Skeletal fluorosis : ಚಹಾ ಚಟ ಹೆಚ್ಚಾದ್ರೆ ಈ ಗಂಭೀರ ಕಾಯಿಲೆಗೆ ಬಲಿಯಾಗಬೇಕು ಹುಷಾರ್ !

First Published | Jan 11, 2023, 4:28 PM IST

ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅನೇಕ ಜನರ ನೆಚ್ಚಿನ ಪಾನೀಯ ಚಹಾ. ಚಳಿಗಾಲದಲ್ಲಿ, ಜನರು ಹೆಚ್ಚಾಗಿ ಸಾಕಷ್ಟು ಚಹಾ ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಹೆಚ್ಚಿನ ಪ್ರಮಾಣದ ಚಹಾ ಕುಡಿಯುವುದರಿಂದ ನೀವು ಅಸ್ಥಿಪಂಜರದ ಫ್ಲೋರೋಸಿಸ್ ಎಂಬ ರೋಗಕ್ಕೆ ಬಲಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ?

ಚಹಾ ಕುಡಿಯಲು ಇಷ್ಟಪಡದವರು (tea lovers) ಯಾರೂ ಇಲ್ಲ. ಚಹಾ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬಹಳ ಜನಪ್ರಿಯ ಪಾನೀಯ. ಚಹಾದ ಈ ಜನಪ್ರಿಯತೆಯಿಂದಾಗಿ, ಅನೇಕ ರೀತಿಯ ಚಹಾವು ಪ್ರಪಂಚದಾದ್ಯಂತ ಸಿಗುತ್ತೆ. ನಮ್ಮ ಮನಸ್ಥಿತಿಯನ್ನು ಉಲ್ಲಾಸಗೊಳಿಸುವುದರ ಜೊತೆಗೆ, ಚಹಾ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಇನ್ನು, ಚಳಿಗಾಲದಲ್ಲಿ, ಜನರು ಹೆಚ್ಚಿನ ಪ್ರಮಾಣದಲ್ಲಿ ಚಹಾ ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಚಹಾ ಚಟವು ಕೆಲವೊಮ್ಮೆ ನಿಮಗೆ ಹಾನಿಕಾರಕವೆಂದು ನಿಮಗೆ ತಿಳಿದಿದೆಯೇ? 

ನಿಜಾ ಹೇಳೋದಾದ್ರೆ ಹೆಚ್ಚು ಚಹಾ ಕುಡಿಯುವುದರಿಂದ ನೀವು ಅಪಾಯಕಾರಿ ಮೂಳೆ ರೋಗಕ್ಕೆ ಬಲಿಯಾಗಬಹುದು. ಸ್ಕೆಲಿಟಲ್ ಫ್ಲೋರೋಸಿಸ್  (Skeletal fluorosis) ಎಂದು ಕರೆಯಲ್ಪಡುವ ಈ ರೋಗ ನಿಮ್ಮ ಮೂಳೆಗಳನ್ನು ಒಳಗೆ ಟೊಳ್ಳಾಗಿಸಬಹುದು. ನಿಮಗೂಚಹಾ ಕುಡಿಯಲು ಇಷ್ಟವಿದ್ದರೆ, ಅದರ ಅತಿಯಾದ ಸೇವನೆಯಿಂದ ಉಂಟಾಗುವ ಈ ರೋಗದ ಬಗ್ಗೆ ತಿಳಿಯೋದು ತುಂಬಾನೆ ಇಂಪಾರ್ಟಂಟ್.

Tap to resize

ಸ್ಕೆಲಿಟಲ್ ಫ್ಲೋರೋಸಿಸ್ ಎಂದರೇನು?

ಸ್ಕೆಲಿಟಲ್ ಫ್ಲೋರೋಸಿಸ್ ಮೂಳೆಗಳ ರೋಗ. ಇದು ನಮ್ಮ ಮೂಳೆಗಳನ್ನು ಒಳಗೆ ಟೊಳ್ಳಾಗಿಸುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಸಂಧಿವಾತದಂತಹ ನೋವನ್ನು ಅನುಭವಿಸುತ್ತಾನೆ. ಈ ರೋಗವು ವಿಶೇಷವಾಗಿ ಮೂಳೆಗಳಲ್ಲಿ ನೋವನ್ನು(pain in bone) ಉಂಟುಮಾಡುತ್ತದೆ. ಈ ರೋಗ ಉಂಟಾದಾಗ ಬೆನ್ನು ನೋವು, ಕೈಗಳು ಮತ್ತು ಕಾಲುಗಳಲ್ಲಿ ನೋವು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತೆ.

ಚಹಾವು ಸ್ಕೆಲಿಟಲ್ ಫ್ಲೋರೋಸಿಸ್ ಗೆ ಕಾರಣವಾಗಬಹುದು

ನೀವು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ (drinking tea in empty stomach) ಅಥವಾ ಹಗಲಿನಲ್ಲಿ ನಿರಂತರವಾಗಿ ಚಹಾ ಸೇವಿಸುತ್ತಿದ್ದರೆ, ಅದು ಸ್ಕೆಲಿಟಲ್ ಫ್ಲೋರೋಸಿಸ್  ಅಪಾಯವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಚಹಾದಲ್ಲಿರುವ ಫ್ಲೋರೈಡ್ ಖನಿಜವು ಮೂಳೆಗಳಿಗೆ ತುಂಬಾ ಹಾನಿಕಾರಕವಾಗಿದೆ. 
 

ದೇಹದ ಒಳಗೆ ಫ್ಲೋರೈಡ್ ಪ್ರಮಾಣ ಹೆಚ್ಚಾದಾಗ, ಮೂಳೆಗಳಲ್ಲಿ ಸ್ಕೆಲಿಟಲ್ ಫ್ಲೋರೋಸಿಸ್ ಸಾಧ್ಯತೆಯು ಹೆಚ್ಚಾಗುತ್ತದೆ. ಅಲ್ಲದೆ, ಚಹಾವು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದಾಗಿ ಈ ರೋಗದ ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ.

ಸ್ಕೆಲಿಟಲ್ ಫ್ಲೋರೋಸಿಸ್ ಲಕ್ಷಣಗಳು

ಹೊಟ್ಟೆ ಭಾರವಾಗುತ್ತದೆ (heavy stomach)
ಮೊಣಕಾಲುಗಳ ಸುತ್ತಲೂ ಊತ
ಬಾಗಲು ಅಥವಾ ಕುಳಿತುಕೊಳ್ಳಲು ತೊಂದರೆ
ಹಲ್ಲುಗಳ ಅತಿಯಾದ ಹಳದಿಯಾಗುವಿಕೆ
ಭುಜಗಳು, ತೋಳುಗಳು ಮತ್ತು ಕಾಲುಗಳ ಕೀಲುಗಳಲ್ಲಿ ನೋವು
ಚಿಕ್ಕ ವಯಸ್ಸಿನಲ್ಲಿ ವೃದ್ಧಾಪ್ಯದ ಚಿಹ್ನೆಗಳು
ಕೈಗಳು ಮತ್ತು ಪಾದಗಳು ಮುಂದಕ್ಕೆ ಅಥವಾ ಹಿಂದಕ್ಕೆ ಭಾಗುವುದು
 

ದಿನಕ್ಕೆ ಎಷ್ಟು ಚಹಾ ಕುಡಿಯೋದು ಸುರಕ್ಷಿತವಾಗಿದೆ? (How many tea per day is good)

ಚಹಾದ ಅತಿಯಾದ ಸೇವನೆಯು ಸ್ಕೆಲಿಟಲ್ ಫ್ಲೋರೋಸಿಸ್ ಗೆ ಮಾತ್ರವಲ್ಲದೆ, ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಅಥವಾ ಅತಿಯಾಗಿ ಚಹಾ ಕುಡಿಯುವುದರಿಂದ ಹುಣ್ಣುಗಳು, ಹೈಪರ್ ಅಸಿಡಿಟಿ, ಆತಂಕ, ಅಸ್ವಸ್ಥತೆಯಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. 

ಅಂತಹ ಪರಿಸ್ಥಿತಿಯಲ್ಲಿ, ನೀವು ಚಹಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ದಿನಕ್ಕೆ ಮೂರು ಕಪ್ ಚಹಾ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿಯಲ್ಲ. ಆದರೆ ನೀವು ಪ್ರತಿದಿನ ಮೂರು ಕಪ್ ಗಿಂತ ಹೆಚ್ಚು ಚಹಾ ಕುಡಿಯುತ್ತಿದ್ದರೆ, ಅದು ನಿಮಗೆ ಮಾರಣಾಂತಿಕವಾಗುವ ಎಲ್ಲಾ ಚಾನ್ಸಸ್ ಇದೆ. ಹಾಗಾಗಿ ಎಚ್ಚರದಿಂದಿರಿ.

Latest Videos

click me!