ರಾತ್ರಿ ಕಾಲು ಊದಿಕೊಂಡು, ಬೆಳಗ್ಗೆ ಸರಿ ಹೋಗಿದೆಯಂದ್ರೆ ಅಲರ್ಟ್ ಆಗಿ, ಕಿಡ್ನಿ ಚೆಕ್ ಮಾಡಿಸಿಕೊಳ್ಳಿ!

First Published | Nov 7, 2023, 7:00 AM IST

ನಾವು ಸಾಮಾನ್ಯ ಎಂದು ತಿಳಿದುಕೊಂಡಿರುವ ಕೆಲವು ರೋಗಲಕ್ಷಣಗಳು ಮೂತ್ರ ಪಿಂಡದ ಕಾಯಿಲೆಯ ಸಂಕೇತವಾಗಿರಬಹುದು. ನಿಮಗೆ ರಾತ್ರಿಯ ವೇಳೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ, ನಿಮಗೆ ಮೂತ್ರ ಪಿಂಡದ ಕಾಯಿಲೆ ಇದೆ ಅನ್ನೋದನ್ನು ತಿಳಿಯಿರಿ. 
 

ಮೂತ್ರಪಿಂಡ (kidney) ನಮ್ಮ ದೇಹದ ಪ್ರಮುಖ ಅಂಗ. ಇದು ದೇಹದಿಂದ ವಿಷ ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಇತರ ಅನೇಕ ಪ್ರಮುಖ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಬದಲಾಗುತ್ತಿರುವ ಜೀವನಶೈಲಿ (Lifestyle) ಮತ್ತು ಆಹಾರ ಪದ್ಧತಿಯಿಂದಾಗಿ (Food Habbit), ಜನರು ಮೂತ್ರಪಿಂಡಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಬಲಿಯಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ರೋಗಲಕ್ಷಣಗಳಿಂದ ನೀವು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳನ್ನು (kidney problem) ಗುರುತಿಸಬಹುದು.

ನಮ್ಮ ದೇಹದಲ್ಲಿರುವ ಪ್ರತಿಯೊಂದೂ ಅಂಗವೂ ಬಹಳ ಮುಖ್ಯ. ಹೃದಯದಿಂದ (Health) ಮೂತ್ರಪಿಂಡದವರೆಗೆ, ಎಲ್ಲಾ ಅಂಗಗಳು ನಮಗೆ ಮುಖ್ಯ. ಮೂತ್ರಪಿಂಡವು ದೇಹದಿಂದ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಮಟ್ಟವನ್ನು (Insulin Level) ನಿಯಂತ್ರಿಸುತ್ತದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯು (lifestyle and food) ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆಗಳು ಸಾಮಾನ್ಯವಾಗಿದೆ.

Latest Videos


ಮೂತ್ರ ಪಿಂಡದ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಮತ್ತು ಅವುಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವುದು ಮುಖ್ಯ, ಇದರಿಂದ ಗಂಭೀರ ಪರಿಸ್ಥಿತಿಗಳನ್ನು ತಡೆಗಟ್ಟಬಹುದು. ಇಂದು ಈ ಲೇಖನದಲ್ಲಿ, ಅಂತಹ ಕೆಲವು ರೋಗಲಕ್ಷಣಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಇದು ಹೆಚ್ಚಾಗಿ ರಾತ್ರಿಯಲ್ಲಿ ಕಂಡುಬರುತ್ತದೆ . ಇವು ಮೂತ್ರಪಿಂಡ ಸಂಬಂಧಿತ ಸಮಸ್ಯೆಯ ಸಂಕೇತವಾಗಿರಬಹುದು. ಈ ರೋಗಲಕ್ಷಣ ಏನು ಎಂದು ತಿಳಿಯೋಣ-

ನಿದ್ರಾಹೀನತೆ (sleeplessness)
ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಅದು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿರಬಹುದು. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ನಿದ್ರೆಯ ಅಸ್ವಸ್ಥತೆಗಳು ಸಾಕಷ್ಟು ಸಾಮಾನ್ಯ. ಇದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ನೀವು ಆಗಾಗ್ಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ.

ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ (rest less leg syndrome)
ಇದು ಕಾಲನ್ನು ಚಲಿಸಲು ಬಲವಾದ ಬಯಕೆ ಇರುವ ಸಮಸ್ಯೆ. ಈ ಸಮಸ್ಯೆಯಲ್ಲಿ, ವ್ಯಕ್ತಿ ಆಗಾಗ್ಗೆ ಕಾಲುಗಳಲ್ಲಿ ಅಸ್ವಸ್ಥತೆಯನ್ನು ಅನುಭವಿಸುತ್ತಾನೆ ಮತ್ತು ಸೂಜಿ ಚುಚ್ಚಿದ ಅನುಭವ ಉಂಟಾಗುತ್ತೆ ಮತ್ತು ಇದು ಸಾಮಾನ್ಯವಾಗಿ ಸಂಜೆ ಅಥವಾ ರಾತ್ರಿಯಲ್ಲಿ ಸಂಭವಿಸುತ್ತದೆ. ಇದು ಮೂತ್ರಪಿಂಡದ ಕಾಯಿಲೆಯ ಸಂಕೇತವೂ ಆಗಿರಬಹುದು.

ಉಸಿರಾಡಲು ಕಷ್ಟವಾಗೋದು (breathing problem)
ರಾತ್ರಿಯಲ್ಲಿ ಉಸಿರಾಟದ ತೊಂದರೆ ಅನುಭವಿಸಿದರೆ, ಇದು ಮೂತ್ರಪಿಂಡದ ಕಾಯಿಲೆಗಳಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಮೂತ್ರಪಿಂಡಗಳಿಂದ ದ್ರವದ ಕಳಪೆ ಪರಿಚಲನೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ವಿಶೇಷವಾಗಿ ಮಲಗಿರುವಾಗ, ದೇಹದ ಕೆಳಭಾಗಗಳಿಂದ ರಕ್ತವು ಸರಿಯಾಗಿ ಶ್ವಾಸಕೋಶವನ್ನು ತಲುಪುವುದಿಲ್ಲ, ಇದರಿಂದಾಗಿ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆ ಕಂಡು ಬರುತ್ತೆ.

ಕಾಲುಗಳಲ್ಲಿ ಊತ
ಪಾದಗಳ ಊತವು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿರಬಹುದು. ನಿಮ್ಮ ಪಾದಗಳಲ್ಲಿ ಊತವು ಸಂಜೆ ಅಥವಾ ರಾತ್ರಿ ಹೆಚ್ಚಾದರೆ ಮತ್ತು ಬೆಳಿಗ್ಗೆ ಕಡಿಮೆಯಾದರೆ, ಅದು ಮೂತ್ರಪಿಂಡದ ಕಾಯಿಲೆಗಳಿಂದಾಗಿರಬಹುದು. ಇದು ಮುಖ್ಯವಾಗಿ ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಅಥವಾ ಗ್ಲೋಮೆರುಲೋನೆಫ್ರಿಟಿಸ್ ಆಗಿರಬಹುದು, ಇದು ಔಷಧಿಗಳಿಂದ ಉಂಟಾಗುವ ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿದೆ.

click me!