ತಲೆ ನೋವು , ಕಣ್ಣು ನೋವಿದ್ದರೆ, ಇಲ್ಲಿದೆ ನೋಡಿ ಈಸಿ ಮನೆ ಮದ್ದು!

Published : Aug 11, 2022, 10:29 AM IST

ಇತ್ತೀಚಿನ ದಿನಗಳಲ್ಲಿ, ಒತ್ತಡ ಮತ್ತು ಉದ್ವೇಗದಿಂದಾಗಿ ತಲೆನೋವು ನೋವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವು ಜನರಿಗೆ ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ತಲೆನೋವು ಉಂಟಾಗುತ್ತೆ. ಕೆಲವರಿಗೆ ತಲೆನೋವಿನೊಂದಿಗೆ ಕಣ್ಣುಗಳಲ್ಲಿ ನೋವು ಸಹ ಇರುತ್ತೆ. ಸಾಮಾನ್ಯವಾಗಿ, ತಲೆ ಮತ್ತು ಕಣ್ಣುಗಳಲ್ಲಿ ನೋವಿನ ಕಾರಣ ದಿನವಿಡೀ ಒತ್ತಡ, ಮೈಗ್ರೇನ್, ಸೈನಸ್ ಇರಬಹುದು. ಅದಕ್ಕಾಗಿ, ಔಷಧಿ ಮತ್ತು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಈ ನೋವನ್ನು ನಿವಾರಿಸಬಹುದು. ಹಾಗಿದ್ರೆ ಬನ್ನಿ ತಲೆ ಮತ್ತು ಕಣ್ಣಿನ ನೋವನ್ನು ನಿವಾರಿಸೋದು ಹೇಗೆಂದು ತಿಳಿಯೋಣ. 

PREV
15
ತಲೆ ನೋವು , ಕಣ್ಣು ನೋವಿದ್ದರೆ, ಇಲ್ಲಿದೆ ನೋಡಿ ಈಸಿ ಮನೆ ಮದ್ದು!

1- ಎಣ್ಣೆ ಮಸಾಜ್(Oil massage) - ತಲೆಯಲ್ಲಿ ನೋವು ಅಥವಾ ಕಣ್ಣುಗಳಲ್ಲಿ ನೋವು ಇದ್ದರೆ, ಮಸಾಜ್ ನಿಂದ ಹೆಚ್ಚಿನ ಪರಿಹಾರ ಸಿಗುತ್ತೆ., ತಲೆನೋವಿಗೆ ಎಣ್ಣೆ ಮಸಾಜ್ ನ ವಿಧಾನ ಹಲವಾರು ವರ್ಷಗಳಿಂದ ಅಳವಡಿಸಿಕೊಳ್ಳಲಾಗಿದೆ. ನೀವು ತಲೆಗೆ ಮಸಾಜ್ ಮಾಡುವುದರ ಜೊತೆಗೆ ತಲೆಯನ್ನು ಒತ್ತಿ. ಇದು ಸಾಕಷ್ಟು ಆರಾಮ ನೀಡುತ್ತೆ. 

25

2- ಸಾಕಷ್ಟು ನಿದ್ರೆ(Sleep) ಮಾಡಿ - ಅನೇಕ ಬಾರಿ ನಿದ್ರೆ ಪೂರ್ಣಗೊಳ್ಳದಿದ್ದರೂ, ತಲೆಯಲ್ಲಿ ನೋವು ಉಂಟಾಗುತ್ತೆ . ಹೆಚ್ಚು ಮೊಬೈಲ್ ನೋಡೋದರಿಂದ ತಲೆ ಮತ್ತು ಕಣ್ಣು ನೋವಾಗುತ್ತೆ.  ಇದಕ್ಕಾಗಿ, ನೀವು ಸಾಕಷ್ಟು ಮತ್ತು ಗಾಢ ನಿದ್ರೆ ಪಡೆಯೋದು ಮುಖ್ಯ. ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ. ಇದು ತಲೆನೋವನ್ನು ನಿವಾರಿಸುತ್ತೆ. 

 

35

3- ಧ್ಯಾನ (Meditation)- ಮನಸ್ಸನ್ನು ಒತ್ತಡ ಮುಕ್ತವಾಗಿಸಲು ಮತ್ತು ತಲೆನೋವನ್ನು ನಿವಾರಿಸಲು ನೀವು ಧ್ಯಾನ ಮಾಡಬೇಕು. ಪ್ರತಿದಿನ ಕೆಲವು ನಿಮಿಷಗಳ ಧ್ಯಾನ ನಿಮ್ಮ ತಲೆ ಮತ್ತು ಕಣ್ಣಿನ ನೋವು ಕಣ್ಮರೆಯಾಗುವಂತೆ ಮಾಡುತ್ತೆ. ಆದುದರಿಂದ ಪ್ರತಿದಿನ ಮಿಸ್ ಮಾಡದೆ ಧ್ಯಾನ ಮಾಡಿ.

45

4- ಚೆನ್ನಾಗಿ ಆಹಾರ (Food) ಸೇವಿಸಿ - ನೀವು ತಲೆನೋವಿನಿಂದ ತೊಂದರೆಗೀಡಾಗಿದ್ದರೆ, ನಿಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಗಮನ ಹರಿಸಿ. ಆಂಟಿಆಕ್ಸಿಡೆಂಟ್ ಭರಿತ ವಸ್ತುಗಳನ್ನು ಆಹಾರದಲ್ಲಿ ಸೇರಿಸಿ. ಬೆಳ್ಳುಳ್ಳಿ ಮತ್ತು ನಿಂಬೆಯಂತಹ ವಸ್ತುಗಳನ್ನು ಆಹಾರದಲ್ಲಿ ಸೇರಿಸಿ. ಇದರಿಂದ ತಲೆನೋವಿನಿಂದ ಪರಿಹಾರ ಸಿಗುತ್ತೆ.
 

55

5- ಬಲವಾದ ವಾಸನೆಯನ್ನು ತಪ್ಪಿಸಿ - ಕೆಲವು ಜನರಿಗೆ ಬಲವಾದ ವಾಸನೆಯಿಂದಾಗಿ ತಲೆನೋವು ಉಂಟಾಗಲು ಪ್ರಾರಂಭಿಸುತ್ತೆ. ಹಾಗಾಗಿ, ಪರ್ಫ್ಯೂಮ್ಸ್(Perfumes) ಮತ್ತು ಕ್ಲೀನಿಂಗ್ ಪ್ರಾಡಕ್ಟ್ಸ್ ತಲೆನೋವಿಗೆ ಕಾರಣವಾಗಬಹುದು. ಅಂತಹ ವಾಸನೆ ನಿಮ್ಮ ತಲೆಯಲ್ಲಿ ನೋವು ಉಂಟುಮಾಡಬಹುದು. ನೀವು ಅವುಗಳನ್ನು ತಪ್ಪಿಸಬೇಕು. 

click me!

Recommended Stories