Weight Loss Tips: ಐಸ್ ಕ್ರೀಮ್, ಪಾಸ್ತಾ, ಚಾಕೊಲೇಟ್ ತಿಂದೂ ತೂಕ ಇಳಿಸಬಹುದು

Published : Oct 21, 2022, 03:19 PM IST

ತೂಕವನ್ನು ಕಳೆದುಕೊಳ್ಳಲು ಅಥವಾ ಅದನ್ನು ನಿಯಂತ್ರಣದಲ್ಲಿಡಲು, ಜನರು ತಿನ್ನುವುದನ್ನು ತಪ್ಪಿಸುತ್ತಾರೆ, ವಿಶೇಷವಾಗಿ ಐಸ್ ಕ್ರೀಮ್, ಪಾಸ್ತಾ ಮತ್ತು ಬಾಳೆಹಣ್ಣುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡುತ್ತಾರೆ. ತಮ್ಮ ಆಸೆಗಳನ್ನು ಚಿವುಟಿ ಹಾಕುತ್ತಾರೆ. ಆದರೆ ತೂಕ ಹೆಚ್ಚಾಗದಂತೆ ನೀವು ಎಲ್ಲವನ್ನೂ ತಿನ್ನಬಹುದು, ಆದರೆ ಅದಕ್ಕೆ ಸರಿಯಾದ ಸಮಯವನ್ನು ತಿಳಿದಿರಬೇಕು ಎಂದು ಆಹಾರ ವಿಜ್ಞಾನಿ ನಟಾಲಿ ಅಲಿಬ್ರಾಂಡಿ ಬಹಿರಂಗಪಡಿಸಿದ್ದಾರೆ. 

PREV
110
Weight Loss Tips: ಐಸ್ ಕ್ರೀಮ್, ಪಾಸ್ತಾ, ಚಾಕೊಲೇಟ್ ತಿಂದೂ ತೂಕ ಇಳಿಸಬಹುದು

ತಿನ್ನಲು ಸರಿಯಾದ ಸಮಯದ ಬಗ್ಗೆ ತಿಳಿದುಕೊಂಡರೆ, ತೂಕ ಹೆಚ್ಚುವ ಆಹಾರ ತಿಂದರೂ ಸಹ ತೂಕವನ್ನು ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನೀವು ಚಾಕೊಲೇಟ್ ತಿನ್ನಲು ಬಯಸಿದರೆ, ನಿಮಗೆ ಸರಿಯಾದ ಸಮಯ 11 ಗಂಟೆ. ಇದಲ್ಲದೆ, ಆಹಾರ ವಿಜ್ಞಾನಿಯ ಪ್ರಕಾರ, ಇತರ ವಸ್ತುಗಳನ್ನು ತಿನ್ನಲು ಯಾವ ಸಮಯ ಬೆಸ್ಟ್ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

210

ಬೆಳಿಗ್ಗೆ 6.30ಕ್ಕೆ ಐಸ್ ಕ್ರೀಮ್
ಬೆಳಿಗ್ಗೆ ಐಸ್ ಕ್ರೀಮ್ ಅನ್ನು ಯಾರು ತಿನ್ನುತ್ತಾರೆ? ನಾವು ಅದನ್ನು ಮಧ್ಯಾಹ್ನ ಅಥವಾ ಸಂಜೆ ತಿನ್ನುತ್ತೇವೆ. ಆದರೆ ತೂಕವನ್ನು ನಿಯಂತ್ರಣದಲ್ಲಿಡಬೇಕಾದರೆ (weight control), ಆಹಾರ ವಿಜ್ಞಾನಿ ನಟಾಲಿ ಅಲಿಬ್ರಾಂಡಿ ಅವರ ಪ್ರಕಾರ, ನೀವು ಬೆಳಿಗ್ಗೆ 6.30 ರ ಸುಮಾರಿಗೆ ಐಸ್ ಕ್ರೀಮ್ ಸೇವಿಸಿದರೆ, ರುಚಿಯೂ ಉಳಿಯುತ್ತದೆ ಮತ್ತು ತೂಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.

310

ಬೆಳಿಗ್ಗೆ ಎದ್ದ ತಕ್ಷಣ ಐಸ್ ಕ್ರೀಂ ಸೇವಿಸುವುದರಿಂದ ನಿಮ್ಮ ಮಾನಸಿಕ ಶಕ್ತಿಯನ್ನು ಸುಧಾರಿಸಬಹುದು. ಟೋಕಿಯೋದ ಕಿಯೋರಿನ್ ವಿಶ್ವವಿದ್ಯಾಲಯದಿಂದ ಜಪಾನಿನ ಅಧ್ಯಯನವು ಐಸ್ಕ್ರೀಮ್ ತಿನ್ನುವ ಜನರು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಕಡಿಮೆ ಕಿರಿಕಿರಿ ಹೊಂದಿರುತ್ತಾರೆ ಎಂದು ಕಂಡುಕೊಂಡಿದೆ.  

410

ಮೊಟ್ಟೆ ಮತ್ತು ಮಾಂಸ - ಬೆಳಿಗ್ಗೆ 7 ಗಂಟೆ
ಮೊಟ್ಟೆ ಅಥವಾ ಮಾಂಸದಂತಹ ಪ್ರೋಟೀನ್ ಭರಿತ ಆಹಾರಗಳು (protein food) ವ್ಯಾಯಾಮದ ನಂತರ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಜೊತೆಗೆ ಹೆಚ್ಚಿನ ಕ್ಯಾಲರಿ ಸೇವಿಸುವ ಸಾಧ್ಯತೆ ಕೂಡ ಕಡಿಮೆ ಇರುತ್ತೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ತಿನ್ನುವ ಜನರು ಮಧ್ಯಾಹ್ನದ ಊಟದ ಸಮಯದಲ್ಲಿ ಕಾರ್ಬೋಹೈಡ್ರೇಟ್-ಸಮೃದ್ಧ ಉಪಾಹಾರವನ್ನು ಸೇವಿಸುವವರಿಗಿಂತ ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತಾರೆ ಎಂದು ಕಂಡುಹಿಡಿದಿದೆ. 

510

ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನ ಮತ್ತೊಂದು ಅಧ್ಯಯನವು ವ್ಯಾಯಾಮದ ನಂತರ ಮೊಟ್ಟೆ ತಿನ್ನುವುದರಿಂದ ತೂಕ ನಿಯಂತ್ರಿಸಲು ಸಾಧ್ಯವಾಗುತ್ತೆ ಎಂದು ವರದಿ ಮಾಡಿದೆ. ಜಪಾನ್ನ ಟೋಕಿಯೊದಲ್ಲಿರುವ ವಾಸೆಡಾ ವಿಶ್ವವಿದ್ಯಾಲಯವು ಬೆಳಿಗ್ಗೆ ಮೀನು, ಚಿಕನ್ನಂತಹ ಪ್ರೋಟೀನ್ ಭರಿತ ಆಹಾರ ತಿನ್ನುವುದು ಸ್ನಾಯುಗಳನ್ನು ಬಲಪಡಿಸುತ್ತದೆ ಎಂದು ಕಂಡುಹಿಡಿದಿದೆ.

610

ಕಾಫಿ ಮತ್ತು ಕೇಕ್- ಬೆಳಿಗ್ಗೆ 10
ಬೆಳಿಗ್ಗೆ 10 ಗಂಟೆಗೆ ಕೆಫೀನ್ ಹೆಚ್ಚಿಸಲು ಸರಿಯಾದ ಸಮಯವಾಗಿದೆ. ದಿ ವುಮೆನ್ಸ್ ಹೆಲ್ತ್ ಬಾಡಿ ಕ್ಲಾಕ್ ಡಯಟ್ ಬುಕ್ ಪ್ರಕಾರ, ನೀವು ಎದ್ದ ತಕ್ಷಣ ಒಂದು ಕಪ್ ಕಾಫಿ ಕುಡಿಯುವುದರಿಂದ ಈಗಾಗಲೇ ಹೆಚ್ಚಿನ ಮಟ್ಟದ ಕಾರ್ಟಿಸೋಲ್ ಹೊಂದಿರುತ್ತೀರಿ. ಮಧ್ಯಾಹ್ನದ ಊಟಕ್ಕೂ ಮೊದಲು, ನಮ್ಮ ದೇಹದ ಒತ್ತಡವು ಕಡಿಮೆಯಾಗುತ್ತದೆ. ಇದು ಕಾಫಿ ಕುಡಿಯಲು ಸರಿಯಾದ ಸಮಯವಾಗುತ್ತದೆ. ನೀವು ಅದರೊಂದಿಗೆ ಒಂದು ಸಣ್ಣ ತುಂಡು ಕೇಕ್ (piece of cake) ಅಥವಾ ಪೇಸ್ಟ್ರಿ ಸಹ ತೆಗೆದುಕೊಳ್ಳಬಹುದು.  

710

ಚಾಕೊಲೇಟ್ - ಬೆಳಿಗ್ಗೆ 11 ಗಂಟೆ
ಮಧ್ಯಾಹ್ನದ ಊಟಕ್ಕೆ ಮೊದಲು ಚಾಕೊಲೇಟ್ ತಿನ್ನುವುದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬೆಳಿಗ್ಗೆ 100 ಗ್ರಾಂ ಸಕ್ಕರೆಯನ್ನು ಸೇವಿಸುವ ಮಹಿಳೆಯರು ತಮ್ಮ ದೇಹದ ಕೊಬ್ಬನ್ನು ಬೇಗನೆ ಕರಗಿಸುತ್ತಾರೆ ಮತ್ತು ಕಡಿಮೆ ರಕ್ತದ ಸಕ್ಕರೆಯನ್ನು (blood sugar) ಸಹ ಹೊಂದಿರುತ್ತಾರೆ ಎಂದು ಸ್ಪ್ಯಾನಿಷ್ ಅಧ್ಯಯನವು ತೋರಿಸಿದೆ.

810

ಸೂಪ್ - ಮಧ್ಯಾಹ್ನ 12
ಊಟಕ್ಕೆ ಅರ್ಧ ಗಂಟೆ ಮೊದಲು ಕಡಿಮೆ ಕ್ಯಾಲೋರಿಯ ಸೂಪ್ (low calorie soup) ಸೇವಿಸಿದರೆ, ತೂಕವನ್ನು ಕಳೆದುಕೊಳ್ಳಬಹುದು. ಒಂದು ಅಧ್ಯಯನವು ಮುಖ್ಯ ಊಟಕ್ಕೆ ಮೊದಲು ಸೂಪ್ ಸೇವಿಸುವ ಜನರು ಒಟ್ಟಾರೆಯಾಗಿ 20 ಶೇಕಡಾದಷ್ಟು ಕಡಿಮೆ ಕ್ಯಾಲೋರಿ ಸೇವಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.

910

ಪಾಸ್ತಾ - ಮಧ್ಯಾಹ್ನ 12.20
2021 ರ ಅಧ್ಯಯನವು ದಿನಕ್ಕೆ ಒಂದು ಸಲ ದೊಡ್ಡ ಪ್ರಮಾಣದ ಕ್ಯಾಲೊರಿ ಆಹಾರ ತಿನ್ನುವುದರಿಂದ ತೂಕ ನಷ್ಟ ಮತ್ತು ಚಯಾಪಚಯ ಆರೋಗ್ಯ ಹೆಚ್ಚಿಸುತ್ತೆ ಎಂದು ತಿಳಿಸಿದೆ. ಆದ್ದರಿಂದ ಮಧ್ಯಾಹ್ನ ಪಾಸ್ತಾದಂತಹ ಆಹಾರವನ್ನು ತಿನ್ನುವುದು ಒಳ್ಳೆಯದು. ಆರೋಗ್ಯಕರ ಆಹಾರ ಅನುಸರಿಸುವಾಗ ಮಧ್ಯಾಹ್ನದ ಊಟದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ತಿನ್ನುವುದು ತೂಕ ನಷ್ಟಕ್ಕೆ (weight loss) ಕಾರಣವಾಗುತ್ತದೆ ಎಂದು ಬ್ರೆಜಿಲ್ ಅಧ್ಯಯನವು ತೋರಿಸಿದೆ. 

1010

ಬಾಳೆಹಣ್ಣು - ಸಂಜೆ 5.30
ಒತ್ತಡದ ದಿನದ ಕೆಲಸದ ನಂತರ, ನೀವು ಮನೆಗೆ ಹೋಗುವಾಗ ಬಾಳೆಹಣ್ಣು ತಿನ್ನೋದು ಒಳ್ಳೆಯದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ, ಇವೆರಡೂ ದೇಹದಲ್ಲಿನ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಪೊಟ್ಯಾಸಿಯಮ್ ನಿಮ್ಮ ಸ್ನಾಯುಗಳನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಸೆರೊಟೋನಿನ್ ಸಮೃದ್ಧವಾಗಿದೆ, ಇದು ನಿಮ್ಮ ಮನಸ್ಥಿತಿಯನ್ನು ಗುಣಪಡಿಸಲು ಸಹಾಯ ಮಾಡುತ್ತೆ.

Read more Photos on
click me!

Recommended Stories