ವಿಟಮಿನ್ E ಮೆದುಳಿನ ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ. ನಿಯಮಿತವಾಗಿ ವಿಟಮಿನ್ E ಸೇವಿಸುವವರ ಮೆದುಳು ತುಂಬಾ ಚುರುಕಾಗಿ ಕೆಲಸ ಮಾಡುತ್ತದೆ. ನೀವು ವೃದ್ಧರಾಗಿದ್ದರೂ ನಿಮ್ಮ ಮೆದುಳು ಯುವಕರಂತೆ ಇರುತ್ತದೆ. ಈ ವಿಟಮಿನ್ E ಗಾಗಿ ನಾವು ನಿಯಮಿತವಾಗಿ ಬಾದಾಮಿ, ಹ್ಯಾಝೆಲ್ ನಟ್ಸ್ ಅನ್ನು ತಿನ್ನಬೇಕು. ಇವು ನಿಮ್ಮ ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಇದೆ. ಒಮೆಗಾ-3 ಕೊಬ್ಬಿನಾಮ್ಲಗಳು ಉತ್ತಮ ನ್ಯೂರಾನ್ ಕಾರ್ಯಕ್ಕೆ ಸಂಬಂಧಿಸಿವೆ. ದಿನಕ್ಕೆ ಎರಡು ವಾಲ್‌ನಟ್ಸ್ ತಿನ್ನಬೇಕು. ಇವು ಮೆದುಳಿನ ಆಕಾರದಲ್ಲಿ ಇರುತ್ತವೆ. ನಮ್ಮ ಮೆದುಳಿನ ಕೋಶಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಬಾದಾಮಿ, ಪಿಸ್ತಾ ಮುಂತಾದ ನಟ್ಸ್ ನಲ್ಲಿ ಮೆದುಳಿನ ಉರಿಯೂತವನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ.