ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸುವುದು ಸುಲಭವಲ್ಲ. ಇದಕ್ಕೆ ಸರಿಯಾದ ಆಹಾರ ಕ್ರಮ ಹಾಗೂ ವ್ಯಾಯಾಮದ ಜೊತೆಗೆ ಕೆಲವು ವಿಶೇಷ ಪಾನೀಯಗಳು ಕೂಡಾ ಮುಖ್ಯ ಪಾತ್ರ ವಹಿಸುತ್ತವೆ. ಔಷಧೀಯ ಗುಣಗಳಿರುವ ಇಂತಹ ಕೆಲವು ಪಾನೀಯಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸುವುದು ಸುಲಭವಲ್ಲ. ಇದಕ್ಕೆ ಸರಿಯಾದ ಆಹಾರ ಕ್ರಮ ಹಾಗೂ ವ್ಯಾಯಾಮದ ಜೊತೆಗೆ ಕೆಲವು ವಿಶೇಷ ಪಾನೀಯಗಳು ಕೂಡಾ ಮುಖ್ಯ ಪಾತ್ರ ವಹಿಸುತ್ತವೆ. ಔಷಧೀಯ ಗುಣಗಳಿರುವ ಇಂತಹ ಕೆಲವು ಪಾನೀಯಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
26
ಜೀರಿಗೆ ನೀರು ದೇಹದಲ್ಲಿನ ಅಧಿಕ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡುತ್ತದೆ
ಜೀರಿಗೆಯಲ್ಲಿ ಥೈಮೋಕ್ವಿನೋನ್ ಮತ್ತು ಲಿಮೋನೀನ್‌ನಂತಹ ಸಕ್ರಿಯ ಅಂಶಗಳಿವೆ. ರಾತ್ರಿ ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರಲ್ಲಿ 1-2 ಟೀಸ್ಪೂನ್ ಜೀರಿಗೆ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ಇದು ದೇಹದ ಉರಿಯೂತ ಕಡಿಮೆ ಮಾಡಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಸಲು ನೆರವಾಗುತ್ತದೆ.
36
ಅರಿಶಿನ ನೀರು ಬ್ಲಡ್ ಶುಗರ್ ನಿಯಂತ್ರಿಸಿ ಕೊಬ್ಬು ಕರಗಿಸಲು ಸಹಕಾರಿ
ಅರಿಶಿನ ಮತ್ತು ಅದರಲ್ಲಿರುವ ಪ್ರಮುಖ ಅಂಶವಾದ ಕರ್ಕ್ಯುಮಿನ್, ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಈ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ಕರ್ಕ್ಯುಮಿನ್ ಸಪ್ಲಿಮೆಂಟ್‌ಗಳನ್ನು 8 ರಿಂದ 12 ವಾರಗಳವರೆಗೆ ಸೇವಿಸುವುದರಿಂದ ಸರಾಸರಿ 0.5 ರಿಂದ 1 ಕೆ.ಜಿ.ಯಷ್ಟು ತೂಕ ಇಳಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.
ಸೋಂಪು ನೀರು ದೇಹದಲ್ಲಿನ ಅಧಿಕ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡುತ್ತದೆ
ಸೋಂಪು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. 1-2 ಟೀಸ್ಪೂನ್ ಸೋಂಪನ್ನು ಒಂದು ಲೀಟರ್ ನೀರಲ್ಲಿ ರಾತ್ರಿಯಿಡೀ ನೆನೆಸಿಟ್ಟು, ದಿನವಿಡೀ ಕುಡಿಯಬಹುದು. ಇಲ್ಲವಾದರೆ, ಊಟದ ನಂತರ ಅರ್ಧ ಟೀಸ್ಪೂನ್ ಹುರಿದ ಸೋಂಪನ್ನು ಜಗಿಯುವುದರಿಂದ ಅನಗತ್ಯ ತಿಂಡಿ ತಿನ್ನುವುದನ್ನು ತಪ್ಪಿಸಬಹುದು.
56
ಮೆಂತ್ಯ ನೀರು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ
ಮೆಂತ್ಯ ನೀರು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೀಗಾಗಿ ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕರಗುವ ಫೈಬರ್ ಅಂಶವು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಕಡಿಮೆ ಕ್ಯಾಲೋರಿ ಸೇವಿಸಲು ಸಾಧ್ಯವಾಗುತ್ತದೆ.
66
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ತೂಕ ಇಳಿಸಲು ದಾಲ್ಚಿನ್ನಿ ನೀರು ಸಹಕಾರಿ
ದಾಲ್ಚಿನ್ನಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ದಾಲ್ಚಿನ್ನಿ ಸಪ್ಲಿಮೆಂಟ್‌ಗಳು ದೇಹದ ತೂಕ ಮತ್ತು ಬಿಎಂಐ (BMI) ಅನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ದಿನಕ್ಕೆ 3 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಸೇವಿಸಿದಾಗ ಉತ್ತಮ ಫಲಿತಾಂಶ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.