ದೇಸಿ ಕಪ್ಪು ಕಡಲೆ (Black chana) ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ. ಇದು ಫೈಬರ್ (Fibre), ಕ್ಯಾಲ್ಸಿಯಂ (Calcium), ಪ್ರೋಟೀನ್ (Proteins), ಜೀವಸತ್ವಗಳು (Vitamins) ಮತ್ತು ಖನಿಜಗಳ (Minierals) ಉತ್ತಮ ಮೂಲವಾಗಿದೆ. ತಜ್ಞರ ಪ್ರಕಾರ, ತುಂಬಾ ಅಗ್ಗವಾಗಿರುವುದರಿಂದ, ಕಡು ಬಡವರು ಇದನ್ನು ತಿನ್ನಬಹುದು ಮತ್ತು ಬಾದಾಮಿಯ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಹುರಿಯುವುದು, ಸಾರು ತಯಾರಿಸೋದು, ಹಸಿಯಾಗಿ , ಅಥವಾ ಮೊಳಕೆಯೊಡೆದ ಕಡಲೆ ತಿನ್ನೋದು ಮತ್ತು ಕಡಲೆಯನ್ನು ನೀರಿನಲ್ಲಿ ನೆನೆಸಿ ಸಹ ತಿನ್ನಬಹುದು.