹೃದಯಾಘಾತದ ಅಪಾಯ ಕೂಡ ಹೆಚ್ಚುತ್ತದೆ. 

Latest Videos

click me!