ಈ ರೀತಿ ಸೈಕ್ಲಿಂಗ್ ಮಾಡಿದ್ರೆ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ!

First Published | Nov 10, 2022, 4:48 PM IST

ನಾವು ಮಕ್ಕಳಾಗಿದ್ದಾಗ ಸಾಕಷ್ಟು ಆಕ್ಟಿವಿಟೀಸ್  ಮಾಡುತ್ತಿದ್ದೆವು ಮತ್ತು ಆಟಗಳನ್ನು ಸಹ ಆಡುತ್ತಿದ್ದೆವು. ಸ್ನೇಹಿತರೊಂದಿಗೆ ಸೈಕ್ಲಿಂಗ್ ಗೆ ಹೋಗುತ್ತಿದ್ವಿ. ಆ ಸಮಯದಲ್ಲಿ, ನಮಗೆ ಸೈಕಲ್ ಸೀಟಿನ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ನಾವು ನಮ್ಮ ಪಾದಗಳನ್ನು ಸೈಕಲ್ ನ ಮಧ್ಯದಿಂದ ಪೆಡಲ್ ಗೆ ಕಾಲಿಡೋ ಮೂಲಕ ಸೈಕಲ್ ಸವಾರಿ ಮಾಡುತ್ತಿದ್ವಿ ಅಲ್ವಾ? ಆದರೆ ಈಗ ಸೈಕಲ್ ಮುಟ್ಟೋಕು ನಮ್ ಬಳಿ ಟೈಮ್ ಇರೋದಿಲ್ಲ. ಸೈಕಲಿಂಗ್ ಮಾಡೋದರಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?.

ಸೈಕ್ಲಿಂಗ್(Cycling) ತುಂಬಾ ಮಜವಾಗಿರುತ್ತೆ. ಕೇವಲ ಮಕ್ಕಳು ಮಾತ್ರವಲ್ಲ, ದೊಡ್ಡವರು ಸಹ  ಸೈಕಲ್ ಸವಾರಿ ಮಾಡುತ್ತಾರೆ ಮತ್ತು ಸೈಕ್ಲಿಂಗ್ ಅನ್ನು ಪ್ರೀತಿಸುತ್ತಾರೆ. ಈಗಲೂ ಕೆಲವರು ಪ್ರತಿದಿನ ಸೈಕಲ್ ನಲ್ಲಿ ಜಿಮ್, ಮಾರ್ಕೆಟ್ ಅಥವಾ ಇತರ ಸ್ಥಳಗಳಿಗೆ ಹೋಗಲು ಇಷ್ಟಪಡುತ್ತಾರೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.

ಸೈಕ್ಲಿಂಗ್ ನಿಂದ ಅನೇಕ ಪ್ರಯೋಜನಗಳಿವೆ. ಅವುಗಳಂದ್ರೆ 
ಹೃದಯದ ಆರೋಗ್ಯವು ಉತ್ತಮವಾಗಿರುತ್ತೆ 
ತೂಕ ನಿಯಂತ್ರಣದಲ್ಲಿರುತ್ತೆ 
ಟೈಪ್ 2 ಮಧುಮೇಹವನ್ನು(Diabetes) ನಿಯಂತ್ರಿಸಬಹುದು 
ಸ್ನಾಯುಗಳು ಬಲವಾಗುತ್ತೆ 
ಬಾಡಿ ಟೋನ್ ಲೊ ಆಗುತ್ತೆ 
ಸಂಧಿವಾತ ಕಡಿಮೆಯಾಗುತ್ತೆ ಇತ್ಯಾದಿ.

Latest Videos


ಕರೋನಾ(Corona) ಕಾಲದಿಂದ, ಸೋಂಕಿನ ಅಪಾಯದಿಂದಾಗಿ ಅನೇಕ ಜನರು ಜಿಮ್ ಗೆ ಹೋಗೋದನ್ನು ತಪ್ಪಿಸುತ್ತಿದ್ರು. ಈ ಕಾರಣದಿಂದಾಗಿ, ಫಿಟ್ನೆಸ್ ಮಟ್ಟವು ಕಡಿಮೆಯಾಗಿತ್ತು. ಆದರೆ, ಅದೇ ಸಮಯದಲ್ಲಿ, ಕೆಲವು ಜನರು ದೈಹಿಕ ಚಟುವಟಿಕೆಗಾಗಿ ಸೈಕ್ಲಿಂಗ್ ಮಾಡುತ್ತಿದ್ದರು.  ಕೆಲವು ಜನರು ಮನೆಯಲ್ಲಿ ಇಂಡೋರ್ ಸೈಕ್ಲಿಂಗ್ ಮಾಡುತ್ತಿದ್ದರೆ, ಕೆಲವರು ಔಟ್ ಡೋರ್ ಸೈಕ್ಲಿಂಗ್ ಮಾಡುತ್ತಿದ್ದರು.

ಸೈಕಲ್(Cycle) ಮಾರ್ಕೆಟ್ ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಬೆಳೆದಿದೆ. ಈ ಕಾರಣದಿಂದಾಗಿ, ಜನರು ದುಬಾರಿ ಬೈಸಿಕಲ್ ಗಳನ್ನು ಖರೀದಿಸುತ್ತಿದ್ದಾರೆ. ಆದರೆ ದುಬಾರಿ ಬೈಸಿಕಲ್ ಗಳ ಬದಲಿಗೆ, ಗುರಿಗೆ ಅನುಗುಣವಾಗಿ ಸರಿಯಾದ ಬೈಸಿಕಲ್ ಖರೀದಿಸುವ ಅಗತ್ಯವಿದೆ. ದುಬಾರಿ ಸೈಕಲ್ ಖರೀದಿಸಿದರೆ ಅದರಿಂದ ನಿಮಗೆ ಬೇಕಾದ ರೀತಿ ಅದನ್ನು ಬಳಸಲು ಸಾಧ್ಯವಿಲ್ಲ.

ನೀವು ಸೈಕ್ಲಿಂಗ್ ಮೂಲಕ ಸದೃಢವಾಗಿರಲು ಬಯಸಿದರೆ, ಇಲ್ಲಿ ಕೆಲವು ಟಿಪ್ಸ್ ಹೇಳಲಾಗಿದೆ . ಅವುಗಳನ್ನು ಅನುಸರಿಸುವ ಮೂಲಕ, ನೀವು ಸೈಕ್ಲಿಂಗ್ ಆನಂದಿಸಲು ಸಾಧ್ಯವಾಗುತ್ತೆ ಮತ್ತು ಇದು ಸಾಕಷ್ಟು ಪ್ರಯೋಜನಗಳನ್ನು(Benefits) ಸಹ ಹೊಂದಿರುತ್ತೆ.  ಹಾಗಿದ್ರೆ ನೀವು ಯಾವೆಲ್ಲಾ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಅನ್ನೋದನ್ನು ನೋಡೋಣ. 

ಗುರಿ (Goal)
ಸೈಕ್ಲಿಂಗ್ ಗೆ ಮೊದಲು ತೆಗೆದುಕೊಳ್ಳಬೇಕಾದ ಮೊದಲ ನಿರ್ಧಾರ ಗುರಿ. ಗುರಿ ನಿರ್ಧರಿಸೋದು ಏಕಾಗ್ರತೆ ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತೆ. ಆದರೆ ನೆನಪಿನಲ್ಲಿಡಿ, ಆರಂಭದಲ್ಲಿ ಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ. ಮೊದಲ ದಿನ 10 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಗುರಿ ಹೊಂದಿದ್ದರೆ ಅದು ಕಷ್ಟಕರವಾಗಿರುತ್ತೆ. ಇದನ್ನು ಮಾಡೋದರಿಂದ, ನೀವು ಡೆಮೋಟಿವೇಟ್ ಆಗುತ್ತೀರಿ. ಬದಲಾಗಿ, ಪ್ರತಿದಿನ ಸ್ವಲ್ಪ ಸ್ವಲ್ಪ ದೂರವನ್ನು ಹೆಚ್ಚಿಸುವ ಮೂಲಕ ದೊಡ್ಡ ಗುರಿ ತಲುಪಿ. ಸಣ್ಣ ತರಬೇತಿ ಸೆಷನ್ಸ್ ದೀರ್ಘ ಸೆಷನ್ ಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.

ಟೈಮ್  (Time)
18 ರಿಂದ 64 ವರ್ಷ ವಯಸ್ಸಿನ ವಯಸ್ಕರು ಫಿಟ್ ಆಗಿರಲು ಪ್ರತಿ ವಾರ 2 ರಿಂದ 2.5 ಗಂಟೆಗಳ ಕಾಲ ಮಧ್ಯಮ ತೀವ್ರತೆಯೊಂದಿಗೆ ವ್ಯಾಯಾಮ ಮಾಡಬೇಕು. ಆದರೆ ನೀವು ಸೈಕ್ಲಿಂಗ್ ಮಾಡುತ್ತಿದ್ದರೆ, ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷ ಮಾಡಬೇಕು. ಫಿಟ್ ಆಗಿ ಉಳಿಯೋದು ನಿಮ್ಮ ಗುರಿಯಾಗಿದ್ದರೆ, ಪ್ರತಿ ವಾರ ಮೂರು ಬಾರಿ ಸೈಕ್ಲಿಂಗ್ ಮಾಡಿ. ಸೈಕ್ಲಿಂಗ್ ನ ದೂರ ಮತ್ತು ಸೈಕ್ಲಿಂಗ್ ನ ಟೈಮ್ ಸ್ವಲ್ಪ ಸಮಯದ ನಂತರ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಶಕ್ತಿಯನ್ನು ಉಳಿಸಿ 
ನೀವು ಸೈಕ್ಲಿಂಗ್ ಮಾಡಲು ಪ್ರಾರಂಭಿಸಿದಾಗ, ಕೆಲವು ಸಮಯದವರೆಗೆ ಕಾಲುಗಳಲ್ಲಿ ನೋವಿರೋಲ್ಲ. ಆದರೆ ದೂರ ಹೆಚ್ಚಾದಂತೆ, ಪಾದಗಳಲ್ಲಿ ಭಾರ ಬರಲು ಪ್ರಾರಂಭವಾಗುತ್ತೆ. ಆದ್ದರಿಂದ, ಹೆಚ್ಚು ಎತ್ತರದ(Height) ಮಾರ್ಗ, ಹಂಪ್ಸ್ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಸೈಕ್ಲಿಂಗ್ ಮಾಡುವ ಬದಲು ನೇರವಾದ ರಸ್ತೆಗಳಲ್ಲಿ ಸೈಕ್ಲಿಂಗ್ ಮಾಡಿ.
 

ನೆಚ್ಚಿನ ಪ್ಲೇಸ್ (Favourite place)ಹುಡುಕಿ 
ಕೆಲವರು ಗುಡ್ಡಗಾಡು ಸ್ಥಳಗಳನ್ನು ಇಷ್ಟಪಡುತ್ತಾರೆ, ಕೆಲವರು ಮಾಲ್ ಮತ್ತು ಮಾರ್ಕೆಟ್ ಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಹಾಗಾಗಿ, ಬೆಟ್ಟದ ಪ್ರದೇಶದಲ್ಲಿ ತಿರುಗಾಡಲು ಇಷ್ಟಪಡುವವರನ್ನೂ ಮಾಲ್ ಗೆ ಕರೆದೊಯ್ಯಲು ಮತ್ತು ಸುತ್ತಾಡಲು ಕೇಳಿದರೆ ಅವನಿಗೆ ಹೇಗೆ ಅನಿಸ್ಬಹುದು? ಆತ ಮಾಲ್ ನಲ್ಲಿ ಸುತ್ತಾಡುತ್ತಾನೆ, ಆದರೆ ಆನಂದಿಸಲು ಸಾಧ್ಯವಾಗೋದಿಲ್ಲ. ಸೈಕ್ಲಿಂಗ್ ಮಾಡುವಾಗ ಇದೇ ರೀತಿ ಆಗುತ್ತೆ. ಸೈಕ್ಲಿಂಗ್ ನ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಬಯಸೋದಾದ್ರೆ, ನಿಮ್ಮ ನೆಚ್ಚಿನ ಸ್ಥಳವನ್ನು ಆಯ್ಕೆ ಮಾಡಿ.  ನೆಚ್ಚಿನ ಸ್ಥಳಕ್ಕೆ ಸೈಕ್ಲಿಂಗ್ ಗೆ ಹೋದರೆ, ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗುತ್ತೆ.

ಈ ರೀತಿಯ ಆಹಾರ(Food) ಆಯ್ಕೆ ಮಾಡಿ
ಸೈಕ್ಲಿಂಗ್ ನಂತರ ಸ್ನಾಯುಗಳು ಚೇತರಿಸಿಕೊಳ್ಳಬೇಕು. ಸೈಕ್ಲಿಂಗ್ ನಂತರ, ಪಾದಗಳಲ್ಲಿ ಸ್ವೇಲ್ಲಿಂಗ್ ಸಂಭವಿಸುತ್ತೆ, ಇದು ಸ್ನಾಯುಗಳ ಬಳಕೆಯಿಂದ ಉಂಟಾಗುತ್ತೆ. ತರಬೇತಿಯ ನಂತರ ನೀವು ಸರಿಯಾದ ಆಹಾರ ತೆಗೆದುಕೊಂಡರೆ, ಅದು ಸ್ನಾಯು ನೋವನ್ನು ತೆಗೆದುಹಾಕಲು ಸಹಾಯ ಮಾಡುತ್ತೆ.

ಸೈಕ್ಲಿಂಗ್ ನ ಹೆಚ್ಚಿನ ಪ್ರಯೋಜನ ಪಡೆಯಲು, ಆನ್ ಸ್ಯಾಚುರೇಟೆಡ್ ಫ್ಯಾಟ್(Unsaturated fat) ಸೇವಿಸೋದನ್ನು ನಿಲ್ಲಿಸಬೇಕು. ಆದ್ದರಿಂದ, ರೂಮ್ ಟೆಂಪರೇಚರ್ ನಲ್ಲಿ ದ್ರವವಾಗಿರುವ (ಆಲಿವ್ ಎಣ್ಣೆ, ಬೀಜಗಳು, ಇತ್ಯಾದಿ) ಮೋನೋ ಅನ್ ಸ್ಯಾಚುರೇಟೆಡ್ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು ಸೇವಿಸಬೇಕು. 

ದೇಹವು ಒಮ್ಮೆಗೆ 20-25 ಗ್ರಾಂ ಪ್ರೋಟೀನ್ ಮಾತ್ರ ಹೀರಿಕೊಳ್ಳಬಲ್ಲದು, ಆದ್ದರಿಂದ ಸೈಕ್ಲಿಂಗ್ ನಂತರ ಪ್ರೋಟೀನ್(Protein) ಭರಿತ ಆಹಾರ ತೆಗೆದುಕೊಳ್ಳಿ. ಸೈಕ್ಲಿಂಗ್ ನಂತರ 20-25 ಗ್ರಾಂ ಪ್ರೋಟೀನ್ ಸೇವಿಸಲು ಪ್ರಯತ್ನಿಸಿ. ಇದು ಸ್ನಾಯುಗಳ ಚೇತರಿಕೆ, ಕಡಿಮೆ ನೋವು ಮತ್ತು ಕೊಬ್ಬು ಕಡಿಮೆಯಾಗಲು ಕಾರಣವಾಗುತ್ತೆ. ಇದಲ್ಲದೆ, ಡ್ರೈ ಫಿಟ್ ಡ್ರೆಸ್ ಧರಿಸಿ, ಶೂಗಳನ್ನು ಧರಿಸಿ, ಸೈಕಲ್ಲು  ಸೀಟ್ ಸರಿಯಾಗಿ ಹೊಂದಿಸಿ, ಬ್ರೇಕ್ ಗಳನ್ನು ಪರಿಶೀಲಿಸಿ,  ಎಲ್ಲವೂ ಸರಿಯಾಗಿದ್ದರೆ ನೀವು ಸೈಕ್ಲಿಂಗ್ ಆನಂದಿಸಲು ಸಾಧ್ಯವಾಗುತ್ತೆ, ಇದು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತೆ.

click me!