ಮಳೆಗಾದಲ್ಲಿ ಲೆದರ್‌ ಶೂ ತರ್ಬಹುದು ಆಪತ್ತು, ಸ್ಟೈಲ್ ಜೊತೆಗೆ ಪಾದಗಳ ಆರೋಗ್ಯಕ್ಕೆ ಹೀಗೆ ಮಾಡಿ

Published : Jul 18, 2026, 05:02 PM IST

ಮಳೆಗಾಲದಲ್ಲಿ ಸ್ಟೈಲಿಷ್ ಆಗಿ ಕಾಣಲು ಹಲವರು ಲೆದರ್ ಶೂ ಧರಿಸುತ್ತಾರೆ. ಲೆದರ್‌ ಶೂನಲ್ಲಿ ನೀರು ಒಳಗೆ ಹೋಗೋದಿಲ್ಲ ಅಂದ್ಕೊಂಡು ಈ ಶೂ ಧರಿಸೋರಿದ್ದಾರೆ. ಆದ್ರೆ ಮಳೆಗಾಲದಲ್ಲಿ ನೀವು ಧರಿಸೋ ಲೆದರ್‌ ಶೂ ನಿಮ್ಮ ಪಾದದ ಆರೋಗ್ಯ ಹಾಳು ಮಾಡ್ಬಹುದು. ಚರ್ಮದ ನಾನಾ ಸಮಸ್ಯೆಗೆ ಕಾರಣ ಆಗ್ಬಹುದು.

PREV
15
ಸೋಂಕು

ತಜ್ಞರ ಪ್ರಕಾರ, ಮಳೆಗಾಲದಲ್ಲಿ ಲೆದರ್ ಶೂಗಳು ಒದ್ದೆಯಾದರೆ ಅವು ಬೇಗ ಒಣಗೋದಿಲ್ಲ. ಬೂಟಿನ ಒಳಭಾಗದಲ್ಲಿ ತೇವಾಂಶ, ಬೆವರು ಮತ್ತು ಶಾಖ ಸೇರಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಬೆಳೆಯಲು ಸೂಕ್ತ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಪಾದಗಳಲ್ಲಿ ವಿವಿಧ ರೀತಿಯ ಸೋಂಕುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

25
ತುರಿಕೆ

ಒದ್ದೆಯಾದ ಲೆದರ್‌ ಶೋ ಬಳಸೋದ್ರಿಂದ ಕಾಣಿಸಿಕೊಳ್ಳುವ ಮೊದಲ ಸಮಸ್ಯೆ ಅಂದ್ರೆ ಕಾಲ್ಬೆರಳುಗಳ ಮಧ್ಯ ತುರಿಕೆ, ಕೆಂಪಾಗುವುದು, ಉರಿ ಮತ್ತು ಚರ್ಮ ಸಿಪ್ಪೆಸುಲಿಯುವುದು. ಚಿಕಿತ್ಸೆ ಪಡೆಯದೇ ನಿರ್ಲಕ್ಷಿಸಿದರೆ ಇದು ಫಂಗಲ್ ಇನ್ಫೆಕ್ಷನ್ಗೆ ಕಾರಣವಾಗಬಹುದು.

35
ಚರ್ಮದಲ್ಲಿ ಗಾಯ

ಒದ್ದೆಯಾದ ಲೆದರ್‌ ಶೂವನ್ನು ನೀವು ಬಳಸ್ತನೆ ಇದ್ರೆ ಪಾದಗಳು ಹೆಚ್ಚು ಸಮಯ ತೇವವಾಗಿರುವುದರಿಂದ ಚರ್ಮ ಮೃದುವಾಗಿ ದುರ್ಬಲವಾಗುತ್ತದೆ. ನಂತರ ಚರ್ಮ ಬಿರುಕು ಬಿಡುವುದು, ಗಾಯಗಳಾಗೋದು, ಬ್ಯಾಕ್ಟೀರಿಯಾ ಸೋಂಕು ತಗುಲುವ ಅಪಾಯವೂ ಹೆಚ್ಚಾಗುತ್ತದೆ.

45
ದುರ್ವಾಸನೆ

ಇನ್ನೊಂದು ಸಾಮಾನ್ಯ ಸಮಸ್ಯೆ ಎಂದರೆ ಪಾದ ಮತ್ತು ಬೂಟಿನಿಂದ ದುರ್ವಾಸನೆ ಬರುವುದು. ಒದ್ದೆಯಾದ ಲೆದರ್ ಶೂಗಳಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.

55
ಪಾದಗಳ ಸುರಕ್ಷತೆಗೆ ಹೀಗೆ ಮಾಡಿ

ತಜ್ಞರು ಪ್ರಕಾರ, ಮಳೆಗಾಲದಲ್ಲಿ ಯಾವುದೇ ಸೋಂಕು ತಗಲಬಾರದು ಅಂದ್ರೆ ನೀವು ವಾಟರ್‌ ಪ್ರೂಫ್ ಚಪ್ಪಲಿ, ಶೋಗಳನ್ನು ಬಳಸುವುದು ಉತ್ತಮ. ಮನೆಗೆ ಬಂದ ತಕ್ಷಣ ಬೂಟು ಮತ್ತು ಸಾಕ್ಸ್ಗಳನ್ನು ತೆಗೆದು ಪಾದಗಳನ್ನು ಸ್ವಚ್ಛವಾಗಿ ತೊಳೆದು ಚೆನ್ನಾಗಿ ಒಣಗಿಸಬೇಕು. ಪ್ರತಿದಿನ ಸ್ವಚ್ಛ ಮತ್ತು ಒಣ ಕಾಟನ್ ಸಾಕ್ಸ್ಗಳನ್ನು ಧರಿಸಿ. ಒದ್ದೆಯಾದ ಬೂಟುಗಳನ್ನು ಸಂಪೂರ್ಣವಾಗಿ ಒಣಗಿಸಿದ ನಂತರವೇ ಮತ್ತೆ ಬಳಸಬೇಕು. ಒಂದೇ ಜೋಡಿ ಶೂಗಳನ್ನು ಸತತವಾಗಿ ಹಲವು ದಿನ ಧರಿಸುವುದನ್ನೂ ತಪ್ಪಿಸಿ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಸೋಂಕಿಗೆ ಕಾರಣವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories