ಸ್ಮಾರ್ಟ್‌ವಾಚ್‌ ಧರಿಸೋದರಿಂದ ಕ್ಯಾನ್ಸರ್ ಬರುತ್ತಾ? ಆತಂಕ ಸೃಷ್ಟಿಸಿದ ಸಂಶೋಧನಾ ವರದಿ

Published : Dec 23, 2024, 07:26 PM IST

ಒಂದು ಕಾಲದಲ್ಲಿ ಕೇವಲ ಸಮಯ ನೋಡೋಕೆ ಮಾತ್ರ ವಾಚ್‌ ಇತ್ತು. ಈಗ ಸ್ಮಾರ್ಟ್‌ವಾಚ್‌ಗಳಲ್ಲಿ ಫೋನ್‌ ಕಾಲ್‌ನಿಂದ ಸೋಶಿಯಲ್‌ ಮೀಡಿಯಾವರೆಗೂ ಎಲ್ಲಾ ಆಗುತ್ತೆ. ಆದ್ರೆ, ಸ್ಟೈಲಿಷ್‌ ಆಗಿರೋ ಈ ವಾಚ್‌ಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅಂತ ಹೊಸ ಅಧ್ಯಯನವೊಂದು ಹೇಳಿದೆ.

PREV
15
ಸ್ಮಾರ್ಟ್‌ವಾಚ್‌ ಧರಿಸೋದರಿಂದ ಕ್ಯಾನ್ಸರ್ ಬರುತ್ತಾ? ಆತಂಕ ಸೃಷ್ಟಿಸಿದ ಸಂಶೋಧನಾ ವರದಿ

ದಿನದಿಂದ ದಿನಕ್ಕೆ ಸ್ಮಾರ್ಟ್‌ವಾಚ್‌ ಬಳಕೆದಾರರು ಹೆಚ್ಚುತ್ತಿದ್ದಾರೆ. ಆದ್ರೆ, ಸ್ಟೈಲಿಶ್‌ ವಾಚ್‌ಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಅಂತ ಗೊತ್ತಾ? ಹೊಸ ಅಧ್ಯಯನದಲ್ಲಿ ಈ ಆಘಾತಕಾರಿ ವಿಷಯ ಬಯಲಾಗಿದೆ. ವಾಚ್‌ಗಳಲ್ಲಿರೋ ಪಾಲಿಫ್ಲೋರೋ ಅಲ್ಕೈಲ್‌, ಪರ್‌ಫ್ಲೋರೋಹೆಕ್ಸನೋಯಿಕ್‌ ಆಸಿಡ್‌ಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಈ ವರದಿ ಹೇಳಿದೆ.

25

ಪಾಲಿಫ್ಲೋರೋ ಅಲ್ಕೈಲ್‌ ರಾಸಾಯನಿಕವನ್ನು ನಾನ್‌ಸ್ಟಿಕ್‌ ಪಾತ್ರೆಗಳು, ಸೌಂದರ್ಯವರ್ಧಕಗಳಲ್ಲಿ ಬಳಸುತ್ತಾರೆ. ಇವು ದೇಹದಲ್ಲಿ ಸುಲಭವಾಗಿ ಕರಗುವುದಿಲ್ಲ. ಇದರಿಂದ ಸಂತಾನೋತ್ಪತ್ತಿ ಸಮಸ್ಯೆ, ಕ್ಯಾನ್ಸರ್‌ ಬರಬಹುದು. ಚರ್ಮದ ಕ್ಯಾನ್ಸರ್‌, ಪ್ರಾಸ್ಟೇಟ್‌, ಕಿಡ್ನಿ, ವೃಷಣಗಳ ಕ್ಯಾನ್ಸರ್‌ ರಿಸ್ಕ್‌ ಹೆಚ್ಚಿಸಬಹುದು.

35

ಸ್ಮಾರ್ಟ್‌ವಾಚ್‌ನಿಂದ ರಾಸಾಯನಿಕಗಳು ಚರ್ಮಕ್ಕೆ ಹೀರಲ್ಪಡುತ್ತವೆ. ಇದರಿಂದ ಚರ್ಮದ ಸಮಸ್ಯೆಗಳು ಬರಬಹುದು. 22 ಬ್ರಾಂಡ್‌ಗಳ ವಾಚ್‌ಗಳನ್ನು ಪರೀಕ್ಷಿಸಿ ಈ ಮಾಹಿತಿ ಪಡೆಯಲಾಗಿದೆ. ಹೆಚ್ಚು ಹೊತ್ತು ವಾಚ್‌ ಧರಿಸುವವರಿಗೆ ರಿಸ್ಕ್‌ ಜಾಸ್ತಿ ಎಂದು ವರದಿ ಹೇಳಿದೆ.

45

ದುಬಾರಿ ಸ್ಮಾರ್ಟ್‌ವಾಚ್‌ಗಳಲ್ಲಿ ಈ ರಾಸಾಯನಿಕಗಳ ಪ್ರಮಾಣ ಜಾಸ್ತಿ ಇರುತ್ತೆ. 30 ಡಾಲರ್‌ಗಿಂತ ಹೆಚ್ಚಿನ ಬೆಲೆಯ ವಾಚ್‌ಗಳಲ್ಲಿ ಫ್ಲೋರಿನ್‌ ಅಂಶ ಜಾಸ್ತಿ ಇರುತ್ತೆ. ಹಾಗಾಗಿ ವಾಚ್‌ ಕೊಳ್ಳುವ ಮುನ್ನ ಅದರಲ್ಲಿ ಏನಿದೆ ಅಂತ ಚೆಕ್‌ ಮಾಡಿ ಎಂದು ಸಲಹೆ ನೀಡಲಾಗಿದೆ.

55

ವಾಚ್‌ ಬೆಲ್ಟ್‌ಗಳು ಬಣ್ಣ ಕಳೆದುಕೊಳ್ಳದಿರಲು ಈ ರಾಸಾಯನಿಕಗಳನ್ನು ಬಳಸುತ್ತಾರೆ. 68% ವಾಚ್‌ಗಳಲ್ಲಿ ಈ ರಾಸಾಯನಿಕಗಳಿವೆ. ಫ್ಲೋರೋಎಲಾಸ್ಟೋಮರ್‌ ಇರೋ ಬೆಲ್ಟ್‌ಗಳನ್ನು ಬಳಸಬೇಡಿ ಅಂತ ಸಂಸ್ಥೆಗಳು ಹೇಳಿವೆ.

Read more Photos on
click me!

Recommended Stories