ಥೈರಾಯ್ಡ್: ಪುರುಷರ ಫರ್ಟಿಲಿಟಿಗೆ ತರುತ್ತಾ ಕುತ್ತು?

First Published | Jan 13, 2023, 3:52 PM IST

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರೋದನ್ನು ನಾವು ನೋಡಿರಬಹುದು. ಥೈರಾಯ್ಡ್ ರೋಗ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಲ್ಲಿಯೂ ಸಂಭವಿಸಬಹುದು ಮತ್ತು ಇದು ಅವರ ಫರ್ಟಿಲಿಟಿ ಮೇಲೆ ತುಂಬಾ ಕೆಟ್ಟದಾಗಿ ಪರಿಣಾಮ ಬೀರುತ್ತೆ. ಪುರುಷರಲ್ಲಿ ಥೈರಾಯ್ಡ್ ನ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಥೈರಾಯ್ಡ್ ಹೆಚ್ಚಾಗಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದೆ. ಆದರೆ ಈ ಸಮಸ್ಯೆ ಪುರುಷರನ್ನು ಸಹ ಕಾಡಬಹುದು. ಥೈರಾಯ್ಡ್ ಕಾರಣದಿಂದಾಗಿ, ಪುರುಷರ ಫಲವತ್ತತೆ(Fertility) ಕೊನೆಗೊಳ್ಳಲು ಪ್ರಾರಂಭಿಸುತ್ತೆ, ಆದರೆ ಅದಕ್ಕೂ ಮೊದಲು ಕೆಲವು ಎಚ್ಚರಿಕೆಯ ರೋಗಲಕ್ಷಣಗಳಿವೆ. ಪುರುಷರಲ್ಲಿ ಥೈರಾಯ್ಡ್ ನ  ರೋಗಲಕ್ಷಣಗಳೊಂದಿಗೆ ಪರಿಹಾರದ ಬಗ್ಗೆಯೂ ಇಲ್ಲಿ ತಿಳಿಯೋಣ.

ಗಂಟಲಿನ ಒಳಗೆ ಥೈರಾಯ್ಡ್ (Thyroid) ಗ್ರಂಥಿ ಇದೆ, ಇದು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುತ್ತೆ. ಈ ಹಾರ್ಮೋನುಗಳ ಉತ್ಪಾದನೆಯಲ್ಲಿನ ಇಳಿಕೆ ಅಥವಾ ಹೆಚ್ಚಳವನ್ನು ಥೈರಾಯ್ಡ್ ಸಮಸ್ಯೆ ಎಂದು ಕರೆಯಲಾಗುತ್ತೆ. ದೇಹದಲ್ಲಿ ಹೆಚ್ಚು ಥೈರಾಯ್ಡ್ ಹಾರ್ಮೋನುಗಳು ರೂಪುಗೊಳ್ಳಲು ಪ್ರಾರಂಭಿಸಿದಾಗ, ಅದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯಲಾಗುತ್ತೆ.ಹಾಗೆಯೇ ಅದರ ಕೊರತೆಯನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತೆ.

Latest Videos


ಪುರುಷರಲ್ಲಿ ಥೈರಾಯ್ಡ್ ನ ವಿಧಗಳು ಹೀಗಿವೆ

ಪುರುಷರು ಸಾಮಾನ್ಯವಾಗಿ ಹೈಪೋಥೈರಾಯ್ಡಿಸಮ್, ಆಟೋಇಮ್ಯೂನ್ ಹೈಪೋಥೈರಾಯ್ಡಿಸಮ್ (ಹಾಶಿಮೊಟೊಸ್ ಥೈರಾಯ್ಡಿಟಿಸ್), ಆಟೋಇಮ್ಯೂನ್ ಹೈಪರ್ಥೈರಾಯ್ಡಿಸಮ್ (ಗ್ರೇವ್ಸ್ ಕಾಯಿಲೆ ಅಥವಾ ಥೈರಾಯ್ಡ್ ಕ್ಯಾನ್ಸರ್(Thyroid cancer)) ನಿಂದ ಬಳಲುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ.

ಪುರುಷರಲ್ಲಿ ಥೈರಾಯ್ಡ್ ಲಕ್ಷಣಗಳು

ತೂಕ ಒಮ್ಮಿಂದೊಮ್ಮೆಲೆ ಹೆಚ್ಚಳ ಆಗೋದು ಅಥವಾ ಕಮ್ಮಿಯಾಗೋದು 
ಕೂದಲು ಉದುರುವಿಕೆ(Hair fall)
ವಿಪರೀತ ದಣಿವು
ಖಿನ್ನತೆ
ನಿದ್ರೆಯ ಕೊರತೆ, ಇತ್ಯಾದಿ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 
ಇಂತಹ ಲಕ್ಷಣಗಳು ಜೊತೆಯಾಗಿ ಕಾಣಿಸಿಕೊಂಡರೆ ನೀವು ಅದನ್ನು ಇಗ್ನೋರ್ ಮಾಡುವ ಬದಲು ಪರೀಕ್ಷೆ ನಡೆಸುವುದು ಉತ್ತಮ. 

ಪುರುಷರ ಫರ್ಟಿಲಿಟಿ ಮೇಲೆ ಥೈರಾಯ್ಡ್ ನ ಪರಿಣಾಮ

ತಜ್ಞರ ಪ್ರಕಾರ, ಹೈಪೋಥೈರಾಯ್ಡಿಸಮ್ ನಿಂದಾಗಿ ಟೆಸ್ಟೋಸ್ಟೆರಾನ್, ಎಲ್ಎಚ್ ಹಾರ್ಮೋನ್, ಎಫ್ಎಸ್ಎಚ್ ಹಾರ್ಮೋನ್ ಕಡಿಮೆಯಾಗಲು ಪ್ರಾರಂಭಿಸುತ್ತೆ. ಇದು ಪುರುಷರ ಫರ್ಟಿಲಿಟಿಗೆ ಬಹಳ ಮುಖ್ಯ. ಹಾಗಾಗಿ, ಹೈಪರ್ ಥೈರಾಯ್ಡಿಸಮ್ ನಿಂದಾಗಿ ವೀರ್ಯದ(Sperm) ಉತ್ಪಾದನೆಯೂ ಕಡಿಮೆಯಾಗುತ್ತೆ.

ಥೈರಾಯ್ಡ್ ನಿಂದಾಗಿ ಫಲವತ್ತತೆ ಕಡಿಮೆಯಾಗಲು ಪ್ರಾರಂಭಿಸಿದಾಗ, ಪುರುಷರು ಈ ಕೆಳಗಿನ ರೋಗಲಕ್ಷಣಗಳು ಕಾಣಬಹುದು :.ಲೈಂಗಿಕ(Sex) ಬಯಕೆ ಕಡಿಮೆಯಾಗೋದು
 

ಶೀಘ್ರ ಸ್ಕಲನ

ವೀರ್ಯಾಣುಗಳ ಗುಣಮಟ್ಟದಲ್ಲಿ ಏರುಪೇರು
ವೀರ್ಯಾಣುಗಳ ಕೊರತೆ(Low sperm count)
ಟೆಸ್ಟಿಕ್ಲ್ಸ್ ಫನ್ಕ್ಷನಿಂಗ್ ಕಡಿಮೆಯಾಗೋದು, ಇತ್ಯಾದಿ.

ಪುರುಷರಲ್ಲಿ ಥೈರಾಯ್ಡ್ ಗೆ ಪರಿಹಾರವೇನು?

ತಜ್ಞರ ಪ್ರಕಾರ, ಹೈಪೋಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್  ಪುರುಷರಲ್ಲೂ ಕಂಡು ಬರುತ್ತೆ. ಇದಕ್ಕಾಗಿ ಆಂಟಿ ಥೈರಾಯ್ಡ್ ಡ್ರಗ್ಸ್, ರೇಡಿಯೋ ಆಕ್ಟಿವ್ ಅಯೋಡಿನ್, ಶಸ್ತ್ರಚಿಕಿತ್ಸೆಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಈ ಕ್ರಮಗಳನ್ನು ಅನುಸರಿಸೋದರಿಂದ, ಪುರುಷರಲ್ಲಿ ಟೆಸ್ಟೋಸ್ಟೆರಾನ್ (Testosterone)ಮಟ್ಟವು ಸಾಮಾನ್ಯವಾಗುತ್ತೆ ಮತ್ತು ಫರ್ಟಿಲಿಟಿ ಸಹ ಸಂಪೂರ್ಣವಾಗಿ ಸುಧಾರಿಸುತ್ತೆ.

click me!