ರಾತ್ರಿ ಮಲಗುವ ಮೊದಲು ಯಾವುದೇ ಕಾರಣಕ್ಕೂ ಮಕ್ಕಳಿಗೆ ಈ ಆಹಾರ ನೀಡಬೇಡಿ

First Published | Aug 11, 2022, 4:58 PM IST

ಮಕ್ಕಳು ಬೇಗ ಮಲಗೋದಿಲ್ಲ ಅನ್ನೋ ದೂರು ಹೆಚ್ಚಿನ ಎಲ್ಲಾ ಮನೆಯಲ್ಲೂ ಇರುತ್ತೆ. ಇದಕ್ಕೆ ಕಾರಣ ಮಕ್ಕಳಲ್ಲ, ಇದರ ಜೊತೆ ಮನೆಯಲ್ಲಿ  ಟೈಮ್ ಟೇಬಲ್ ಕೂಡ ಕೆಟ್ಟದಾಗಿರುವುದು ಮಕ್ಕಳು ರಾತ್ರಿ ಲೇಟ್ ಆಗಿ ಮಲಗೋದಕ್ಕೆ ಕಾರಣವಾಗಿದೆ. ಕೆಲವು ಮಕ್ಕಳು ರಾತ್ರಿ ತಡವಾಗಿ ಮಲಗೋದು ಮತ್ತು ಬೆಳಿಗ್ಗೆ ತಡವಾಗಿ ಏಳೋದು ಸಾಮಾನ್ಯ ಅಭ್ಯಾಸವಾಗಿದೆ .ಹಾಗಾಗಿ ಕೆಲವು ಮಕ್ಕಳು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡೋದಿಲ್ಲ ಮತ್ತು ಅವರು ಬೆಳಿಗ್ಗೆ ಕಿರಿಕಿರಿ ಮತ್ತು ಸೋಮಾರಿತನದಿಂದ ಎಚ್ಚರಗೊಳ್ಳುತ್ತಾರೆ. ಇದು ಮಕ್ಕಳ ಇಡೀ ದಿನವನ್ನು ಹಾಳುಮಾಡುತ್ತೆ ಮತ್ತು ಅವರು ಸ್ಕೂಲ್ ನಲ್ಲಿ ಅಧ್ಯಯನ ಮಾಡಲು ಸಹ ಬಯಸೋದಿಲ್ಲ. ಹಾಗಿದ್ರೆ ಇಂತಹ ಮಕ್ಕಳ ಸಮಸ್ಯೆಯನ್ನು ನಿವಾರಿಸೋದು ಹೇಗೆ? 

ತಡವಾಗಿ ಮಲಗುವ ಸಮಸ್ಯೆಗಳಿಂದ ಮಗುವನ್ನು ರಕ್ಷಿಸಲು, ನೀವು ಅವರ ಆಹಾರದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಅಂದರೆ ಮಕ್ಕಳಿಗೆ ರಾತ್ರಿ ಹೊತ್ತು ಕೆಲವು ಆಹಾರಗಳನ್ನು ನೀಡಬಾರದು. ಮಕ್ಕಳ ರಾತ್ರಿಯ ನಿದ್ರೆಯನ್ನು(Sleep) ಕೆಡಿಸುವ ಕೆಲವು ಆಹಾರಗಳನ್ನು ನೀಡೋದನ್ನು ತಪ್ಪಿಸಿ. ಅವು ಯಾವುವೆಂದು ನೋಡೋಣ.

ರಾತ್ರಿ ಮಲಗುವ ಮೊದಲು ಮಕ್ಕಳಿಗೆ ನೀಡಬಾರದ ಕೆಲವು ಆಹಾರಗಳು ಹೀಗಿವೆ 

ಕೆಫೀನ್(Caffeine)
ಕೆಫೀನ್ ನಿದ್ರೆಯನ್ನು ಕೊಲ್ಲುವ ಕೆಲಸ ಮಾಡುತ್ತೆ  ಮತ್ತು ನಿಮ್ಮ ದೇಹದಲ್ಲಿ ಹಲವಾರು ಗಂಟೆಗಳ ಕಾಲ ಉಳಿಯುತ್ತೆ. ಸಂಜೆ ಒಂದು ಕಪ್ ಕಾಫಿ ಕುಡಿಯೋದರಿಂದ ಮಗುವಿಗೆ ರಾತ್ರಿಯಲ್ಲಿ ಮಲಗಲು ಕಷ್ಟವಾಗುತ್ತೆ. ಆದುದರಿಂದ ಕೆಫೆನ್ ಯುಕ್ತ ಆಹಾರವನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

Tap to resize

ಕಾಫಿ, ಚಾಕೊಲೇಟ್(Chocolate), ಗ್ರಾನೋಲಾ ಬಾರ್, ಎನರ್ಜಿ ಡ್ರಿಂಕ್ಸ್, ಸೋಡಾ ಮತ್ತು ಚಹಾದಲ್ಲಿ ಕೆಫೀನ್ ಇರುತ್ತೆ. ರಾತ್ರಿ ಮಲಗುವ ಸುಮಾರು 8 ಗಂಟೆಗಳ ಮೊದಲು ಈ ಆಹಾರವನ್ನು ನೀಡುವುದರಿಂದ ಉತ್ತಮ ನಿದ್ರೆಗೆ ಕಾರಣವಾಗುತ್ತೆ. ಆದರೆ ನಿದ್ರೆ ಮಾಡುವ ಸ್ವಲ್ಪ ಮುನ್ನ ಇದನ್ನು ನೀಡಿದ್ರೆ ನಿದ್ರೆ ಬರೋದಿಲ್ಲ.
 

ಚೀಸ್(Cheese)
ಮಕ್ಕಳು ಸ್ಯಾಂಡ್ ವಿಚ್ ಅಥವಾ ಪಾಸ್ತಾ ಇತ್ಯಾದಿಗಳ ಜೊತೆಗೆ ಚೀಸ್ ತಿನ್ನಲು ಇಷ್ಟಪಡುತ್ತಾರೆ. ಇಂತಹ ವಸ್ತುಗಳನ್ನು ರಾತ್ರಿ ಮಲಗುವ ಮೊದಲು ತಿನ್ನಬಾರದು ಏಕೆಂದರೆ ಅದು ಟೈರಮೈನ್ ಅನ್ನು ಹೊಂದಿರುತ್ತೆ. ಈ ರಾಸಾಯನಿಕವು ಮೆದುಳಿನ ಉತ್ತೇಜಕಗಳನ್ನು ಬಿಡುಗಡೆ ಮಾಡುತ್ತೆ, ಇದು ಮೆದುಳನ್ನು ಜಾಗರೂಕವಾಗಿ ಮತ್ತು ಎಚ್ಚರವಾಗಿರಿಸುತ್ತೆ. ಪಾಪರನಿ, ನಟ್ಸ್, ಆವಕಾಡೊ, ಸೋಯಾ ಸಾಸ್, ರಾಸ್ಪ್ಬೆರಿ ಮತ್ತು ರೆಡ್ ವೈನಲ್ಲಿ ಟೈರಮೈನ್ ಹೊಂದಿರುತ್ತೆ.

ಕ್ರೂಸಿಫೆರಸ್ ತರಕಾರಿ
ಕೆಲವು ತರಕಾರಿಗಳನ್ನು ರಾತ್ರಿ ಊಟಕ್ಕಿಂತ ಮಧ್ಯಾಹ್ನದ ಊಟದಲ್ಲಿ ತಿನ್ನೋದು ಉತ್ತಮ. ಎಲೆಕೋಸು, ಬ್ರೊಕೋಲಿ(Broccoli), ಪಾಲಕ್, ಮೂಲಂಗಿಯಂತಹ ಕ್ರೂಸಿಫೆರಸ್ ತರಕಾರಿಗಳು ನಾರಿನಂಶದಿಂದ ಸಮೃದ್ಧವಾಗಿವೆ ಆದರೆ ಅವುಗಳನ್ನು ರಾತ್ರಿಯಲ್ಲಿ ತಿನ್ನಬಾರದು. 


ಈ ಕ್ರೂಸ್ಸಿಫೆರಸ್ ತರಕಾರಿಗಳಲ್ಲಿ ಕ್ಯಾಲೋರಿ(Calorie) ಹೆಚ್ಚಾಗಿರುತ್ತೆ. ಹೆಚ್ಚಿನ ಕ್ಯಾಲೋರಿ ಆಹಾರವನ್ನು ಜೀರ್ಣಿಸೋದರಿಂದ ದೇಹದ ತಾಪಮಾನ ಹೆಚ್ಚಾಗುತ್ತೆ, ಆದರೆ ಉತ್ತಮ ನಿದ್ರೆಗೆ ತಂಪಾದ ತಾಪಮಾನದ ಅಗತ್ಯವಿದೆ. ಇದು ಮಗುವಿನ ನಿದ್ರೆಗೆ ಭಂಗ ತರುತ್ತೆ. ಆದುದರಿಂದ ದೇಹದ ಬಿಸಿ ಹೆಚ್ಚಿಸುವ ಆಹಾರ ಸೇವಿಸಬೇಡಿ.

ಮಸಾಲೆಯುಕ್ತ ಆಹಾರ
ಅತಿಯಾದ ಮಸಾಲೆಯುಕ್ತ ಆಹಾರ ಮಕ್ಕಳಲ್ಲಿ ಜೀರ್ಣಕಾರಿ(Digestion) ಸಮಸ್ಯೆ ಉಂಟುಮಾಡಬಹುದು. ಅಜೀರ್ಣ ಅಥವಾ ಅತಿಸಾರ, ಹೊಟ್ಟೆ ನೋವು ಮಗುವಿನ ನಿದ್ರೆಯನ್ನು ಹಾಳುಮಾಡಬಹುದು. ಆದುದರಿಂದ ಮಕ್ಕಳಿಗೆ ಮಸಾಲೆಯುಕ್ತ ಆಹಾರ ನೀಡೋದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿದ್ರೆ ಉತ್ತಮ.

ಸ್ವೀಟ್ಸ್ (Sweets)
ಹೆಚ್ಚು ಸಕ್ಕರೆ ತಿನ್ನೋದು ಆರೋಗ್ಯಕ್ಕೆ ಹಾನಿಕಾರಕ. ಸ್ವೀಟ್ಸ್, ಸೋಡಾ ಮತ್ತು ಕ್ಯಾಂಡಿಗಳಂತಹ ಸಕ್ಕರೆ ವಸ್ತುಗಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತೆ.ಇದು ದೇಹದಲ್ಲಿ ಕರಗಲು ಸುಮಾರು ಆರೇಳು ಗಂಟೆ ಬೇಕಾಗುತ್ತೆ. ಅವುಗಳನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹವು ಅವುಗಳ ಮೇಲೆ ಹೆಚ್ಚು ಕೆಲಸ ಮಾಡಬೇಕಾಗುತ್ತೆ. ಇದು ಎಡ್ರಿನಲ್ ಕಾರ್ಟಿಸೋಲ್  ಬಿಡುಗಡೆ ಮಾಡುತ್ತೆ, ಇದು ನಿದ್ರೆಗೆ ಭಂಗ ತರುತ್ತೆ ಮತ್ತು ರಾತ್ರಿಯಲ್ಲಿ ಮಗುವನ್ನು ಎಚ್ಚರಗೊಳಿಸುತ್ತೆ.


ಹೆವಿ ಮತ್ತು ಉಪ್ಪಿನ ಆಹಾರ
ಬೆಳೆಯುತ್ತಿರುವ ಮಕ್ಕಳು ಪೂರ್ಣ ಕೊಬ್ಬು ತಿನ್ನೋದು ಒಳ್ಳೆಯದು ಆದರೆ ರಾತ್ರಿಯಲ್ಲಿ ಅಲ್ಲ. ತಡರಾತ್ರಿಯಲ್ಲಿ ಕೊಬ್ಬಿನ ವಸ್ತುಗಳನ್ನು ತಿನ್ನೋದು ಸ್ಥೂಲಕಾಯದ(Obesity) ಅಪಾಯವನ್ನು ಹೆಚ್ಚಿಸುತ್ತೆ. ನೀವು ಊಟ ಮಾಡಿದ ತಕ್ಷಣ ಮಲಗೋದರಿಂದ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಉಂಟಾಗಬಹುದು, ಇದು ನಿದ್ರೆಯನ್ನು ಸಹ ಹಾಳುಮಾಡುತ್ತೆ .
 

Latest Videos

click me!