ಇತ್ತೀಚೆಗೆ ತುಂಬಾ ಪ್ರಸಿದ್ಧಿ ಪಡೆದಿರುವ ಆಹಾರಗಳಲ್ಲಿ ಅಗಸೆ ಬೀಜ ಮೊದಲ ಸ್ಥಾನದಲ್ಲಿದೆ.. ಅಗಸೆ ಬೀಜಗಳನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ನಿಮಗೆ ತುಂಬಾ ಪೌಷ್ಟಿಕಾಂಶಗಳು ಸಿಗುತ್ತವೆ. ಪ್ರತಿದಿನ ನೀರಿನಲ್ಲಿ ನೆನೆಸಿ ತಿಂದರೆ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಏನೆಲ್ಲಾ ಅಂತ ಈಗ ನೋಡೋಣ…
ಅಗಸೆ ಬೀಜಗಳಲ್ಲಿರುವ ಪೌಷ್ಟಿಕಾಂಶಗಳು…
ಒಟ್ಟು ಕೊಬ್ಬು: 42 ಗ್ರಾಂ
ಕೊಲೆಸ್ಟ್ರಾಲ್: 0 ಮಿ.ಗ್ರಾಂ
ಸೋಡಿಯಂ: 30 ಮಿ.ಗ್ರಾಂ
ಪೊಟ್ಯಾಶಿಯಂ: 813 ಮಿ. ಗ್ರಾಂ
ಒಟ್ಟು ಕಾರ್ಬೋಹೈಡ್ರೇಟ್: 29 ಗ್ರಾಂ.
ಪ್ರೋಟೀನ್: 18 ಗ್ರಾಂ.
ನೆನೆಸಿದ ಅಗಸೆ ಬೀಜಗಳನ್ನು ಪ್ರತಿದಿನ ತಿಂದರೆ ತೂಕ ಇಳಿಕೆಯಾಗುತ್ತದೆ. ಅಗಸೆ ಬೀಜಗಳಲ್ಲಿ ಡಯೆಟರಿ ಫೈಬರ್ ತುಂಬಾ ಇರುತ್ತದೆ. ನಿಯಮಿತವಾಗಿ ತಿನ್ನುವುದರಿಂದ ತೂಕ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಹೆಚ್ಚು ಫೈಬರ್ ಇರುವ ಆಹಾರ ಹೊಟ್ಟೆ ತುಂಬಿದ ಭಾವನೆ ಕೊಡುತ್ತದೆ, ಹಸಿವು ಮತ್ತು ಕ್ಯಾಲೋರಿ ಸೇವನೆ ಕಡಿಮೆ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಗೂ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು, ತೂಕ ಇಳಿಸಲು ಮತ್ತು ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ.
ಒಮೆಗಾ-3 ಕೊಬ್ಬಿನ ಆಮ್ಲಗಳು…
ಸಸ್ಯಾಹಾರಿಗಳು ಈಗ ಆಲ್ಫಾ-ಲಿನೋಲೆನಿಕ್ ಆಸಿಡ್ (ALA)ಇರುವ ಅಗಸೆ ಬೀಜಗಳಿಂದ ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಪಡೆಯಬಹುದು. ಅಗಸೆ ಬೀಜಗಳಲ್ಲಿರುವ ALA ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯನ್ನು ತಡೆಯುತ್ತದೆ. ರಕ್ತನಾಳಗಳ ಉರಿಯೂತ ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಹೃದಯದ ಆರೋಗ್ಯ ವೃದ್ಧಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ನೆನೆಸಿದ ಅಗಸೆ ಬೀಜಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇವುಗಳಲ್ಲಿರುವ ಪೋಷಕಾಂಶಗಳು ಕರುಳಿನಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ಕಡಿಮೆ ಮಾಡಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತವೆ. ಅಗಸೆ ಬೀಜಗಳಲ್ಲಿರುವ ಫೈಬರ್ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಫೈಟೊಸ್ಟೆರಾಲ್ಸ್ ಸೇವನೆಯಿಂದ ಕೆಟ್ಟ LDL ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.