Fenugreek Water: 21 ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದು ನೋಡಿ, ಎಲ್ಲ ಸಮಸ್ಯೆಗೆ ಮನೆಯಲ್ಲೇ ಮದ್ದು

Published : Jul 27, 2026, 01:24 PM IST

ಮೆಂತ್ಯೆ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಅದು ಕಹಿ ಎನ್ನುವ ಕಾರಣಕ್ಕೆ ಜನರು ಇದ್ರಿಂದ ದೂರ ಓಡ್ತಾರೆ. ಆದ್ರೆ ಪ್ರತಿ ದಿನ ಮೆಂತ್ಯೆ ನೀರು ಸೇವನೆ ಮಾಡೋದ್ರಿಂದ ಸಾಕಷ್ಟು ಪ್ರಯೋಜನ ಇದೆ.

PREV
16
ಮೆಂತ್ಯೆ ನೀರು

ತಜ್ಞರ ಪ್ರಕಾರ, ಮೆಂತ್ಯೆಯ ಸಂಪೂರ್ಣ ಪ್ರಯೋಜನ ಪಡೆಯಲು ಸರಿಯಾದ ರೀತಿಯಲ್ಲಿ ಅದನ್ನು ಸೇವಿಸಬೇಕು. ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ನೀರಿಗೆ ಒಂದು ಚಮಚ ಮೆಂತ್ಯೆ ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಮೊದಲು ಆ ನೀರನ್ನು ಕುಡಿಯಿರಿ. ನಂತರ ಉಳಿದಿರುವ ಮೆಂತ್ಯೆ ಕಾಳುಗಳನ್ನು ಚೆನ್ನಾಗಿ ಜಗಿದು ತಿನ್ನಿ.

26
ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಮೆಂತ್ಯೆ ದೇಹದಲ್ಲಿ ಇನ್ಸುಲಿನ್ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ಮಧುಮೇಹಿಗಳಿಗೆ ಇದು ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ.

36
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ

ಮೆಂತ್ಯೆಯಲ್ಲಿರುವ ನಾರಿನಾಂಶವು LDL (ಕೆಟ್ಟ ಕೊಲೆಸ್ಟ್ರಾಲ್) ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಹೃದಯ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

46
ಜೀರ್ಣಕ್ರಿಯೆ ಸುಧಾರಣೆ

ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಇದ್ದರೆ ಮೆಂತ್ಯೆ ನೀರನ್ನು ಕುಡಿಯುತ್ತ ಬನ್ನಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

56
ತೂಕ ಇಳಿಕೆಗೆ ನೆರವು

ಮೆಂತ್ಯೆಯಲ್ಲಿ ಫೈಬರ್ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಇರುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

66
ದೇಹದ ಡಿಟಾಕ್ಸ್ಗೆ ಸಹಾಯ

ಬೆಳಿಗ್ಗೆ ಮೆಂತ್ಯೆ ನೀರು ಕುಡಿಯುವುದರಿಂದ ದೇಹದ ಸಹಜ ಡಿಟಾಕ್ಸ್ ಪ್ರಕ್ರಿಯೆಗೆ ನೆರವಾಗುತ್ತದೆ. ದೇಹದಲ್ಲಿರುವ ವಿಷ ಹೊರಗೆ ಹೋಗುವುದ್ರಿಂದ ಚರ್ಮದ ಆರೋಗ್ಯಕ್ಕೂ ಪರೋಕ್ಷ ಲಾಭ ಸಿಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories