ಸಾಮಾನ್ಯವಾಗಿ ಮಹಿಳೆಯರಿಗೆ ದಿನಕ್ಕೆ 2.1 ಲೀಟರ್ ನೀರು ಬೇಕು. ವ್ಯಾಯಾಮ, ಬಿಸಿಲು, ಉಪ್ಪು ಜಾಸ್ತಿ ಇರೋ ಆಹಾರ ತಿಂದ್ರೆ ಇನ್ನೂ ಜಾಸ್ತಿ ಬೇಕಾಗುತ್ತೆ. ನೀರು ಕಡಿಮೆ ಆದ್ರೆ ಆಯಾಸ, ದೇಹ ಊದಿಕೊಳ್ಳುವುದು, ಸಿಹಿ ತಿನ್ನಬೇಕು ಅನ್ನೋ ಹಂಬಲ ಇರುತ್ತೆ. ಮೂತ್ರ ತಿಳಿ ಹಳದಿ ಇದ್ರೆ ನೀವು ಸಾಕಷ್ಟು ನೀರು ಕುಡಿದಿದ್ದೀರಿ ಅಂತ ಅರ್ಥ.
ಪುರುಷರು
ಪುರುಷರು ದಿನಕ್ಕೆ 3 ಲೀಟರ್ ನೀರು ಕುಡಿಯಬೇಕು. ಜಿಮ್, ಬಿಸಿಲಲ್ಲಿ ಕೆಲಸ ಮಾಡೋರಿಗೆ ಇನ್ನೂ ಜಾಸ್ತಿ ಬೇಕು. ನೀರು ಕಡಿಮೆ ಕುಡಿದ್ರೆ ತುಟಿ ಒಣಗುವುದು, ತಲೆನೋವು, ಆಯಾಸ ಬರುತ್ತೆ.
ಗರ್ಭಿಣಿಯರು, ತಾಯಂದಿರು
ಗರ್ಭಿಣಿಯರಿಗೆ 2.4 ಲೀಟರ್, ಹಾಲುಣಿಸುವ ತಾಯಂದಿರಿಗೆ 3 ಲೀಟರ್ ನೀರು ಬೇಕು. ಹಾಲು ಉತ್ಪಾದನೆ, ಪೋಷಕಾಂಶಗಳ ಪೂರೈಕೆಗೆ ಇದು ಸಹಾಯ ಮಾಡುತ್ತೆ. ಮಲಬದ್ಧತೆ ಕಡಿಮೆ ಮಾಡುತ್ತೆ.