ಸುಂದರವಲ್ಲ, ಸಾವಿನ ಆಭರಣಗಳು.. ಆನ್‌ಲೈನ್‌ನಲ್ಲಿ ಜ್ಯುವೆಲರಿ ಕೊಳ್ಳೊ ಮುನ್ನ ಹುಷಾರ್!

Published : Jul 28, 2026, 12:51 PM IST

Toxic Fashion Jewelry: ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಸಿಗುವ ಆಭರಣಗಳ ಮೇಲೆ ನಿಮಗೆ ವ್ಯಾಮೋಹವೇ? ಹಾಗಿದ್ದರೆ ಹುಷಾರ್! ಅಗ್ಗದ ಬೆಲೆಯ ಬೆಳ್ಳಿ ಮತ್ತು ಫ್ಯಾಷನ್ ಆಭರಣಗಳಲ್ಲಿ ಕ್ಯಾನ್ಸರ್ ಉಂಟುಮಾಡುವ 'ಕ್ಯಾಡ್ಮಿಯಂ' ಲೋಹವು ಮಿತಿಮೀರಿ ಇರುವುದು ಸಂಶೋಧನೆಯಲ್ಲಿ ಪತ್ತೆಯಾಗಿದೆ.

PREV
16
ಎಚ್ಚರಿಸಿದ ತಜ್ಞರು

ಎಚ್ಚರಿಸಿದ ತಜ್ಞರು 
ಆನ್‌ಲೈನ್‌ನಲ್ಲಿ ಅಗ್ಗದ ದರದಲ್ಲಿ ಮಾರಾಟವಾಗುತ್ತಿರುವ ಬೆಳ್ಳಿ ಮತ್ತು ಫ್ಯಾಷನ್ ಆಭರಣಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಕ್ಯಾಡ್ಮಿಯಂ' (Cadmium) ಲೋಹವು ಅಪಾಯಕಾರಿ ಮಟ್ಟದಲ್ಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಕೆಲವು ಆಭರಣಗಳಲ್ಲಿ ಕಾನೂನುಬದ್ಧ ಮಿತಿಗಿಂತ 9,000 ಪಟ್ಟು ಹೆಚ್ಚು ಕ್ಯಾಡ್ಮಿಯಂ ಇರುವುದು ಪತ್ತೆಯಾಗಿದೆ. ಇದು ವಿಶೇಷವಾಗಿ ಮಕ್ಕಳಿಗೆ ತೀವ್ರ ಆರೋಗ್ಯದ ಅಪಾಯವನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

26
ಗ್ರಾಹಕರಲ್ಲಿ ಆತಂಕ

ಗ್ರಾಹಕರಲ್ಲಿ ಆತಂಕ
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಅಗ್ಗದ ಬೆಳ್ಳಿಯ ಆಭರಣಗಳಲ್ಲಿ ಕ್ಯಾನ್ಸರ್ ಕಾರಕ ಕ್ಯಾಡ್ಮಿಯಂ 9,000 ಪಟ್ಟು ಹೆಚ್ಚಿದೆ ಎಂಬ ಆಘಾತಕಾರಿ ಸತ್ಯ ಹೊರಬಂದಿದೆ. ಸುಂದರವಾಗಿ ಕಾಣುವ ಈ ನಕಲಿ ಆಭರಣಗಳು ಗ್ರಾಹಕರ ಜೀವಕ್ಕೆ ಸಂಚಕಾರ ತರುತ್ತಿವೆ. ಬ್ರಿಟಿಷ್ ಪತ್ರಿಕೆ 'ದಿ ಸಂಡೇ ಟೈಮ್ಸ್' ನಡೆಸಿದ ತನಿಖೆಯಲ್ಲಿ, ಇ-ಕಾಮರ್ಸ್ ತಾಣಗಳಲ್ಲಿ ಮಾರಾಟವಾಗುವ ಕೆಲವು ಬೆಳ್ಳಿ ಆಭರಣಗಳಲ್ಲಿ ಕ್ಯಾಡ್ಮಿಯಂ ಅಪಾಯಕಾರಿ ಪ್ರಮಾಣದಲ್ಲಿದೆ ಎಂದು ತಿಳಿದುಬಂದಿದೆ. ಈ ವಿಷಯ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

36
9,000 ಪಟ್ಟು ಹೆಚ್ಚು ಕ್ಯಾಡ್ಮಿಯಂ ಪತ್ತೆ

9,000 ಪಟ್ಟು ಹೆಚ್ಚು ಕ್ಯಾಡ್ಮಿಯಂ ಪತ್ತೆ
ಸಂಶೋಧನೆಯ ಭಾಗವಾಗಿ '925 ಸ್ಟರ್ಲಿಂಗ್ ಸಿಲ್ವರ್' ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಕೆಲವು ಉಂಗುರಗಳನ್ನು ಪರೀಕ್ಷಿಸಿದಾಗ, ಅವುಗಳಲ್ಲಿ ಶೇ. 92.3 ರಷ್ಟು ಕ್ಯಾಡ್ಮಿಯಂ ಇರುವುದನ್ನು ಬರ್ಮಿಂಗ್‌ಹ್ಯಾಮ್ ಅಸ್ಸೇ ಆಫೀಸ್ (Birmingham Assay Office) ಖಚಿತಪಡಿಸಿದೆ. ಕಾನೂನುಬದ್ಧವಾಗಿ ಈ ಲೋಹದ ಗರಿಷ್ಠ ಮಿತಿ ಕೇವಲ ಶೇ. 0.01 ರಷ್ಟು ಮಾತ್ರ ಇರಬೇಕು. ಅಂದರೆ ಅನುಮತಿಸಲಾದ ಮಟ್ಟಕ್ಕಿಂತ ಸುಮಾರು 9,000 ಪಟ್ಟು ಹೆಚ್ಚು ಕ್ಯಾಡ್ಮಿಯಂ ಇರುವುದು ಪತ್ತೆಯಾಗಿದೆ.

46
ಫ್ಯಾಷನ್ ಚೈನ್‌ಗಳಲ್ಲಿಯೂ ಶೇ. 33 ರಷ್ಟು ಕ್ಯಾಡ್ಮಿಯಂ

ಫ್ಯಾಷನ್ ಚೈನ್‌ಗಳಲ್ಲಿಯೂ ಶೇ. 33 ರಷ್ಟು ಕ್ಯಾಡ್ಮಿಯಂ
ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾ ಜಾಹೀರಾತುಗಳು ಮತ್ತು ರೀಲ್ಸ್ ಮೂಲಕ ಜನಪ್ರಿಯವಾಗಿರುವ ಕೆಲವು ಫ್ಯಾಷನ್ ಚೈನ್‌ಗಳಲ್ಲಿಯೂ ಶೇ. 33 ರಷ್ಟು ಕ್ಯಾಡ್ಮಿಯಂ ಇರುವುದು ಪತ್ತೆಯಾಗಿದೆ. ಇದು ಕೂಡ ನಿಗದಿತ ಮಿತಿಗಿಂತ ಸುಮಾರು 3,300 ಪಟ್ಟು ಹೆಚ್ಚು. ಈ ವಿವರಗಳು ಬೆಳಕಿಗೆ ಬಂದ ತಕ್ಷಣ, ಸಂಬಂಧಿತ ಇ-ಕಾಮರ್ಸ್ ಸಂಸ್ಥೆಗಳು ಆ ಉತ್ಪನ್ನಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಿವೆ ಎಂದು ವರದಿಯಾಗಿದೆ.

56
ಮಕ್ಕಳಿಗೇ ಅಪಾಯ ಹೆಚ್ಚು

ಮಕ್ಕಳಿಗೇ ಅಪಾಯ ಹೆಚ್ಚು
ವೈದ್ಯಕೀಯ ತಜ್ಞರ ಪ್ರಕಾರ, ಕ್ಯಾಡ್ಮಿಯಂ ಅತ್ಯಂತ ಅಪಾಯಕಾರಿ ಲೋಹಗಳಲ್ಲಿ ಒಂದಾಗಿದೆ. ಇದು ದೇಹದಲ್ಲಿ ಕ್ರಮೇಣ ಸಂಗ್ರಹವಾಗುತ್ತಾ ಹೋಗಿ ಮೂತ್ರಪಿಂಡ (Kidney), ಯಕೃತ್ತು (Liver), ಶ್ವಾಸಕೋಶಗಳನ್ನು ಹಾನಿಗೊಳಿಸುವುದಲ್ಲದೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸಣ್ಣ ಮಕ್ಕಳು ಇಂತಹ ಆಭರಣಗಳನ್ನು ಬಾಯಿಗೆ ಹಾಕಿಕೊಳ್ಳುವುದು ಅಥವಾ ದೀರ್ಘಕಾಲ ಧರಿಸುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

66
ಸುಂದರವಾಗಿ ಕಾಣುವ ಎಲ್ಲಾ ಆಭರಣಗಳು ಸುರಕ್ಷಿತವಲ್ಲ

ಸುಂದರವಾಗಿ ಕಾಣುವ ಎಲ್ಲಾ ಆಭರಣಗಳು ಸುರಕ್ಷಿತವಲ್ಲ
ಭಾರತದಲ್ಲೂ ಆನ್‌ಲೈನ್ ಮೂಲಕ ಫ್ಯಾಷನ್ ಆಭರಣಗಳ ಖರೀದಿ ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಚಿನ್ನದ ಆಭರಣಗಳನ್ನು ಖರೀದಿಸುವಾಗ 'ಬಿಐಎಸ್ (BIS) ಹಾಲ್‌ಮಾರ್ಕ್' ಅನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬೆಳ್ಳಿ ಅಥವಾ ಫ್ಯಾಷನ್ ಆಭರಣಗಳನ್ನು ಖರೀದಿಸುವ ಮುನ್ನ ಮಾರಾಟಗಾರರ ವಿಶ್ವಾಸಾರ್ಹತೆ, ಉತ್ಪನ್ನದ ವಿವರಗಳು ಮತ್ತು ಗುಣಮಟ್ಟದ ಪ್ರಮಾಣೀಕರಣದಂತಹ ಅಂಶಗಳನ್ನು ಗಮನಿಸಬೇಕು. ಕಡಿಮೆ ಬೆಲೆಗೆ ಸುಂದರವಾಗಿ ಕಾಣುವ ಎಲ್ಲಾ ಆಭರಣಗಳು ಸುರಕ್ಷಿತವಲ್ಲ ಎಂಬುದನ್ನು ನೆನಪಿಡಿ. ಆರೋಗ್ಯದ ದೃಷ್ಟಿಯಿಂದ ಬೆಲೆಗಿಂತ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories