ನೀವು ಸಸ್ಯಹಾರಿಯಾಗಿದ್ದು (vegetarian), ಮಸಲ್ ಬಿಲ್ಡ್ ಮಾಡಲು ಬಯಸಿದ್ರೆ ಮಿಸ್ ಮಾಡದೇ ಈ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಇವು ಯಾವುದೇ ನಾನ್ ವೆಜ್ ಆಹಾರ ಅಲ್ಲ, ಗ್ರಿಲ್ಡ್ ಚಿಕನ್ ಬದಲಾಗಿ, ನೀವು ಈ ಯಾವುದೇ ವೆಜಿಟೇರಿಯನ್ ಆಹಾರ ಸೇವಿಸಿ…
ತೋಫು (Tofu): ತೋಫು ಅಥವಾ ಪನೀರ್ ನಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇದೆ. ಇದರಲ್ಲಿರುವ ಅಮಿನೋ ಆಸಿಡ್ ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ. ನೀವು ಇದನ್ನ ನಿಯಮಿತವಾಗಿ ಸೇವಿಸಬಹುದು.
ದವಸ ಧಾನ್ಯಗಳು (lentil): ಬೇಯಿಸಿದ ಒಂದು ಕಪ್ ದವಸ ಧಾನ್ಯಗಳಲ್ಲಿ ಸುಮಾರು 18 ಗ್ರಾಂ ಹೈ ಪ್ರೋಟೀನ್ ಇದೆ. ಜೊತೆಗೆ ಇದರಲ್ಲಿರುವ ಫೈಬರ್ ಮತ್ತು ಐರನ್ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ.
ಖ್ವಿನೋವಾ (Quinoa): ಒಂದು ಕಪ್ ಖ್ವಿನೋವಾದಲ್ಲಿ ಸುಮಾರು 8 ಗ್ರಾಂ ಪ್ರೊಟೀನ್ ಇದೆ. ಇದರಲ್ಲಿರುವ ಅಮೈನೋ ಆಸಿಡ್ ಮತ್ತು ಫೈಬರ್ ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತೆ.
ನಟ್ಸ್: ಬಾದಾಮಿ ಮತ್ತು ಶೇಂಗಾ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಇದೆ. ಒಂದೊಂದೇ ಬೀಜದಲ್ಲಿ ಸುಮಾರು 6 ಗ್ರಾಂನಷ್ಟು ಪ್ರೋಟೀನ್ ಇದೆ. ಇದರಲ್ಲಿರುವ ಆರೋಗ್ಯಕರ ಫ್ಯಾಟ್ ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತೆ.
ಪಾಲಕ್ (spinach): ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ ಸುಮಾರು 5 ಗ್ರಾಂ ಪ್ರೊಟೀನ್ ಇದೆ. ಇದರಲ್ಲಿರುವ ವಿಟಾಮಿನ್ ಮತ್ತು ಐರನ್ ನಿಮ್ಮನ್ನು ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತದೆ.
ಬಿಳಿ ಕಡ್ಲೆ: ಒಂದು ಕಪ್ ಬೇಯಿಸಿದ ಕಡ್ಲೆಯಲ್ಲಿ ಸುಮಾರು 15 ಗ್ರಾಂ ಪ್ರೋಟೀನ್ ಇದೆ. ಇದರಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಕೂಡ ಇದೆ. ಇದರಿಂದ ನೀವು ಮತ್ತಷ್ಟು ಸ್ಟ್ರಾಂಗ್ ಆಗಬಹುದು.