Sugarless Tea: ಸಕ್ಕರೆಯೊಂದಿಗೆ ಟೀ ಸೇವಿಸುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳಿಂದಾಗಿ ಜನರು ಸಾಧ್ಯವಾದಷ್ಟು ಟೀ ಕುಡಿಯುವುದನ್ನೇ ನಿಲ್ಲಿಸುತ್ತಿದ್ದಾರೆ. ಆದರೆ ನೀವು ಟೀಯನ್ನು ಕಂಪ್ಲೀಟಾಗಿ ನಿಲ್ಲಿಸಬೇಕಿಲ್ಲ. ಬದಲಾಗಿ ಈ ರೀತಿ ಸೇವಿಸುವುದರಿಂದ ಟೀಯಿಂದ ನಮಗೆ ಯಾವುದೇ ರೀತಿ ಹಾನಿಯಾಗುವುದಿಲ್ಲ.
ಭಾರತದಲ್ಲಿ ಅನೇಕ ಜನರಿಗೆ ಟೀ ಅಥವಾ ಚಹಾ ಇಲ್ಲದೆ ದಿನ ಪ್ರಾರಂಭಿಸುವುದು ಅಸಾಧ್ಯ ಎಂದು ಹೇಳುತ್ತಲೇ ಬಂದಿದ್ದೇವೆ. ಟೀ ಕೇವಲ ಪಾನೀಯವಲ್ಲ, ದಿನವನ್ನು ಪ್ರಾರಂಭಿಸುವಾಗ ಇದು ಅತ್ಯಗತ್ಯ ಭಾಗವಾಗಿದೆ. ಹೆಚ್ಚಿನ ಮನೆಗಳಲ್ಲಿ ಹಾಲಿನ ಟೀ ಮೊದಲ ಆಯ್ಕೆ. ಹಾಲಿನ ಟೀ ಮಾಡುವಾಗ ಸಕ್ಕರೆಯನ್ನು ಸೇರಿಸುವುದು ಸಹ ಮಾಮೂಲು. ಇದರಿಂದ ಟೀ ಇನ್ನಷ್ಟು ಸಿಹಿ ಸಿಹಿಯಾಗಿರುತ್ತದೆ. ಆದರೆ ಸ್ವೀಟಾಗಿರಲೆಂದು ನೀವು ಟೀಗೆ ಸೇರಿಸುವ ಸಕ್ಕರೆಯು ಆರೋಗ್ಯ ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಕ್ಕರೆಯೊಂದಿಗೆ ಟೀ ಸೇವಿಸುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳಿಂದಾಗಿ ಜನರು ಸಾಧ್ಯವಾದಷ್ಟು ಟೀ ಕುಡಿಯುವುದನ್ನೇ ನಿಲ್ಲಿಸುತ್ತಿದ್ದಾರೆ. ಆದರೆ ನೀವು ಟೀಯನ್ನು ಕಂಪ್ಲೀಟಾಗಿ ನಿಲ್ಲಿಸಬೇಕಿಲ್ಲ. ಬದಲಾಗಿ ಈ ರೀತಿ ಸೇವಿಸುವುದರಿಂದ ಟೀಯಿಂದ ನಮಗೆ ಯಾವುದೇ ರೀತಿ ಹಾನಿಯಾಗುವುದಿಲ್ಲ.
ಆರೋಗ್ಯ ತಜ್ಞರ ಪ್ರಕಾರ, ನೀವು ಪ್ರತಿದಿನ ಟೀ ಕುಡಿಯುತ್ತಿದ್ದರೆ ಅದನ್ನು ಲೈಟಾಗಿ ಕುಡಿಯಲು ಪ್ರಯತ್ನಿಸಿ, ಅಂದರೆ ಸಕ್ಕರೆ ಇಲ್ಲದೆ ಅಥವಾ ಕಡಿಮೆ ಸಕ್ಕರೆಯೊಂದಿಗೆ. ಈ ಟೀ ಸೌಮ್ಯವಾದ ರುಚಿಯನ್ನು ಹೊಂದಿರುವುದಲ್ಲದೆ, ನಿಮ್ಮ ಆರೋಗ್ಯವನ್ನು ಸುಧಾರಿಸುವ ಅನೇಕ ಪ್ರಯೋಜನಗಳನ್ನು ಸಹ ಹೊಂದಿದೆ.
26
ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಟೀಗೆ ಹೆಚ್ಚು ಸಕ್ಕರೆ ಸೇರಿಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು, ದೀರ್ಘಕಾಲದವರೆಗೆ ಸೇವಿಸಿದರೆ ಮಧುಮೇಹ ಬರುವ ಅಪಾಯ ಹೆಚ್ಚಾಗುತ್ತದೆ. ಮತ್ತೊಂದೆಡೆ, ಸಕ್ಕರೆಯಿಲ್ಲದೆ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಯನ್ನು ತಡೆಯಲು ಮತ್ತು ಇನ್ಸುಲಿನ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಸಕ್ಕರೆ ರಹಿತ ಚಹಾ ಸೇವಿಸಿಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.
36
ತೂಕ ನಷ್ಟಕ್ಕೆ ಸಹಕಾರಿ
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಮತ್ತು ಸಕ್ಕರೆ ಸಮೇತ ಟೀ ಕುಡಿಯುವುದನ್ನು ನಿಲ್ಲಿಸಬೇಕು. ಸಕ್ಕರೆಯಿಲ್ಲದೆ ಟೀ ಕುಡಿಯುವುದು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಸ್ವೀಟ್ ಇಲ್ಲದ ಟೀಯಲ್ಲಿ ಕ್ಯಾಲೊರಿ ಬಹಳ ಕಡಿಮೆಯಿರುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಇದಲ್ಲದೆ ಟೀ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಹಲವಾರು ಅಧ್ಯಯನಗಳ ಪ್ರಕಾರ, ಅತಿಯಾದ ಸಕ್ಕರೆ ಸೇವನೆಯು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸಬಹುದು, ಇದು ಹೃದಯಕ್ಕೆ ತುಂಬಾ ಅಪಾಯಕಾರಿ. ಆದರೆ ಸಿಹಿ ಇಲ್ಲದೆ ಅಂದರೆ ಸಕ್ಕರೆಯಿಲ್ಲದೆ ಟೀ ಕುಡಿಯುವುದರಿಂದ ಈ ಅಪಾಯ ಕಡಿಮೆಯಾಗುತ್ತದೆ. ಚಹಾವು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತದೆ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುತ್ತದೆ.
56
ಹಲ್ಲುಗಳಿಗೆ ಒಳ್ಳೆಯದು
ಟೀಯಲ್ಲಿ ಸಕ್ಕರೆ ಇರುವುದರಿಂದ, ಹಲ್ಲುಗಳಲ್ಲಿ ಪ್ಲೇಕ್ ಮತ್ತು ಕುಳಿಗಳು ರೂಪುಗೊಳ್ಳುವ ಅಪಾಯವಿದೆ, ಆದರೆ ಸಕ್ಕರೆ ರಹಿತ ಸಿಹಿ ಟೀ ಕುಡಿಯುವುದರಿಂದ ಈ ಅಪಾಯವಿರುವುದಿಲ್ಲ.
66
ಚರ್ಮಕ್ಕೆ ಒಳ್ಳೆಯದು
ಚಹಾವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಚರ್ಮವನ್ನು ಒಳಗಿನಿಂದ ನಿರ್ವಿಷಗೊಳಿಸುತ್ತದೆ, ಇದರಿಂದಾಗಿ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ಸುಕ್ಕುಗಳು ತಡವಾಗಿ ಕಾಣಿಸಿಕೊಳ್ಳುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.