B 12 ವಿಟಮಿನ್ ಕೊರತೆಯಿಂದ ಹೀಗೆಲ್ಲ ಆಗ್ಬೋದು, ಎಚ್ಚರಿಕೆ ವಹಿಸಿ

ವಿಟಮಿನ್ ಬಿ 12 ಕೊರತೆಯಿಂದ ದೇಹಾರೋಗ್ಯದಲ್ಲಿ ಭಾರೀ ಸಮಸ್ಯೆ ಉಂಟಾಗಬಹುದು. ಅದರ ಕೊರತೆಯಾದರೆ ಕೆಲವು ಸಾಮಾನ್ಯ ಲಕ್ಷಣಗಳು ಗೋಚರವಾಗುತ್ತವೆ. ಆಗ ನಿರ್ಲಕ್ಷ್ಯ ಮಾಡದರೆ ಆರೋಗ್ಯದ ಕಡೆಗೆ ಗಮನ ವಹಿಸಿ.
 

Vitamin B12 deficinecny is not good for health take care about it

ಆರೋಗ್ಯವಂತರಾಗಿರುವುದು ಎಲ್ಲರ ಬಯಕೆ. ಅದಕ್ಕಾಗಿಯೇ ಸಾಕಷ್ಟು ಉತ್ತಮ ಆಹಾರ ಸೇವನೆ, ವಿಚಾರ, ಚಿಂತನೆಗಳು ನಮ್ಮ ಜೀವನದ ಭಾಗವಾಗಬೇಕು ಎಂದು ಬಲ್ಲವರು ಹೇಳುತ್ತಾರೆ. ನಮ್ಮ ದೇಹದ ಆರೋಗ್ಯದಲ್ಲಿ ವಿಟಮಿನ್ ಗಳ ಪಾತ್ರ ಅಧಿಕ. ವಿಟಮಿನ್ ಗಳಲ್ಲೂ ಹಲವು ವಿಧ. ವಿಟಮಿನ್ ಬಿ 12 ಅಂತೂ ದೇಹಾರೋಗ್ಯಕ್ಕೆ ಭಾರೀ ಮುಖ್ಯ. ಹೀಗಾಗಿ, ವಿಟಮಿನ್ ಬಿ12 ಹೊಂದಿರುವ ಆಹಾರ ಸೇವನೆ ಮಾಡುವುದು ಅಗತ್ಯ. ಒಂದೊಮ್ಮೆ ದೇಹದಲ್ಲಿ ಇದರ ಕೊರತೆ ಉಂಟಾದರೆ ಹಲವಾರು ರೋಗಗಳನ್ನು ಆಹ್ವಾನ ಮಾಡಿದಂತಾಗುತ್ತದೆ. ಇನ್ನೂ ಗಂಭೀರ ಸಂಗತಿ ಎಂದರೆ, ತೀವ್ರ ಕೊರತೆಯಾದಲ್ಲಿ ಹಲವು ಅಂಗಗಳು ಕಾರ್ಯವನ್ನೇ ನಿಲ್ಲಿಸಿಬಿಡುತ್ತವೆ. ವಿಟಮಿನ್ ಬಿ12 ಕೊರತೆ ಆದಾಗ ನಮ್ಮ ದೇಹ ಹಲವು ಸಂದೇಶ ನೀಡುತ್ತಿರುತ್ತದೆ. ಆ ಸಮಯದಲ್ಲಿ ನಿರ್ಲಕ್ಷ್ಯ ಮಾಡದೆ ಗಮನ ಹರಿಸಬೇಕಾಗುತ್ತದೆ. ಇಂದಿನ ಗಡಿಬಿಡಿಯ ಜೀವನದಲ್ಲಿ ವಿಟಮಿನ್ ಬಿ12 ಕೊರತೆ ಒಂದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ದೇಶದಲ್ಲಿ ಕೋಟ್ಯಂತರ ಜನ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅಧ್ಯಯನಗಳ ಪ್ರಕಾರ, ಸುಮಾರು 47 ಕೋಟಿ ಜನ ಬಿ12 ವಿಟಮಿನ್ ಕೊರತೆ ಎದುರಿಸುತ್ತಿದ್ದಾರೆ. ಕೇವಲ ಶೇ.26 ಜನರ ದೇಹದಲ್ಲಿ ಇದರ ಮಟ್ಟ ಸರಿಯಾಗಿದೆ. 

ವಿಟಮಿನ್ ಬಿ12 (Vitamin B12) ಕೊರತೆ (Deficiency) ಸಾಮಾನ್ಯವಾಗಿರುವುದರಿಂದ ದೇಹದ ಮೇಲೆ ಅದರ ದುಷ್ಪರಿಣಾಮವಿಲ್ಲ ಎಂದೆನಿಸಬಹುದು. ಆದರೆ, ದೀರ್ಘಕಾಲದಿಂದ ಕೊರತೆ ಇದ್ದರೆ ದೇಹಕ್ಕೆ ಭಾರೀ ನಷ್ಟವಾಗುತ್ತದೆ. ಏಕೆಂದರೆ, ಬಿ12 ವಿಟಮಿನ್ ಕೆಂಪುರಕ್ತಕಣಗಳ (Red Blood Cells) ನಿರ್ಮಾಣ ಮತ್ತು ಡಿಎನ್ ಎ (DNA) ಸೃಷ್ಟಿಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ಅನೀಮಿಯಾ ಉಂಟಾಗುತ್ತದೆ. ಇದರಲ್ಲಿ ಬೇರ್ಯಾವುದೇ ವಿಟಮಿನ್ ಗಳಲ್ಲಿ ಕಂಡುಬರದ ಕೋಬಾಲ್ಟ್ (Cobalt) ಅಂಶವಿರುತ್ತದೆ. ಇದು ಕೆಂಪುರಕ್ತಕಣಗಳಿಗೆ ಅತ್ಯಗತ್ಯವಾಗಿದೆ. ಪುರುಷರು ದಿನಕ್ಕೆ 2.4 ಮೈಕ್ರೋಗ್ರಾಮ್ ಹಾಗೂ ಮಹಿಳೆಯರು 2.6 ಮೈಕ್ರೋಗ್ರಾಮ್ ಬಿ12 ವಿಟಮಿನ್ ಸೇವನೆ ಮಾಡುವುದು ಅಗತ್ಯ. ಇದು ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಸೇವಿಸುವ ಆಹಾರದಿಂದಲೇ ದೊರೆಯಬೇಕು. ಆದರೆ, ನಾವು ಸೇವಿಸುವ ಎಲ್ಲ ಆಹಾರದಲ್ಲೂ ಈ ಅಂಶ ಇಲ್ಲದಿರುವುದರಿಂದ ಕೊರತೆಯಾಗುವುದು ಅಧಿಕ. 

Vitamin B12 Deficiency: ತಲೆ, ಹೊಟ್ಟೆ ಸಮಸ್ಯೆಗೂ ಆಗುತ್ತೆ ಕಾರಣ

ಕೊರತೆಯಿಂದಾಗುವ ಸಮಸ್ಯೆಗಳು
•    ನರಮಂಡಲಕ್ಕೆ ಹಾನಿ (Nervous System)
•    ಡಿಎನ್ ಎ ರಚನೆಗೆ ಧಕ್ಕೆ
•    ಕೆಂಪುರಕ್ತಕಣಗಳ ಕೊರತೆ
•    ಚರ್ಮ (Skin), ಕಣ್ಣುಗಳಿಗೆ (Eye) ಹಾನಿ

ಬಿ12 ವಿಟಮಿನ್ ಕೊರತೆಯ ಸಾಮಾನ್ಯ ಲಕ್ಷಣಗಳು (Common Symptoms)
•    ಚರ್ಮದ ಬಣ್ಣ ಬದಲಾಗುವುದು, ಹಳದಿ (Yellow) ಬಣ್ಣಕ್ಕೆ ತಿರುಗುವುದು
•    ನಾಲಿಗೆಯಲ್ಲಿ ನೋವು (Pain) ಮತ್ತು ಬಣ್ಣ ಬದಲಾಗುವುದು
•    ಬಾಯಿಯಲ್ಲಿ ಹುಣ್ಣುಗಳು (Mouth Ulcer)
•    ದೃಷ್ಟಿಯಲ್ಲಿ ಸಮಸ್ಯೆ
•    ಒಂದು ರೀತಿಯ ಚಡಪಡಿಕೆ 
•    ಖಿನ್ನತೆ (Depression)


Womens Health Day History: ಮಹಿಳೆಯರನ್ನು ಕಾಡುತ್ತೆ ಈ ಪೋಷಕಾಂಶದ ಕೊರತೆ

ತಜ್ಞರ ಪ್ರಕಾರ, ವಿಟಮಿನ್ ಬಿ12 ಕೊರತೆ ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದು. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಇದರ ಕೊರತೆ ಹೆಚ್ಚು. ಸಸ್ಯಾಹಾರಿಗಳಿಗೆ (Vegetarians) ಸೂಕ್ತ ಪ್ರಮಾಣದಲ್ಲಿ ಬಿ12 ವಿಟಮಿನ್ ಲಭ್ಯವಾಗುವುದು ಸವಾಲಿನ ಸಂಗತಿಯಾಗಿರುತ್ತದೆ. ಬಾಯಿಯಲ್ಲಿ ಹುಣ್ಣುಗಳಾಗುವುದು ಇದರ ಕೊರತೆಯ ಅತಿ ಪ್ರಮುಖ ಲಕ್ಷಣವೆಂದು ಹೇಳಲಾಗಿದೆ. ಹೀಗಾಗಿ, ಬಾಯಿ ಹುಣ್ಣನ್ನು ನಿರ್ಲಕ್ಷಿಸದೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. 

ಅಧ್ಯಯನಗಳ ಪ್ರಕಾರ, ಮಿದುಳಿನ ಮೇಲೆ ಬಿ12 ವಿಟಮಿನ್ ಕೊರತೆ ಪರಿಣಾಮ ಬೀರುತ್ತದೆ. ಮರೆವಿನ ಸಮಸ್ಯೆ ಉಂಟಾಗಬಹುದು. ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಹೀಗಾಗಿ, ಇದರ ಕೊರತೆ ಇರುವವರು ಸಾಮಾನ್ಯವಾಗಿ ಚಡಪಡಿಕೆಯಿಂದ ಕೂಡಿರುತ್ತಾರೆ. ಖಿನ್ನತೆಯ ಸಮಸ್ಯೆಯೂ ಕಾಡಬಹುದು. ಹೀಗಾಗಿ, ಇಂತಹ ಯಾವುದೇ ಲಕ್ಷಣ ಕಂಡುಬಂದರೂ ವೈದ್ಯರನ್ನು ಭೇಟಿಯಾಗಿ, ಪರೀಕ್ಷೆ ಮಾಡಿಸಿಕೊಳ್ಳಿ. ಮೊಟ್ಟೆ (Egg), ಹಾಲಿನ ಉತ್ಪನ್ನ (Dairy Products), ಪನ್ನೀರ್, ಪಾಲಕ್ ಸೊಪ್ಪು, ಬೀಟ್ ರೂಟ್ (Beetroot) ಇತ್ಯಾದಿಗಳಲ್ಲಿ ವಿಟಮಿನ್ ಬಿ12 ಲಭ್ಯವಾಗುತ್ತದೆ. ಇವು ದೈನಂದಿನ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ.

Latest Videos
Follow Us:
Download App:
  • android
  • ios